For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌: ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಜಯ ದಾಖಲಿಸಿದ ಭಾರತ

ICC World Cup 2019 : ಭಾರತೀಯರ ಆಟಕ್ಕೆ ಕೊಚ್ಚಿ ಹೋದ ಆಸ್ಟ್ರೇಲಿಯಾ..! | Oneindia Kannada
World Cup 2019 Live: India vs Australia, Match-14

ಲಂಡನ್‌, ಜೂನ್‌ 09: ಪ್ರಶಸ್ತಿ ಗೆಲ್ಲುವ ಫೇವರಿಟ್‌ ತಂಡವಾಗಿರುವ ಟೀಮ್‌ ಇಂಡಿಯಾ ಪ್ರಸಕ್ತ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ಸ್‌ ಆಸ್ಟ್ರೇಲಿಯಾ ವಿರುದ್ಧ 36 ರನ್‌ಗಳಿಂದ ಗೆದ್ದು ಸತತ 2ನೇ ಜಯ ದಾಖಲಿಸಿದೆ.

ವಿಶ್ವಕಪ್‌: ಭಾರತ - ಆಸ್ಟ್ರೇಲಿಯಾ ನಡುವಣ ಪಂದ್ಯದ ಲೈವ್‌ live ಕಾರ್ಡ್‌

1
43657

ಇಲ್ಲಿನ ಕೆನ್ನಿಂಗ್ಟನ್‌ ಓವಲ್‌ ಕ್ರೀಡಾಂಗಣದಲ್ಲಿ ಭಾನುವಾರ ಟಾಸ್‌ ಗೆದ್ದ ಟೀಮ್‌ ಇಂಡಿಯಾಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡು ತನ್ನ ಪಾಲಿನ 50 ಓವರ್‌ಗಳಲ್ಲಿ 352/5 ರನ್‌ಗಳ ಶಿಖರ ನಿರ್ಮಿಸಿತು. ಬಳಿಕ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 50 ಓವರ್‌ಗಳಲ್ಲಿ 325ಕ್ಕೆ ಆಲ್‌ಔಟ್‌ ಆಯಿತು.

ಭಾರತದ ಪರ ವೇಗಿಗಳಾದ ಜಸ್‌ಪ್ರೀತ್‌ ಬುಮ್ರಾ (61ಕ್ಕೆ 3) ಮತ್ತು ಭುವನೇಶ್ವರ್‌ ಕುಮಾರ್‌ (50ಕ್ಕೆ 3) ತಲಾ ಮೂರು ವಿಕೆಟ್‌ ಪಡೆದು ತಂಡದ ಜಯದ ಹಾದಿಯನ್ನು ಸುಗಮವನ್ನಾಗಿಸಿದರು. ಯುಜ್ವೇಂದ್ರ ಚಹಲ್‌ ಕೂಡ (62ಕ್ಕೆ 2) ಎರಡು ವಿಕೆಟ್‌ ಪಡೆದು ಗಮನ ಸೆಳೆದರು.

ಇದಕ್ಕೂ ಮೊದಲು ಭಾರತದ ಪರ ರೋಹಿತ್‌ ಶರ್ಮಾ ಮತ್ತು ಶಿಖರ್‌ ಧವನ್‌ ಇನಿಂಗ್ಸ್‌ ಆರಂಭಿಸಿ ಮೊದಲ ವಿಕೆಟ್‌ಗೆ 135 ಎಸೆತಗಳಲ್ಲಿ 127 ರನ್‌ಗಳ ಭರ್ಜರಿ ಜೊತೆಯಾಟ ನಡೆಸಿ ತಂಡದ ಬೃಹತ್‌ ಮೊತ್ತಕ್ಕೆ ಬೇಕಿರುವ ಭದ್ರ ಬುನಾದಿ ಹಾಕಿಕೊಟ್ಟರು.

ಕಳೆದ ಪಂದ್ಯದ ಶತಕ ವೀರ ರೋಹಿತ್‌ ಶರ್ಮಾ ಮತ್ತೊಂದು ಶತಕ ಸಿಡಿಸುವುದನ್ನು ಎದುರು ನೋಡುತ್ತಿದ್ದರು. 70 ಎಸೆತಗಳಲ್ಲಿ 3 ಫೋರ್‌ ಮತ್ತೊಂದು ಸಿಕ್ಸರ್‌ ಸಹಿತ 57 ರನ್‌ಗಳಿಸಿ ಎಚ್ಚರಿಕೆಯ ಆಟವಾಡುತ್ತಿದ್ದ ರೋಹಿತ್‌, ವೇಗಿ ನೇಥನ್‌ ಕೌಲ್ಟರ್‌ ನೈಲ್‌ಗೆ ವಿಕೆಟ್‌ ಒಪ್ಪಿಸಿ ನಿರಾಸೆ ಅನುಭವಿಸಿದರು.

ಆದರೆ, ಆಸೀಸ್‌ ಬೌಲರ್‌ಗಳನ್ನು ಬೆಂಡೆತ್ತುವುದನ್ನು ಮುಂದುವರಿಸಿದ ಧವನ್‌, 109 ಎಸೆತಗಳಲ್ಲಿ 16 ಫೋರ್‌ಗಳನ್ನು ಒಳಗೊಂಡ 117 ರನ್‌ಗಳನ್ನು ಸಿಡಿಸಿ ಔಟಾದರಿ. ಇನಿಂಗ್ಸ್‌ ಅಂತ್ಯದಲ್ಲಿ ಅಬ್ಬರಿಸಿದ ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ 77 ಎಸೆತಗಳಲ್ಲಿ 82 ರನ್‌, ಹಾರ್ದಿಕ್‌ ಪಾಂಡ್ಯ 27 ಎಸೆತಗಳಲ್ಲಿ 48 ರನ್‌ ಹಾಗೂ ಎಂ.ಎಸ್‌ ಧೋನಿ 14 ಎಸೆತಗಳಲ್ಲಿ 27 ರನ್‌ಗಳನ್ನು ಸಿಡಿಸಿ ತಂಡದ ಮೊತ್ತವನ್ನು 350ರ ಗಡಿ ದಾಟಿಸಿದರು.

ಸ್ಕೋರ್‌ ವಿವರ

ಭಾರತ: 50 ಓವರ್‌ಗಳಲ್ಲಿ 352/5 (ರೋಹಿತ್‌ ಶರ್ಮಾ 57, ಶಿಖರ್‌ ಧವನ್‌ 117, ವಿರಾಟ್‌ ಕೊಹ್ಲಿ 82, ಹಾರ್ದಿಕ್‌ ಪಾಂಡ್ಯ 48, ಎಂ.ಎಸ್‌ ಧೋನಿ 27, ಕೆ.ಎಲ್‌ ರಾಹುಲ್‌ ಔಟಾಗದೆ 11; ಮಾರ್ಕಸ್‌ ಸ್ಟೋಯ್ನಿಸ್‌ 62ಕ್ಕೆ 2).

ಆಸ್ಟ್ರೇಲಿಯಾ: 50 ಓವರ್‌ಗಳಲ್ಲಿ 315/10 (ಡೇವಿಡ್‌ ವಾರ್ನರ್‌ 56, ಆರೊನ್‌ ಫಿಂಚ್‌ 36, ಸ್ಟೀವ್‌ ಸ್ಮಿತ್‌ 69, ಉಸ್ಮಾನ್‌ ಖವಾಜ 42, ಅಲೆಕ್ಸ್‌ ಕ್ಯಾರಿ ಔಟಾಗದೆ 55; ಭುವನೇಶ್ವರ್‌ ಕುಮಾರ್‌ 50ಕ್ಕೆ 3, ಜಸ್‌ಪ್ರೀತ್‌ ಬುಮ್ರಾ 61ಕ್ಕೆ 3, ಯುಜ್ವೇಂದ್ರ ಚಹಲ್‌ 62ಕ್ಕೆ 2).

ಭಾರತ (ಪ್ಲೇಯಿಂಗ್‌ ಇಲೆವೆನ್‌): ಶಿಖರ್‌ ಧವನ್‌, ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ (ನಾಯಕ), ಲೋಕೇಶ್‌ ರಾಹುಲ್‌, ಎಂ.ಎಸ್‌ ಧೋನಿ (ವಿಕೆಟ್‌ಕೀಪರ್‌), ಕೇದಾರ್‌ ಜಾಧವ್‌, ಹಾರ್ದಿಕ್‌ ಪಾಂಡ್ಯ, ಭುವನೇಶ್ವರ್‌ ಕುಮಾರ್‌, ಕುಲ್ದೀಪ್‌ ಯಾದವ್‌, ಯುಜ್ವೇಂದ್ರ ಚಹಲ್‌, ಜಸ್‌ಪ್ರೀತ್‌ ಬುಮ್ರಾ.

ಆಸ್ಟ್ರೇಲಿಯಾ (ಪ್ಲೇಯಿಂಗ್‌ ಇಲೆವೆನ್‌): ಡೇವಿಡ್‌ ವಾರ್ನರ್‌, ಆರೊನ್‌ ಫಿಂಚ್‌(ನಾಯಕ), ಉಸ್ಮಾನ್‌ ಖವಾಜ, ಸ್ಟೀವ್‌ ಸ್ಮಿತ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಮಾರ್ಕಸ್‌ ಸ್ಟೋಯ್ನಿಸ್‌, ಅಲೆಕ್ಸ್‌ ಕ್ಯಾರೀ (ವಿಕೆಟ್‌ಕೀಪರ್‌), ನೇಥನ್‌ ಕೌಲ್ಡರ್‌ ನೈಲ್‌, ಪ್ಯಾಟ್‌ ಕಮಿನ್ಸ್‌, ಮಿಚೆಲ್‌ ಸ್ಟಾರ್ಕ್‌, ಆಡಮ್‌ ಝಾಂಪ.

{headtohead_cricket_3_1}

Story first published: Sunday, June 9, 2019, 23:30 [IST]
Other articles published on Jun 9, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+