ವಿಶ್ವಕಪ್: ಕಿವೀಸ್ ಕಿವಿ ಹಿಂಡಿದ ಇಂಗ್ಲೆಂಡ್ ಸೆಮಿಫೈನಲ್ಸ್‌ಗೆ

ಚೆಸ್ಟರ್ ಲೇ ಸ್ಟ್ರೀಟ್, ಜುಲೈ 03: ತನ್ನ ಪಾಲಿಗೆ ಕ್ವಾರ್ಟರ್ ಫೈನಲ್ ಮಹತ್ವ ಪಡೆದುಕೊಂಡಿರುವ ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಇಂಗ್ಲೆಂಡ್ ತಂಡ 119 ರನ್‌ಗಳ ಭರ್ಜರಿ ಜಯದೊಂದಿಗೆ ಸೆಮಿಫೈನಲ್ಸ್‌ಗೆ ಮೂರನೇ ತಂಡವಾಗಿ ಮುನ್ನಡೆದಿದೆ.
ವಿಶ್ವಕಪ್: ಇಂಗ್ಲೆಂಡ್ vs ನ್ಯೂಜಿಲೆಂಡ್ ಪಂದ್ಯದ ಸ್ಕೋರ್ ಕಾರ್ಡ್
ಇಲ್ಲಿನ ರಿವರ್ ಸೈಡ್ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 305 ರನ್‌ಗಳನ್ನು ದಾಖಲಿಸಿತು. ಬಳಿಕ ಗುರಿ ಬೆನ್ನತ್ತಿದ ಕಿವೀಸ್ ಹೀನಾಯ ಪ್ರದರ್ಶನ ನೀಡಿ 45 ಓವರ್‌ಗಳಲ್ಲಿ 186 ರನ್‌ಗಳಿಗೆ ಆಲ್‌ಔಟ್ ಆಯಿತು. ಇದರೊಂದಿಗೆ ನ್ಯೂಜಿಲೆಂಡ್ ತಂಡಕ್ಕೆ ಸೆಮಿಫೈನಲ್ಸ್ ತಲುಪುವ ಕನಸು ಪಾಕಿಸ್ತಾನ ಮತ್ತು ಬಾಂಗ್ಲಾದೇಶ ವಿರುದ್ಧದ ಅಂತಿಮ ಲೀಗ್ ಪಂದ್ಯವನ್ನು ಆಧರಿಸುವಂತಾಗಿದೆ.
ಪಾಕಿಸ್ತಾನ ತಂಡ ಈ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಭಾರಿ ರನ್‌ರೇಟ್‌ನಿಂದ ಗೆದ್ದರೆ ಸೆಮಿಫೈನಲ್ಸ್ ತಲುಪುವ ಅಲ್ಪ ಅವಕಾಶ ಹೊಂದಿದೆ. ಪಾಕ್ ಸೋತರ ಕಿವೀಸ್ ನಿರಾತಂಕವಾಗಿ ಉಪಾಂತ್ಯಕ್ಕೆ ಕಾಲಿಡಲಿದೆ. ಅಂದಹಾಗೆ ಬಾಂಗ್ಲಾ ಎದುರು ಪಾಕಿಸ್ತಾನ ತಂಡ ಮೊದಲು ಬ್ಯಾಟ್ ಮಾಡಿ 300 ರನ್‌ಗಳ ಅಂತರದಲ್ಲಿ ಗೆದ್ದರಷ್ಟೇ ಸೆಮಿಫೈನಲ್ ತಲುಪಲು ಬೇಕಾದ ರನ್‌ರೇಟ್ ಲಭ್ಯವಾಗಲಿದೆ.
ಇನ್ನು ಲೀಗ್ ಹಂತದಲ್ಲಿ ಅಗ್ರಸ್ಥಾನ ಪಡೆದುಕೊಳ್ಳುವ ತಂಡ ಅಂಕಪಟ್ಟಿಯ ನಾಲ್ಕನೇ ಸ್ಥಾನಿ ವಿರುದ್ಧ ಸೆಮಿಫೈನಲ್ ಪಂದ್ಯವನ್ನಾಡಲಿದ್ದು, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆಯುವ ತಂಡಗಳು ಮತ್ತೊಂದು ಸೆಮಿಫೈನಲ್ಸ್‌ನಲ್ಲಿ ಮುಖಾಮುಖಿಯಾಗಲಿವೆ.
ಇದಕ್ಕೂ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಜೇಸನ್ ರಾಯ್ ಮತ್ತು ಜಾನಿ ಬೈರ್‌ಸ್ಟೋವರ್ ನಡುವಣ 123 ರನ್‌ಗಳ ಜೊತೆಯಾಟದ ಮೂಲಕ ಇಂಗ್ಲೆಂಡ್ ಬೃಹತ್ ಮೊತ್ತಕ್ಕೆ ಬೇಕಾದ ಭದ್ರ ಅಡಿಪಾಯ ಪಡೆಯಿತು. ಬೈರ್ ಸ್ಟೋವ್ ತಮ್ಮ ಅದ್ಭುತ ಲಯ ಕಾಯ್ದುಕೊಂಡು, 99 ಎಸೆತಗಳಲ್ಲಿ 15 ಫೋರ್ ಮತ್ತು ಏಕೈಕ ಸಿಕ್ಸರ್ ಒಳಗೊಂಡ 106 ರನ್‌ಗಳನ್ನು ದಾಖಲಿಸಿ ಸತತ ಎರಡನೇ ಶತಕ ಬಾರಿಸಿದರು.
ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್: 50 ಓವರ್‌ಗಳಲ್ಲಿ 305/8 (ಜೇಸನ್ ರಾಯ್ 60, ಜಾನಿ ಬೈರ್‌ಸ್ಟೋವ್ 106, ಐಯಾನ್ ಮಾರ್ಗನ್ 42; ಟ್ರೆಂಟ್ ಬೌಲ್ಟ್ 56ಕ್ಕೆ 2, ಮ್ಯಾಟ್ ಹೆನ್ರಿ 52ಕ್ಕೆ 2, ಜಿಮ್ಮಿ ನೀಶಮ್ 41ಕ್ಕೆ 2).
ನ್ಯೂಜಿಲೆಂಡ್: 45 ಓವರ್‌ಗಳಲ್ಲಿ 186/10 (ಕೇನ್ ವಿಲಿಯಮ್ಸನ್ 27, ಟಾಮ್ ಲೇಥಮ್ 57, ರಾಸ್ ಟೇಲರ್ 28; ಮಾರ್ಕ್ ವುಡ್ 38ಕ್ಕೆ 3).
ಸ್ಟ್ಯಾಟ್..
01, 1992ರ ವಿಶ್ವಕಪ್ ಬಳಿಕ ಇಂಗ್ಲೆಂಡ್ ತಂಡ ಇದೇ ಮೊದಲ ಬಾರಿ ಏಕದಿನ ವಿಶ್ವಕಪ್ ಟೂನರ್ನಿಯಲ್ಲಿ ಸೆಮಿಫೈನಲ್ಸ್ ತಲುಪಿದೆ.
500, ಜೋ ರೂಟ್ ಇಂಗ್ಲೆಂಡ್ ಪರ ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ 500 ರನ್‌ಗಳನ್ನು ಗಳಿಸಿದ ಮೊದಲ ಆಟಗಾರ.
ತಂಡಗಳ ವಿವರ
ನ್ಯೂಜಿಲೆಂಡ್ (ಪ್ಲೇಯಿಂಗ್ 11): ಮಾರ್ಟಿನ್ ಗಪ್ಟಿಲ್, ಹೆನ್ರಿ ನಿಕೋಲ್ಸ್, ಕೇನ್ ವಿಲಿಯಮ್ಸನ್ (ನಾಯಕ), ರಾಸ್ ಟೇಲರ್, ಟಾಮ್ ಲೇಥಮ್, ಕಾಲಿನ್ ಡಿ'ಗ್ರ್ಯಾಂಡ್‌ಹೋಮ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥೀ, ಮ್ಯಾಟ್ ಹೆನ್ರಿ, ಟ್ರೆಂಟ್ ಬೌಲ್ಟ್.
ಇಂಗ್ಲೆಂಡ್ (ಪ್ಲೇಯಿಂಗ್ 11): ಜೇಸನ್ ರಾಯ್, ಜಾನಿ ಬೈರ್‌ಸ್ಟೋವ್, ಜೋ ರೂಟ್, ಐಯಾನ್ ಮಾರ್ಗನ್ (ನಾಯಕ), ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್, ಕ್ರಿಸ್ ವೋಕ್ಸ್, ಲಿಯಾಮ್ ಪ್ಲಂಕೆಟ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ಮಾರ್ಕ್ ವುಡ್.
{headtohead_cricket_2_4}
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications