For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌: ರೋಚಕ ಪಂದ್ಯದಲ್ಲಿ ಶ್ರೀಲಂಕಾ ರಾಕ್ಸ್‌, ಇಂಗ್ಲೆಂಡ್‌ಗೆ ಶಾಕ್‌

World Cup 2019 Live: England vs Sri Lanka, Match-27

ಲೀಡ್ಸ್‌, ಜೂನ್‌ 21: ಸ್ಕೋರ್‌ ಬೋರ್ಡ್‌ನಲ್ಲಿ ಹೆಚ್ಚೇನು ರನ್‌ ದಾಖಲಾಗಲಿಲ್ಲ. ಆದರೂ ಈ ಪಂದ್ಯ ತಂದುಕೊಟ್ಟ ರೋಚಕತೆಗಿಂತಲೂ ಹೆಚ್ಚಿನದ್ದನ್ನು ಕ್ರಿಕೆಟ್‌ ಅಭಿಮಾನಿಗಳು ನಿರೀಕ್ಷಿಸಲೂ ಸಾಧ್ಯವಿಲ್ಲ. ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ ಆತಿಥೇಯ ಇಂಗ್ಲೆಂಡ್‌ ಮತ್ತು ಶ್ರೀಲಂಕಾ ನಡುವೆ ಶುಕ್ರವಾರ ನಡೆದ ವಿಶ್ವಕಪ್‌ ಪಂದ್ಯದಲ್ಲಿ 1996ರ ವಿಶ್ವ ಚಾಂಪಿಯನ್ಸ್‌ ಶ್ರೀಲಂಕಾ 20 ರನ್‌ಗಳ ರೋಚಕ ಜಯ ದಾಖಲಿಸಿತು.

ಶ್ರೀಲಂಕಾ೦-ಇಂಗ್ಲೆಂಡ್‌ ಪಂದ್ಯದ ಲೈವ್‌ ಸ್ಕೋರ್‌ ಕಾರ್ಡ್‌

1
43670

ಇಲ್ಲಿನ ಹೆಡಿಂಗ್ಲೇ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ಗೆ ಇಳಿದ ಶ್ರೀಲಂಕಾ ತಂಡ ಟೂನರ್ನಿಯಲ್ಲಿ ಈ ಹಿಂದಿನ ಪಂದ್ಯಗಳಂತೆ ಮತ್ತೊಮ್ಮೆ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. ಆದರೂ, ಮಾಜಿ ನಾಯಕ ಹಾಗೂ ತಂಡದ ಅನುಭವಿ ಬ್ಯಾಟ್ಸ್‌ಮನ್‌ ಏಂಜಲೊ ಮ್ಯಾಥ್ಯೂಸ್‌ (ಔಟಾಗದೆ 85) ಅವರ ಹೋರಾಟದ ನೆರವಿನಿಂದ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 232 ರನ್‌ಗಳ ಸಾಧಾರಣ ಮೊತ್ತವನ್ನು ದಾಖಲಿಸಿತು.

ಬಳಿಕ ಗುರಿ ಬೆನ್ನತ್ತಿದ ಇಂಗ್ಲೆಂಡ್‌ಗೆ ಜಯದ ಹಾದಿ ಸುಲಭವಾಗಿಲ್ಲ ಎಂಬುದನ್ನು ಲಂಕಾದ ಅನುಭವಿ ವೇಗಿ ಲಸಿತ್‌ ಮಾಲಿಂಗ ಮೊದಲ ಓವರ್‌ನಲ್ಲೇ ಸಾಬೀತು ಪಡಿಸಿದ್ದರು. ಇನ್‌ಫಾರ್ಮ್‌ ಬ್ಯಾಟ್ಸ್‌ಮನ್‌ ಜಾನಿ ಬೈರ್‌ಸ್ಟೋವ್‌ ಅವರನ್ನು ಮಾಲಿಂಗ ತಮ್ಮ ಇನ್‌ಸ್ವಿಂಗ್‌ ಯಾರ್ಕರ್‌ ಮೂಲಕ ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸುವ ಮೂಲಕ ಅಪ್ರತಿಮ ಗೆಲುವೊಂದಕ್ಕೆ ಮುನ್ನುಡಿ ಬರೆದಿದ್ದರು.

ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ಗಳಿಗೆ ಅಕ್ಷರಶಃ ಸಿಂಹ ಸ್ವಪ್ನದಂತೆ ಕಾಡಿದ ಮಾಲಿಂಗ ತಮ್ಮ 10 ಓವರ್‌ಗಳ ಸ್ಪಿಲ್‌ನಲ್ಲಿ 43 ರನ್‌ ನೀಡಿದರಾದರೂ, ಬೈರ್‌ಸ್ಟೋವ್‌ ಅಲ್ಲದೆ ಜೇಮ್ಸ್‌ ವಿನ್ಸ್‌ (14), ಜೋ ರೂಟ್‌ (57) ಹಾಗೂ ಜೋಸ್‌ ಬಟ್ಲರ್‌ (10) ಅವರಂತಹ ಘಟಾನುಘಟಿ ಬ್ಯಾಟ್ಸ್‌ಮನ್‌ಗಳಿಗೆ ಪೆವಿಲಿಯನ್‌ ದಾರಿ ತೋರಿ ಇಂಗ್ಲೆಂಡ್‌ ಸೋಲಿಗೆ ಖೆಡ್ಡಾ ತೋಡಿಬಿಟ್ಟರು.

ಅವರಿಗೆ ಉತ್ತಮ ಸಾಥ್‌ ನೀಡಿದ ಸಾಂದರ್ಭಿಕ ಬೌಲರ್‌ ಧನಂಜಯ ಡಿ'ಸಿಲ್ವಾ 32ಕ್ಕೆ 3 ವಿಕೆಟ್‌ ಉರುಳಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರೆ, ಇಸುರು ಉದನ 41ಕ್ಕೆ 2 ವಿಕೆಟ್‌ ಪಡೆಯುವಲ್ಲಿ ಯಶಸ್ವಿಯಾದರು.

ಹೋರಾಟ ಹಿಡಿದಿಟ್ಟ ಸ್ಟೋಕ್ಸ್‌

ಒಂದೆಡೆ ತಪತಪನೆ ವಿಕೆಟ್‌ಗಳು ಬೀಳುತ್ತಿದ್ದರೂ ದೊಡ್ಡ ಹೊಡೆತಗಳ ಮೂಲಕ ಇಂಗ್ಲೆಂಡ್‌ ಗೆಲುವಿನ ಕೊನೆಯ ಭರವಸೆಯಾಗಿ ಉಳಿದಿದ್ದ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌, 89 ಎಸೆತಗಳಲ್ಲಿ 7 ಫೋರ್‌ ಮತ್ತು 4 ಸಿಕ್ಸರ್‌ಗಳನ್ನು ಒಳಗೊಂಡ 82 ರನ್‌ಗಳನ್ನು ಸಿಡಿಸಿ ಔಟಾಗದೆ ಉಳಿದರೂ ಸೋಲು ತಪ್ಪಿಸಲು ಸಾಧ್ಯವಾಗಲಿಲ್ಲ. ವೇಗಿ ನುವಾನ್‌ ಪ್ರದೀಪ್‌ ಇಂಗ್ಲೆಂಡ್‌ ತಂಡದ 11ನೇ ಬ್ಯಾಟ್ಸ್‌ಮನ್‌ ಮಾರ್ಕ್‌ ವುಡ್‌ ಅವರ ವಿಕೆಟ್‌ ಪಡೆಯುತ್ತಿದ್ದಂತೆಯೇ ಸ್ರೀಲಂಕಾ ತಂಡದ ಸಂಭ್ರಮ ಮೋಡಗಳನ್ನೂ ದಾಟಿ ಆಚೆಗೆ ಹೋಗಿತ್ತು.

ಸಂಕ್ಷಿಪ್ತ ಸ್ಕೋರ್‌

ಶ್ರೀಲಂಕಾ: 50 ಓವರ್‌ಗಳಲ್ಲಿ 232/9 (ಅವಿಷ್ಕ ಫರ್ನಾಂಡೊ 49, ಕುಶಲ್‌ ಮೆಂಡಿಸ್‌ 46, ಏಂಜಲೊ ಮ್ಯಾಥ್ಯೂಸ್‌ ಔಟಾಗದೆ 85; ಜೋಫ್ರಾ ಆರ್ಚರ್‌ 52ಕ್ಕೆ 3, ಮಾರ್ಕ್‌ ವುಡ್‌ 40ಕ್ಕೆ 3, ಆದಿಲ್‌ ರಶೀದ್‌ 45ಕ್ಕೆ 2).

ಇಂಗ್ಲೆಂಡ್‌: 47 ಓವರ್‌ಗಳಲ್ಲಿ 212/10 (ಜೋ ರೂಟ್‌ 57, ಬೆನ್‌ ಸ್ಟೋಕ್ಸ್‌ ಔಟಾಗದೆ 82; ಲಸಿತ್‌ ಮಾಲಿಂಗ 43ಕ್ಕೆ 3, ಧನಂಜಯ ಡಿ'ಸಿಲ್ವಾ 32ಕ್ಕೆ 3, ಇಸುರು ಉದನ 41ಕ್ಕೆ 2, ನುವಾನ್‌ ಪ್ರದೀಪ್‌ 38ಕ್ಕೆ 1).

ತಂಡಗಳ ವಿವರ

ಇಂಗ್ಲೆಂಡ್‌ (ಪ್ಲೇಯಿಂಗ್‌ 11): ಜೇಮ್ಸ್‌ ವಿನ್ಸ್‌, ಜಾನಿ ಬೈರ್‌ಸ್ಟೋವ್‌, ಜೋ ರೂಟ್‌, ಐಯಾನ್‌ ಮಾರ್ಗನ್‌ (ನಾಯಕ), ಜೋಸ್‌ ಬಟ್ಲರ್‌ (ವಿಕೆಟ್‌ಕೀಪರ್‌), ಬೆನ್‌ ಸ್ಟೋಕ್ಸ್‌, ಮೊಯೀನ್‌ ಅಲಿ, ಕ್ರಿಸ್‌ ವೋಕ್ಸ್‌, ಆದಿಲ್‌ ರಶೀದ್‌, ಜೋಫ್ರಾ ಆರ್ಚರ್‌, ಮಾರ್ಕ್‌ ವುಡ್‌.

ಶ್ರೀಲಂಕಾ (ಪ್ಲೇಯಿಂಗ್‌ 11): ದಿಮುತ್‌ ಕರುಣಾರತ್ನೆ (ನಾಯಕ), ಕುಶಲ್‌ ಪೆರೆರಾ, ಅವಿಷ್ಕ ಫರ್ನಾಂಡೊ, ಕುಶಲ್‌ ಮೆಂಡಿಸ್‌, ಏಂಜಲೊ ಮ್ಯಾಥ್ಯೂಸ್‌, ತಿಸಾರ ಪೆರೆರಾ, ಜೀವನ್‌ ಮೆಂಡಿಸ್‌, ಧನಂಜಯ ಡಿ'ಸಿಲ್ವಾ, ಇಸುರು ಉದನ, ಲಸಿತ್‌ ಮಾಲಿಂಗ, ನುವಾನ್‌ ಪ್ರದೀಪ್‌.

{headtohead_cricket_2_7}

Story first published: Friday, June 21, 2019, 23:34 [IST]
Other articles published on Jun 21, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+