For Quick Alerts
ALLOW NOTIFICATIONS  
For Daily Alerts
 

ಸೂಪರ್‌ ಓವರ್‌ನಲ್ಲಿ ವಿಶ್ವಕಪ್‌ ಗೆದ್ದು ಇತಿಹಾಸ ಬರೆದ ಇಂಗ್ಲೆಂಡ್‌

ICC World Cup 2019 : ಇದು ಇಂಗ್ಲೆಂಡ್ ತಂಡದ ಗೆಲುವಲ್ಲ..! ಆದರೂ ಇತಿಹಾಸ ಬರೆದ ಇಂಗ್ಲೆಂಡ್..! | ENG vs NZ
World Cup 2019 Live: New Zealand vs England, final

ಲಂಡನ್‌, ಜುಲೈ 14: ಕ್ಷಣ ಕ್ಷಣಕ್ಕೂ ಎದೆ ಬಡಿತ ಹೆಚ್ಚುವಂತೆ ಮಾಡುತ್ತಿದ್ದ ಅತ್ಯಂತ ರೋಚಕ ಫೈನಲ್‌ ಪಂದ್ಯದಲ್ಲಿ ಸೂಪರ್‌ ಓವರ್‌ ಕೂಡ ಸಮಬಲದಲ್ಲಿ ಅಂತ್ಯಗೊಂಡರೂ ಪಂದ್ಯದಲ್ಲಿ ಗಳಿಸಿದ ಒಟ್ಟು ಬೌಂಡರಿಗಳ ಆಧಾರದ ಮೇರೆಗೆ ನ್ಯೂಜಿಲೆಂಡ್‌ ವಿರುದ್ಧ ಜಯ ಸಾಧಿಸಿದ ಕ್ರಿಕೆಟ್‌ ಜನಕರ ತಂಡ ಇಂಗ್ಲೆಂಡ್‌ ಚೊಚ್ಚಲ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಗೆದ್ದು ಇತಿಹಾಸ ಬರೆಯಿತು.

1
43691

ಇಲ್ಲಿನ ಇತಿಹಾಸ ಪ್ರಸಿದ್ಧ ಕ್ರಿಕೆಟ್‌ ಕಾಶಿ ಎಂದೇ ಜನಪ್ರಿಯ ಗೊಂಡಿರುವ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಭಾನುವಾರ ಮೊದಲು ಬ್ಯಾಟ್‌ ಮಾಡಿದ ನ್ಯೂಜಿಲೆಂಡ್‌ ತಂಡ ಆತಿಥೇಯ ಇಂಗ್ಲೆಂಡ್‌ ತಂಡದ ಶಿಸ್ತಿನ ಬೌಲಿಂಗ್‌ ಎದುರು ಹೆಚ್ಚೇನು ಅಬ್ಬರಿಸಲಾಗದೆ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 241 ರನ್‌ಗಳ ಸಾಧಾರಣ ಮೊತ್ತ ದಾಖಲಿಸಿತು.

ಬಳಿಕ ಗುರಿ ಬೆನ್ನತ್ತಿದ ಇಂಗ್ಲೆಂಡ್‌ ತಂಡ 50 ಓವರ್‌ಗಳಲ್ಲಿ 241ಕ್ಕೆ ಆಲ್‌ಔಟ್‌ ಆಗುವ ಮೂಲಕ ಪಂದ್ಯವನ್ನು ಸೂಪರ್‌ ಓವರ್‌ಗೆ ಕೊಂಡೊಯ್ಯಿತು. ಇಂಗ್ಲೆಂಡ್‌ ಪರ ಅಜೇಯ 84 ರನ್‌ ಚೆಚ್ಚಿದ್ದ ಬೆನ್‌ ಸ್ಟೋಕ್ಸ್‌, ಬಳಿಕ ಸೂಪರ್‌ ಓವರ್‌ನಲ್ಲಿಯೂ ಬ್ಯಾಟ್‌ ಬೀಸಿದರು. ಜೋಸ್‌ ಬಟ್ಲರ್‌ ಜೊತೆಗೂಡಿ ಟ್ರೆಂಟ್‌ ಬೌಲ್ಟ್‌ ಎಸೆದ 6 ಎಸೆತಗಳಲ್ಲಿ 15 ರನ್‌ಗಳನ್ನು ಬಾರಿಸಿದರು.

ಬಳಿಕ ಸೂಪರ್‌ ಓವರ್‌ನಲ್ಲಿ ಗುರಿ ಬೆನ್ನತ್ತಿದ ನ್ಯೂಜಿಲೆಂಡ್‌ ತಂಡ ಜಿಮ್ಮಿ ನೀಶಮ್‌ ಸಿಡಿಸಿದ ಸಿಕ್ಸರ್‌ ನೊಂದಿದೆ ಸುಲಭವಾಗಿ ಗೆಲ್ಲುವ ಸೂಚನೆ ನೀಡಿತ್ತಾದರೂ, 24 ವರ್ಷದ ಯುವ ವೇಗಿ ಜೋಫ್ರಾ ಆರ್ಚರ್‌ ತಮ್ಮ ನೇರ ಮತ್ತು ನಿಖರತೆ ಕಾಯ್ದುಕೊಳ್ಳುವ ಮೂಲಕ ಓವರ್‌ನಲ್ಲಿ 15 ರನ್‌ಗಳನ್ನು ಬಿಟ್ಟುಕೊಟ್ಟು ತಂಡಕ್ಕೆ ಜಯ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು.

ಕೊನೆಯ ಎಸೆತದಲ್ಲಿ ನ್ಯೂಜಿಲೆಂಡ್‌ ತಂಡಕ್ಕೆ ಗೆಲ್ಲಲು 2 ರನ್‌ ಅಗತ್ಯವಿತ್ತು. ಸ್ಟ್ರೈಕ್‌ನಲ್ಲಿದ್ದ ಅನುಭವಿ ಬ್ಯಾಟ್ಸ್‌ಮನ್‌ ಮಾರ್ಟಿನ್‌ ಗಪ್ಟಿಲ್‌ ಮಿಡ್‌ ವಿಕೆಟ್‌ ಕಡೆಗೆ ಚೆಂಡನ್ನು ಬಾರಿಸಿ ಎರಡು ರನ್‌ ಕದಿಯಲು ವೇಗವಾಗಿ ಓಡಿದರಾದರೂ, ಎರಡನೇ ರನ್‌ ಪೂರೈಸಲು ಹಿಂದಿರುಗುವಾಗ ರನ್‌ಔಟ್‌ ಆದರು. ಸೂಪರ್‌ ಓವರ್‌ ಕೂಡ 15-15ರಲ್ಲಿ ಸಮಬಲ ಕಂಡಿತ್ತು. ಆದರೆ ಟೂರ್ನಿಯ ನಿಯಮದ ಪ್ರಕಾರ ಪಂದ್ಯದಲ್ಲಿ ಒಟ್ಟು ಬೌಂಡರಿಗಳಲ್ಲಿ ಯಾವ ತಂಡ ಹೆಚ್ಚು ಬೌಂಡರಿಗಳನ್ನು ದಾಖಲಿಸಿರುತ್ತದೋ ಆ ತಂಡಕ್ಕೆ ಜಯ ಪ್ರಾಪ್ತಿಯಾಗುತ್ತದೆ.

ಈ ನಿಟ್ಟಿನಲ್ಲಿ ಅತಿ ಹೆಚ್ಚು ಬೌಂಡರಿಗಳನ್ನು ಗಳಿಸಿದ್ದ ಇಂಗ್ಲೆಂಡ್‌ ಚೊಚ್ಚಲ ವಿಶ್ವಕಪ್‌ ಗೆದ್ದ ಸಂಭ್ರಮದಲ್ಲಿ ಮುಳುಗಿತು. ಮತ್ತೊಂದೆ ನ್ಯೂಜಿಲೆಂಡ್‌ ತಂಡ ಸತತ ಎರಡನೇ ಬಾರಿ ವಿಶ್ವಕಪ್‌ ಫೈನಲ್‌ನಲ್ಲಿ ಸೋತು ರನ್ನರ್ಸ್‌ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟಿತು. ಈ ಮೂಲಕ ಇಂಗ್ಲೆಂಡ್‌ ತಂಡ ಸೂಪರ್‌ ಓವರ್‌ ಮೂಲಕ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಗೆದ್ದ ವಿಶ್ವದ ಮೊತ್ತ ಮೊದಲ ತಂಡವೆನಿಸಿತು.

ಸಂಕ್ಷಿಪ್ತ ಸ್ಕೋರ್‌

ನ್ಯೂಜಿಲೆಂಡ್‌: 50 ಓವರ್‌ಗಳಲ್ಲಿ 241/8 (ಹೆನ್ರಿ ನಿಕೋಲ್ಸ್‌ 55, ಕೇನ್‌ ವಿಲಿಯಮ್ಸನ್‌ 30, ಟಾಮ್‌ ಲೇಥಮ್‌ 47: ಕ್ರಿಸ್‌ ವೋಕ್ಸ್‌ 37ಕ್ಕೆ 3, ಲಿಯಾಮ್‌ ಪ್ಲಂಕೆಟ್‌ 42ಕ್ಕೆ 3).

ಇಂಗ್ಲೆಂಡ್‌: 50 ಓವರ್‌ಗಳಲ್ಲಿ 241/10 (ಜಾನಿ ಬೈರ್‌ಸ್ಟೋವ್‌ 36, ಬೆನ್‌ ಸ್ಟೋಕ್ಸ್‌ ಅಜೇಯ 84, ಜೋಸ್‌ ಬಟ್ಲರ್‌ 59, ಲಾಕಿ ಫರ್ಗ್ಯೂಸನ್‌ 50ಕ್ಕೆ 3, ಜಿಮ್ಮಿ ನೀಶಮ್‌ 43ಕ್ಕೆ 3).

ಸೂಪರ್‌ ಓವರ್‌ ವಿವರ

ಇಂಗ್ಲೆಂಡ್‌: ಬೆನ್‌ ಸ್ಟೋಕ್ಸ್‌ ಮತ್ತು ಜೋಸ್‌ ಬಟ್ಲರ್‌

3, 1, 4, 1, 2, 4 (15)

ನ್ಯೂಜಿಲೆಂಡ್‌: ಜಿಮ್ಮಿ ನೀಶಮ್‌ ಮತ್ತು ಮಾಟರ್ಟಿನ್‌ ಗಪ್ಟಿಲ್‌

0ವೈಡ್‌, 2, 6, 2, 2, 1, 1ರನ್‌ಔಟ್‌ (15)

ತಂಡಗಳ ವಿವರ

ನ್ಯೂಜಿಲೆಂಡ್‌ (ಪ್ಲೇಯಿಂಗ್‌ 11): ಮಾರ್ಟಿನ್‌ ಗಪ್ಟಿಲ್‌, ಹೆನ್ರಿ ನಿಕೋಲ್ಸ್‌, ಕೇನ್‌ ವಿಲಿಯಮ್ಸನ್‌ (ನಾಯಕ), ರಾಸ್‌ ಟೇಲರ್‌, ಜೇಮ್ಸ್‌ ನೀಶಮ್‌, ಟಾಮ್‌ ಲೇಥಮ್‌ (ವಿಕೆಟ್‌ಕೀಪರ್‌), ಕಾಲಿನ್‌ ಡಿ'ಗ್ರ್ಯಾಂಡ್‌ಹೋಮ್‌, ಮಿಚೆಲ್‌ ಸ್ಯಾಂಟ್ನರ್‌, ಮ್ಯಾಟ್‌ ಹೆನ್ರಿ, ಟ್ರೆಂಟ್‌ ಬೌಲ್ಟ್‌, ಲಾಕಿ ಫರ್ಗ್ಯೂಸನ್‌.

ಇಂಗ್ಲೆಂಡ್‌ (ಪ್ಲೇಯಿಂಗ್‌ 11): ಜಾನಿ ಬೈರ್‌ಸ್ಟೋವ್‌, ಜೋ ರೂಟ್‌, ಐಯಾನ್‌ ಮಾರ್ಗನ್‌ (ನಾಯಕ), ಬೆನ್‌ ಸ್ಟೋಕ್ಸ್‌, ಜೋಸ್ ಬಟ್ಲರ್‌ (ವಿಕೆಟ್‌ಕೀಪರ್‌), ಕ್ರಿಸ್‌ ವೋಕ್ಸ್‌, ಲಿಯಾಮ್‌ ಪ್ಲಂಕೆಟ್‌, ಜೋಫ್ರಾ ಆರ್ಚರ್‌, ಆದಿಲ್‌ ರಶೀದ್‌.

{headtohead_cricket_4_2}

Story first published: Monday, July 15, 2019, 0:37 [IST]
Other articles published on Jul 15, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+