ಸೆಮಿಫೈನಲ್‌ನಲ್ಲಿ ಭಾರತ ಎಡವಿದೆಲ್ಲಿ ಎಂದು ವಿವರಿಸಿದ ಗಂಗೂಲಿ!

ಮ್ಯಾಂಚೆಸ್ಟರ್, ಜುಲೈ 10: ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಪ್ರಶಸ್ತಿ ಫೇವರಿಟ್ ಭಾರತ ತಂಡ ಅಚ್ಚರಿ ಸೋಲುನುಭವಿಸಿದ್ದಕ್ಕೆ ನೈಜ ಕಾರಣ ಏನೆಂಬುದನ್ನು ಭಾರತದ ಮಾಜಿ ದಿಗ್ಗಜರಾದ ಸೌರವ್ ಗಂಗೂಲಿ ಮತ್ತು ವಿವಿಎಸ್ ಲಕ್ಷ್ಮಣ್ ವಿವರಿಸಿದ್ದಾರೆ.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ
ಪಂದ್ಯದಲ್ಲಿ ಆರಂಭದಲ್ಲೇ ಭಾರತ ತನ್ನ ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೆ.ಎಲ್ ರಾಹುಲ್ ವಿಕೆಟ್ ಕಳೆದುಕೊಂಡಿತ್ತು. ಈ ಸಂದರ್ಭದಲ್ಲಿ ದಿನೇಶ್ ಕಾರ್ತಿಕ್ ಮತ್ತು ಹಾರ್ದಿಕ್ ಪಾಂಡ್ಯ ಅವರನ್ನು ಕಳುಹಿಸಿ ಧೋನಿಯನ್ನು 7ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವಂತೆ ಮಾಡಿದ್ದೇ ಸೋಲಿಗೆ ಬಹುದೊಡ್ಡ ಕಾರಣ ಎಂದು ವಿವರಿಸಿದ್ದಾರೆ.
ಪಂದ್ಯದಲ್ಲಿ ಕಿವೀಸ್ ಪಡೆಯನ್ನು 239/8ಕ್ಕೆ ಕಟ್ಟಿಹಾಕಿದ ಭಾರತ ತಂಡ ಬಲಿಕ ಗುರಿ ಬೆನ್ನತ್ತಿ ಬ್ಯಾಟಿಂಗ್ ವೈಫಲ್ಯ ಅನುಭವಿಸುವ ಮೂಲಕ 49.3 ಓವರ್‌ಗಳಲ್ಲಿ 221 ರನ್‌ಗಳಿಗೆ ಆಲ್‌ಔಟ್ ಆಗುವ ಮೂಲಕ 18 ರನ್‌ಗಳಿಂದ ಸೋತು ಸ್ಪರ್ಧೆಯಿಂದ ಹೊರಬಿದ್ದಿತು.
"ಧೋನಿ ಪಾಂಡ್ಯಗಿಂತಲೂ ಮೊದಲೇ ಬ್ಯಾಟಿಂಗ್‌ಗೆ ಇಳಿಯಬೇಕಿತ್ತು. ಇದು ಟೀಮ್ ಇಂಡಿಯಾದ ತಂತ್ರಗಾರಿಕೆಯಲ್ಲಿ ಆದ ಬಹುದೊಡ್ಡ ತಪ್ಪು. ದಿನೇಶ್ ಕಾರ್ತಿಕ್‌ಗಿಂತಲು ಮೊದಲೇ ಧೋನಿ ಕಣಕ್ಕಿಳಿಯಬೇಕಿತ್ತು. ಧೋನಿ ಅವರ ಆಟಕ್ಕೆ ಅಖಾಡ ಸಿದ್ದವಾಗಿತ್ತು. 2011ರ ಫೈನಲ್‌ನಲ್ಲಿ ಧೋನಿ ತಮ್ಮ ಬ್ಯಾಟಿಂಗ್ ಕ್ರಮಾಂಕದಲ್ಲಿ ಮೇಲ್ಬಂದು ಯುವರಾಜ್ ಸಿಂಗ್ ಅವರಿಗಿಂತಲೂ ಮೊದಲೇ ಕಣಕ್ಕಿಳಿದಿದ್ದರು,'' ಎಂದು ಟೀಮ್ ಇಂಡಿಯಾ ಮಾಡಿಕೊಂಡ ಎಡವಟ್ಟನ್ನು ವಿವಿಎಸ್ ಲಕ್ಷ್ಮಣ್ ವಿವರಿಸಿದ್ದಾರೆ.
ಪಿಚ್‌ನ ಮತ್ತೊಂದು ತುದಿಯಲ್ಲಿ ಧೋನಿ ಇದ್ದರೆ ಯುವ ಆಟಗಾರರಿಗೆ ವಿಶ್ವಾಸ ಹೆಚ್ಚುತ್ತದೆ. ರಿಷಭ್ ಪಂತ್ ಉತ್ತಮವಾಗಿ ಆಡುತ್ತಿದ್ದರು. ಆದರೆ, ಅಗತ್ಯವಾಗಿ ವಿಕೆಟ್ ಒಪ್ಪಿಸಿದರು. ಪಂತ್ ವಿಕೆಟ್ ಪತನವಾಗುತ್ತಿದ್ದಂತೆಯೇ ವಿರಾಟ್ ಮತ್ತು ಕೋಚ್ ರವಿ ಶಾಸ್ತ್ರಿ ಪೆವಿಲಿಯನ್‌ನಲ್ಲಿ ಏನೋ ಚರ್ಚೆ ಮಾಡುತ್ತಿರುವುದು ಟೆಲಿವಿಷನ್‌ನಲ್ಲಿ ಪ್ರಸಾರವಾಗಿತ್ತು. ಧೋನಿ ಅವರನ್ನು ಕೆಳ ಕ್ರಮಾಂಕದಲ್ಲಿ ಬ್ಯಾಟ್ ಮಾಡುವಂತೆ ಮಾಡಿದ್ದು ನಿಜಕ್ಕೂ ದೊಡ್ಡ ಹೊಡೆತವನ್ನೇ ನೀಡಿತು.
ಈ ಕುರಿತಾಗಿ ಮಾತನಾಡಿದ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ, "ಭಾರತ ತಂಡಕ್ಕೆ ಆ ಸ್ಥಿತಿಯಲ್ಲಿ ಅನುಭವದ ಅಗತ್ಯವಿತ್ತು. ಪಂತ್ ಬ್ಯಾಟಿಂಗ್ ಮಾಡುವಾಗ ಧೋನಿ ಅಲ್ಲಿದಿದ್ದರೆ. ಪಂತ್‌ಗೆ ಆ ರೀತಿ ಗಾಳಿಗೆ ವಿರುದ್ಧವಾಗಿ ಹೊಡೆತವನ್ನಾಡಲು ಧೋನಿ ಬಿಡುತ್ತಿರಲಿಲ್ಲ. ಇಂಗ್ಲೆಂಡ್‌ನಲ್ಲಿ ಗಮನದಲ್ಲಿ ಇಡಬೇಕಾದ ಮೊದಲ ಅಂಶವೇ ಇದು. ಮಿಡ್ ಆಫ್ ಮತ್ತು ಮಿಡ್‌ಆನ್ ಫೀಲ್ಡರ್‌ಗಳು ಮುಂದಿದ್ದಾಗ ವೇಗದಬೌಲರ್‌ಗಳ ಎದುರು ಹೊಡೆತಗಳನ್ನು ಆಡುವಂತೆ ಸಲಹೆ ನೀಡಿರುತ್ತಿದ್ದರು. ಧೋನಿ ಮೇಲ್ಬಂದು ಆಡಬೇಕಿತ್ತು. ಧೋನಿ ಅಲ್ಲಿದ್ದರಿಮದಲೇ ಜಡೇಜಾ ಬ್ಯಾಟ್ ಬೀಸಲು ಸಾಧ್ಯವಾಯಿತು. ಧೋನಿ ಅವರನ್ನು 7ನೇ ಕ್ರಮಾಂಕದಲ್ಲಿ ಆಡಿಸಿದ್ದೇ ಬಹುದೊಡ್ಡ ತಪ್ಪು," ಎಂದು ಗಂಗೂಲಿ ಟೀಮ್ ಇಂಡಿಯಾ ಎಡವಿದ್ದೆಲ್ಲಿ ಎಂಬುದರ ಕಡೆಗೆ ಬೆಳಕು ಚೆಲ್ಲಿದ್ದಾರೆ.
ಭಾರತ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ದಾಖಲೆ ಬರೆದ ವಿಲಿಯಮ್ಸನ್
"ಧೋನಿ ಈಗಲೂ ಶ್ರೇಷ್ಠ ಫಿನಿಷರ್. ಪಂದ್ಯವನ್ನು ಗೆದ್ದುಕೊಡಲು ಅವರು ಅವರದ್ದೇ ತಂತ್ರ ಅನುಸರಿಸುತ್ತಾರೆ. ಇದರರ್ಥ ಅವರಿಂದ ಸಿಕ್ಸರ್ ಹೊಡೆಯಲು ಸಾಧ್ಯವಿಲ್ಲ ಎಂದಲ್ಲ," ಎಂದು ಧೋನಿ ಬ್ಯಾಟಿಂಗ್ ಕುರಿತಾಗಿ ಗಂಗೂಲಿ ಮಾತನಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications