Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್‌: IND vs SA, ಹಿಟ್‌ಮ್ಯಾನ್‌ ಶತಕ, ಭಾರತಕ್ಕೆ ಭರ್ಜರಿ ಜಯ

ICC World Cup 2019 : ಟಾಸ್ ಸೋತು ಫೀಲ್ಡಿಂಗ್ ಗೆ ಬಂದರೂ ಬಾರತ ಫುಲ್ ಮಿಂಚಿಂಗ್..! | Oneindia Kannada
World Cup 2019 LIVE: India vs South Africa Match-8

ಸೌತ್‌ಹ್ಯಾಂಪ್ಟನ್‌, ಜೂನ್‌ 05: ಹಿಟ್‌ಮ್ಯಾನ್‌ ಖ್ಯಾತಿಯ ರೋಹಿತ್‌ ಶರ್ಮಾ ಸಿಡಿಸಿದ ಅಮೋಘ ಶತಕದ ಬಲದಿಂದ ಟೀಮ್‌ ಇಂಡಿಯಾ 12ನೇ ಆವೃತ್ತಿಯ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿನ ತನ್ನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು.

ವಿಶ್ವಕಪ್‌: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಪಂದ್ಯದ LIVE ಸ್ಕೋರ್‌ ಕಾರ್ಡ್‌

1
43651

ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್‌ ತಂಡವಾಗಿರುವ ಟೀಮ್‌ ಇಂಡಿಯಾ ಎದುರು ಇಲ್ಲಿನ ರೋಸ್‌ ಬೌಲ್ ಕ್ರೀಡಾಂಗಣದಲ್ಲಿ ಬುಧವಾರ ಟಾಸ್‌ ಗೆದ್ದ ದಕ್ಷಿಣ ಆಫ್ರಿಕಾ ತಂಡ ಮೊದಲು ಬ್ಯಾಟ್‌ ಮಾಡಿ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 229 ರನ್‌ಗಳ ಸಾಧಾರಣ ಮೊತ್ತವನ್ನಷ್ಟೇ ದಾಖಲಿಸಿತು.

ಒಂದು ಹಂತದಲ್ಲಿ ಅಲ್ಪ ಮೊತ್ತಕ್ಕೆ ಆಲ್‌ಔಟ್‌ ಆಗುವ ಆತಂಕದಲ್ಲಿದ್ದ ದ.ಆಫ್ರಿಕಾ ಅಂತಿಮವಾಗಿ ಫೆಹ್ಲುಕ್ವಾಯೊ (34) ಮತ್ತು ಕ್ರಿಸ್‌ ಮಾರಿಸ್‌ (42) ಅವರ ಹೋರಾಟದಿಂದ 200 ರನ್‌ಗಳ ಗಡಿ ದಾಟಿತು.

ಬಳಿಕ ಗುರಿ ಬೆನ್ನತ್ತಿದ ಟೀಮ್‌ ಇಂಡಿಯಾ 47.3 ಓವರ್‌ಗಳಲ್ಲಿ 230/4 ರನ್‌ಗಳನ್ನು ಚಚ್ಚಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಭಾರತ ಜೂನ್‌ 13ರಂದು ತನ್ನ ಎರಡನೇ ಪಂದ್ಯವನ್ನಾಡಲಿದ್ದು ಅಪಾಯಕಾರಿ ನ್ಯೂಜಿಲೆಂಡ್‌ ವಿರುದ್ಧ ಟ್ರೆಂಟ್‌ಬ್ರಿಡ್ಜ್‌ನಲ್ಲಿ ಪೈಪೋಟಿ ನಡೆಸಲಿದೆ.

ಹಿಟ್‌ಮ್ಯಾನ್‌ ಶತಕ ವೈಭವ

ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಬಲಿಷ್ಠ ಬೌಲರ್‌ಗಳನ್ನು ಬೆಂಡೆತ್ತಿದ ರೋಹಿತ್‌ ಶರ್ಮಾ, ಏಕದಿನ ಕ್ರಿಕೆಟ್‌ ವೃತ್ತಿ ಬದುಕಿನಲ್ಲಿ ತಮ್ಮ 23ನೇ ಶತಕ ಸಿಡಿಸಿ ಮಿಂಚಿದರು. 144 ಎಸೆತಗಳನ್ನು ಎದುರಿಸಿದ ರೋಹಿತ್‌, 13 ಫೋರ್‌ ಮತ್ತು 2 ಸಿಕ್ಸರ್‌ ಸಹಿತ ಅಜೇಯ 122 ರನ್‌ಗಳನ್ನು ಗಳಿಸಿ ತಂಡವನ್ನು ಏಕಾಂಗಿಯಾಗಿ ಜಯದ ದಡ ಮುಟ್ಟಿಸಿದರು.

ಸತತ ಎರಡು ಸೋಲುಂಡು ಟೀಮ್‌ ಇಂಡಿಯಾ ಎದುರು ಖಾತೆ ತೆರೆಯುವ ಲೆಕ್ಕಾಚಾರದಲ್ಲಿರುವ ಹರಿಣ ಪಡೆಗೆ ವಿರಾಟ್‌ ಕೊಹ್ಲಿ ಬಳಗ ತಮ್ಮ ಸಾಮರ್ಥ್ಯ ಏನೆಂಬುದನ್ನು ತೋರಿಸಿಕೊಟ್ಟಿದ್ದು, ಆರಂಭಿಕರಾದ ಹಶೀಮ್‌ ಆಮ್ಲಾ (6) ಮತ್ತು ಕ್ವಿಂಟನ್ ಡಿ'ಕಾಕ್‌ (10) ಅವರನ್ನು ಪೆವಿಲಿಯನ್‌ಗೆ ಅಟ್ಟಿದೆ. ವೇಗಿ ಜಸ್‌ಪ್ರೀತ್‌ ಬುಮ್ರಾ ಎರಡು ವಿಕೆಟ್‌ ಪಡೆದು ದಕ್ಷಿಣ ಆಫ್ರಿಕಾಗೆ ಆರಂಭಿಕ ಆಘಾತ ನೀಡಿದರು. ಪರಿಣಾಮ 11 ಓವರ್‌ಗಳ ಮುಕ್ತಾಯಕ್ಕೆ ದಕ್ಷಿಣ ಆಫ್ರಿಕಾ ತಂಡ 2 ವಿಕೆಟ್‌ಗೆ ಕೇವಲ 37 ರನ್‌ಗಳನ್ನು ಮಾತ್ರ ಗಳಿಸಿತ್ತು.

ಸ್ಪಿನ್ನರ್‌ಗಳ ಮೋಡಿ

ಬಳಿಕ ದಾಳಿಗಿಳಿದ ಲೆಗ್‌ ಸ್ಪಿನ್ನರ್‌ ಸತತ ಎರಡು ವಿಕೆಟ್‌ ಪಡೆದು ಇನಿಂಗ್ಸ್‌ ಕಟ್ಟುವ ಪ್ರಯತ್ನದಲ್ಲಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಭಾರಿ ಹೊಡೆತ ನೀಡಿದರು. ಕ್ರಿಸ್‌ನಲ್ಲಿ ಭದ್ರವಾಗಿ ನೆಲೆನಿಂತಿದ್ದ ಹರಿಣ ಪಡೆ ನಾಯಕ ಫಾಫ್‌ ಡು'ಪ್ಲೆಸಿಸ್‌ (38) ಮತ್ತು ವ್ಯಾನ್‌ ಡೆರ್‌ ಡುಸೆನ್‌ (22) ಅವರನ್ನು ಚಹಲ್‌ ಪೆವಿಲಿಯನ್‌ ಸೇರಿಸಿ ತಂಡಕ್ಕೆ ಪಂದ್ಯದ ಹಿಡಿತ ತಂದುಕೊಟ್ಟರು. ಬಳಿಕ ಬಂದ ಅಪಾಯಕಾರಿ ಬ್ಯಾಟ್ಸ್‌ಮನ್‌ ಜೆಪಿ ಡುಮಿನಿ (3) ಅವರನ್ನು ಚೈನಾಮನ್‌ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌ ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿದರು. ಇದರೊಂದಿಗೆ ದಕ್ಷಿಣ ಆಫ್ರಿಕಾ ತಂಡ 89 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡಿತು.

ಸಂಕ್ಷಿಪ್ತ ಸ್ಕೋರ್‌

ದಕ್ಷಿಣ ಆಫ್ರಿಕಾ: 50 ಓವರ್‌ಗಳಲ್ಲಿ 227/9 (ಫಾಫ್‌ ಡು'ಪ್ಲೆಸಿಸ್‌ 38, ಆಂಡಿಲ್‌ ಫೆಹ್ಲುಕ್ವಾಯೊ 34, ಕ್ರಿಸ್‌ ಮಾರಿಸ್‌ 42; ಯುಜ್ವೇಂದ್ರ ಚಹಲ್‌ 51ಕ್ಕೆ 4, ಭುವನೇಶ್ವರ್‌ ಕುಮಾರ್‌ 44ಕ್ಕೆ 2, ಜಸ್‌ಪ್ರೀತ್‌ ಬುಮ್ರಾ 35ಕ್ಕೆ 2, ಕುಲ್ದೀಪ್‌ ಯಾದವ್‌ 46ಕ್ಕೆ 1).

ಭಾರತ: 47.3 ಓವರ್‌ಗಳಲ್ಲಿ 230/4 (ರೋಹಿತ್‌ ಶಮರ್ಮಾ ಅಜೇಯ 122, ಕೆ.ಎಲ್‌ ರಾಹುಲ್‌ 26, ಎಂ.ಎಸ್‌ ಧೋನಿ 34, ಹಾದರ್ದಿಕ್‌ ಪಂಡ್ಯ ಅಜೇಯ 14; ಕಗಿಸೊ ರಬಾಡ 39ಕ್ಕೆ 2).

ವಿಶ್ವಕಪ್‌ ವೇಳಾಪಟ್ಟಿ ಮತ್ತು ಮುಖಾಮುಖಿ ದಾಖಲೆಗಳು

ಭಾರತ ಪ್ಲೇಯಿಂಗ್‌ 11: ರೋಹಿತ್‌ ಶರ್ಮಾ, ಶಿಖರ್‌ ಧವನ್‌, ವಿರಾಟ್‌ ಕೊಹ್ಲಿ (ನಾಯಕ), ಲೋಕೇಶ್‌ ರಾಹುಲ್‌, ಎಂ.ಎಸ್‌ ಧೋನಿ (ವಿಕೆಟ್‌ಕೀಪರ್‌), ಕೇದಾರ್‌ ಜಾಧವ್‌, ಹಾರ್ದಿಕ್‌ ಪಾಂಡ್ಯ, ಭುವನೇಶ್ವರ್‌ ಕುಮಾರ್‌, ಕುಲ್ದೀಪ್‌ ಯಾದವ್‌, ಯುಜ್ವೇಂದ್ರ ಚಹಲ್‌, ಜಸ್‌ಪ್ರೀತ್‌ ಬುಮ್ರಾ.

ದಕ್ಷಿಣ ಆಫ್ರಿಕಾ ಪ್ಲೇಯಿಂಗ್‌ 11: ಕ್ವಿಂಟನ್‌ ಡಿ'ಕಾಕ್‌(ವಿಕೆಟ್‌ಕೀಪರ್‌), ಹಶೀಮ್‌ ಆಮ್ಲಾ, ಫಾಫ್‌ ಡು'ಪ್ಲೆಸಿಸ್‌(ನಾಯಕ), ರಾಸಿ ವ್ಯಾನ್‌ ಡೆರ್‌ ಡುಸೆನ್‌, ಡೇವಿಡ್‌ ಮಿಲ್ಲರ್‌, ಜೀನ್‌ ಪಾಲ್‌ ಡುಮಿನಿ, ಆಂಡಿಲ್‌ ಫೆಹ್ಲುಕ್ವಾಯೊ, ಕ್ರಿಸ್‌ ಮಾರಿಸ್‌, ಕಗಿಸೊ ರಬಾಡ, ಇಮ್ರಾನ್‌ ತಾಹಿರ್‌, ತಬ್ರೇಝ್‌ ಶಾಮ್ಸಿ.

{headtohead_cricket_3_6}

Story first published: Wednesday, June 5, 2019, 23:35 [IST]
Other articles published on Jun 5, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+