Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್‌: ನೇಥನ್‌, ಸ್ಟಾರ್ಕ್‌ ವೀರಾವೇಶ, ವಿಂಡೀಸ್‌ ಮಣಿಸಿದ ಆಸೀಸ್‌

World Cup 2019 Live: AUS vs WI, Windies opt to bowl against Australia

ನಾಟಿಂಗ್‌ಹ್ಯಾಮ್‌, ಜೂನ್‌ 6: ನೇಥನ್‌ ಕೌಲ್ಟರ್‌ನೈಲ್‌ (92) ಅವರ ಕೆಚ್ಚೆದೆಯ ಬ್ಯಾಟಿಂಗ್‌ ಮತ್ತು ಮಿಚೆಲ್‌ ಸ್ಟಾರ್ಕ್‌ (46ಕ್ಕೆ 5) ಅವರ ಭರ್ಜರಿ ಬೌಲಿಂಗ್‌ ನೆರವಿನಿಂದ ಸಂಕಷ್ಟದಿಂದ ಪಾರಾದ ಹಾಲಿ ಚಾಂಪಿಯನ್ಸ್‌ ಆಸ್ಟ್ರೇಲಿಯಾ ತಂಡ ಅಪಾಯಕಾರಿ ವೆಸ್ಟ್‌ ಇಂಡೀಸ್‌ ವಿರುದ್ಧ 15 ರನ್‌ಗಳ ಜಯ ದಾಖಲಿಸಿತು.

ನೇಥನ್‌ ಕೌಲ್ಟರ್‌ ನೈಲ್‌, ತಮ್ಮ ಏಕದಿನ ಕ್ರಿಕೆಟ್‌ ವೃತ್ತಿ ಬದುಕಿನ ಶ್ರೇಷ್ಠ ಇನಿಂಗ್ಸ್‌ ಆಡಿ 60 ಎಸೆತಗಳಲ್ಲಿ 8 ಫೋರ್‌ ಮತ್ತು 4 ಸಿಕ್ಸರ್‌ಗಳನ್ನೊಳಗೊಂಡ 92 ರನ್‌ಗಳನ್ನು ಚಚ್ಚಿ 200ರ ಗಡಿಯೊಳಗೆ ಆಲ್‌ಔಟ್‌ ಆಗಬೇಕಿದ್ದ ಆಸ್ಟ್ರೇಲಿಯಾಗೆ ವೆಸ್ಟ್‌ ಇಂಡೀಸ್‌ ಎದುರು 288 ರನ್‌ಗಳ ಸಾವಾಲಿನ ಮೊತ್ತ ತಂದುಕೊಟ್ಟು ಜಯದ ರೂವಾರಿ ಎನಿಸಿದರು. ಅವರ ಈ ಹೋರಾಟಕ್ಕೆ ಪಂದ್ಯಶ್ರೇಷ್ಠ ಗೌರವವೂ ಒಲಿಯಿತು.

ಪಂದ್ಯದಲ್ಲಿ 289 ರನ್‌ಗಳ ಗುರಿ ಬೆನ್ನತ್ತಿದ ವೆಸ್ಟ್‌ ಇಂಡೀಸ್‌ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 273 ರನ್‌ಗಳನ್ನು ಗಳಿಸಲಷ್ಟೇ ಶಕ್ತವಾಗಿ ಸೋಲಿಗೆ ಶರಣಾಯಿತು. ನಿಣರ್ಣಾಯಕ ಘಟ್ಟಗಳಲ್ಲಿ ವಿಕೆಟ್‌ಗಳನ್ನು ಕೈಚೆಲ್ಲಿದರ ಪರಿಣಾಮ ವಿಂಡೀಸ್‌ ಗೆಲ್ಲುವ ಉತ್ತಮ ಅವಕಾಶ ಕಳೆದುಕೊಂಡಿತು.

ಸ್ಮಿತ್‌-ನೇಥನ್‌ ಜೊತೆಯಾಟ

ಮಾಜಿ ನಾಯಕ ಸ್ಟೀವನ್‌ ಸ್ಮಿತ್‌ (73 ರನ್‌, 103 ಎಸೆತ) ಅವರೊಟ್ಟಿಗೆ 7ನೇ ವಿಕೆಟ್‌ಗೆ 83 ಎಸೆತಗಳಲ್ಲಿ 102 ರನ್‌ಗಳ ಜೊತೆಯಾಟ ನಡೆಸಿದ ಕೌಲ್ಟರ್‌ ನೈಲ್‌ ಆಸೀಸ್‌ ಅಭಿಮಾನಿಗಳ ಮನ ಗೆದ್ದರು. ಇದರೊಂದಿಗೆ ಆಸ್ಟ್ರೇಲಿಯಾ 49 ಓವರ್‌ಗಳಲ್ಲಿ ಆಲ್‌ಔಟ್‌ ಆದರೂ 288 ರನ್‌ಗಳನ್ನು ಗಳಿಸಲು ಸಾಧ್ಯವಾಯಿತು.

ಆತ್ಮವಿಶ್ವಾಸದ ಅಲೆಯಲ್ಲಿರುವ ವೆಸ್ಟ್‌ ಇಂಡೀಸ್‌ ತಂಡ 12ನೇ ಆವೃತ್ತಿಯ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಎರಡನೇ ಗೆಲುವನ್ನು ಎದುರು ನೋಡುತ್ತಿದ್ದು, ಹಾಲಿ ಚಾಂಪಿಯನ್ಸ್‌ ಆಸ್ಟ್ರೇಲಿಯಾ ವಿರುದ್ಧ ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು.

ಇಲ್ಲಿನ ಟ್ರೆಂಟ್‌ ಬ್ರಿಡ್ಜ್‌ ಕ್ರೀಡಾಂಗಣದಲ್ಲಿ ಗುರುವಾರ ಮೊದಲು ಕ್ಷೇತ್ರರಕ್ಷಣೆ ಮಾಡುವ ನಾಯಕ ಜೇಸನ್‌ ಹೋಲ್ಡರ್‌ ಅವರ ನಿರ್ಧಾರಕ್ಕೆ ತಕ್ಕಂತೆ ಬೌಲಿಂಗ್‌ ದಾಳಿ ಸಂಘಟಿಸಿದ ವಿಂಡೀಸ್‌ ಬೌಲರ್‌ಗಳು, ಆಸ್ಟ್ರೇಲಿಯಾದ ಬ್ಯಾಟಿಂಗ್‌ ಬೆನ್ನೆಲುಬಾದ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಆರೊನ್‌ ಫಿಂಚ್‌(6), ಡೇವಿಡ್‌ ವಾರ್ನರ್‌(3), ಉಸ್ಮಾನ್‌ ಖವಾಜ (13) ಮತ್ತು ಗ್ಲೆನ್‌ ಮ್ಯಾಕ್ಸ್‌ವೆಲ್ (0) ವಿಕೆಟ್‌ ಪಡೆಯುವಲ್ಲಿ ಯಶಸ್ಸಿಯಾದರು.

ತನ್ನ ಮೊದಲ ಪಂದ್ಯದಲ್ಲೂ ಪಾಕಿಸ್ತಾನ ತಂಡವನ್ನು 105ಕ್ಕೆ ಆಲ್‌ಔಟ್‌ ಮಾಡಿದ್ದ ವೆಸ್ಟ್‌ ಇಂಡೀಸ್‌, ಆಸೀಸ್‌ ವಿರುದ್ಧವೂ ಅಂಥದ್ದೇ ರಣತಂತ್ರದೊಂದಿಗೆ ಕಣಕ್ಕಿಳಿದಿದ್ದು ಎದುರಾಳಿಯ ಮೊತ್ತ 50 ಮುಟ್ಟುವ ಮೊದಲೇ 4 ವಿಕೆಟ್‌ಗಳನ್ನು ಉರುಳಿಸಿದೆ. ಆದರೆ, ಐದನೇ ವಿಕೆಟ್‌ಗೆ ಮಾಜಿ ನಾಯಕ ಸ್ಟೀವ್‌ ಸ್ಮಿತ್‌ ಮತ್ತು ಆಲ್‌ರೌಂಡರ್‌ ಮರ್ಕಸ್‌ ಸ್ಟೋಯ್ನಿಸ್‌ ಆಸರೆಯಾಗಿ ನಿಂತು 41 ರನ್‌ಗಳ ಜೊತೆಯಾಟದ ಮೂಲಕ ಆಸೀಸ್‌ಗೆ ಕೊಂಚ ಚೇತರಿಕೆ ನೀಡಿದರು. ಈ ಹಂತದಲ್ಲಿ ದಾಳಿಗಿಳಿದ ವಿಂಡೀಸ್‌ ನಾಯಕ ಹೋಲ್ಡರ್‌ 19 ರನ್‌ಗಳಿಸಿದ್ದ ಸ್ಟೋಯ್ನಿಸ್‌ಗೆ ಪೆವಿಲಿಯನ್‌ ದಾರಿ ತೋರಿದರು.

ಸಂಕ್ಷಿಪ್ತ ಸ್ಕೋರ್‌

ಆಸ್ಟ್ರೇಲಿಯಾ: 49 ಓವರ್‌ಗಳಲ್ಲಿ 288/10 (ಸ್ಟೀವ್‌ ಸ್ಮಿತ್‌ 73, ಅಲೆಕ್ಸ್‌ ಕ್ಯಾರಿ 43, ನೇಥನ್‌ ಕೌಲ್ಟರ್‌ ನೈಲ್‌ 92; ಕಾರ್ಲೋಸ್‌ ಬ್ರಾತ್‌ವೇಟ್‌ 67ಕ್ಕೆ 3).

ವೆಸ್ಟ್‌ ಇಂಡೀಸ್‌: 50 ಓವರ್‌ಗಳಲ್ಲಿ 273/9 (ಶೇಯ್‌ ಹೋಪ್‌ 68, ನಿಕೊಲಸ್‌ ಪೂರನ್‌ 40, ಜೇಸನ್‌ ಹೋಲ್ಡರ್‌ 51; ಮಿಚೆಲ್‌ ಸ್ಟಾರ್ಕ್‌ 46ಕ್ಕೆ 5, ಪ್ಯಾಟ್‌ ಕಮಿನ್ಸ್‌ 41ಕ್ಕೆ 2).

ತಂಡಗಳು

ವೆಸ್ಟ್‌ ಇಂಡೀಸ್‌ ಪ್ಲೇಯಿಂಗ್‌ 11: ಕ್ರಿಸ್‌ ಗೇಲ್‌, ಎವಿನ್‌ ಲೂಯಿಸ್‌, ಶೇಯ್‌ ಹೋಪ್‌(ವಿಕೆಟ್‌ಕೀಪರ್‌), ನಿಕೊಲಾಸ್‌ ಪೂರನ್‌, ಶಿಮ್ರಾನ್‌ ಹೆಟ್ಮಾಯೆರ್‌, ಆಂಡ್ರೆ ರಸೆಲ್‌, ಜೇಸನ್‌ ಹೋಲ್ಡರ್‌ (ನಾಯಕ), ಕಾರ್ಲೋಸ್‌ ಪ್ರಾತ್‌ವೇಟ್‌, ಆಷ್ಲೇ ನರ್ಸ್‌, ಶೆಲ್ಡನ್‌ ಕಾಟ್ರೆಲ್‌, ಒಶೇನ್‌ ಥಾಮಸ್‌.

ಆಸ್ಟ್ರೇಲಿಯಾ ಪ್ಲೇಯಿಂಗ್‌ 11: ಆರೊನ್‌ ಫಿಂಚ್‌, ಡೇವಿಡ್‌ ವಾರ್ನರ್‌ ಉಸ್ಮಾನ್‌ ಖವಾಜ, ಸ್ಟೀವ್‌ ಸ್ಮಿತ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಮಾರ್ಕಸ್‌ ಸ್ಟೋಯ್ನಿಸ್‌, ಅಲೆಕ್ಸ್‌ ಕ್ಯಾರಿ (ವಿಕೆಟ್‌ಕೀಪರ್‌), ನೇಥನ್ ಕೌಲ್ಟರ್‌ನೈಲ್‌, ಪ್ಯಾಟ್‌ ಕಮಿನ್ಸ್‌, ಮಿಚೆಲ್‌ ಸ್ಟಾರ್ಕ್‌, ಆಡಮ್‌ ಝಾಂಪ.

{headtohead_cricket_8_1}

Story first published: Friday, June 7, 2019, 18:32 [IST]
Other articles published on Jun 7, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+