For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್: ವಿಲಿಯಮ್ಸನ್, ಗ್ರ್ಯಾಂಡ್‌ಹೋಮ್ ಆಟಕ್ಕೆ ತಲೆ ಬಾಗಿದ ದಕ್ಷಿಣ ಆಫ್ರಿಕಾ

World Cup 2019 Live: New Zealand vs South Africa, Match-25

ಬರ್ಮಿಂಗ್‌ಹ್ಯಾಮ್‌, ಜೂನ್‌ 19: ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್‌ನಲ್ಲಿ ಬುಧವಾರ (ಜೂನ್ 19) ನಡೆದ ವಿಶ್ವಕಪ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ ಸೋಲಿನ ಮುಖಭಂಗ ಅನುಭವಿಸಿದೆ. ಫಾ ಡು ಪ್ಲೆಸಿಸ್ ಬಳಗ ಕೇನ್ ವಿಲಿಯಮ್ಸ್ ಪಡೆಗೆ 4 ವಿಕೆಟ್‌ನಿಂದ ಶರಣಾಗಿದೆ. ದಕ್ಷಿಣ ಆಫ್ರಿಕಾಕ್ಕೆ ಟೂರ್ನಿಯಲ್ಲಿ ಲಭಿಸುತ್ತಿರುವ 4ನೇ ಸೋಲಿದು.

ಮಳೆಯಿಂದಾಗಿ ಒಂದು ಗಂಟೆಗೂ ಹೆಚ್ಚು ಸಮಯ ತಡವಾಗಿ ಶುರುವಾದ ಪ್ರಸಕ್ತ ವಿಶ್ವಕಪ್‌ ಟೂರ್ನಿಯ 25ನೇ ಲೀಗ್‌ ಪಂದ್ಯದಲ್ಲಿ ಕಳೆದ ಬಾರಿಯ ರನ್ನರ್ಸ್‌ಅಪ್‌ ನ್ಯೂಜಿಲೆಂಡ್‌ ತಂಡ, ಇಲ್ಲಿನ ಎಜ್‌ಬಾಸ್ಟನ್‌ ಅಂಗಣದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಮೊದಲು ಬ್ಯಾಟ್‌ ಮಾಡಲು ಆಹ್ವಾನ ನೀಡಿ 49 ಓವರ್‌ಗಳಲ್ಲಿ241/6 ರನ್‌ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿತ್ತು. ಮಳೆ ಅಡಚಣೆ ಕಾರಣ ಪಂದ್ಯವನ್ನು 49 ಓವರ್‌ಗಳಿಗೆ ಸೀಮಿತ ಗೊಳಿಸಲಾಯಿತು.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಪಂದ್ಯದ ಲೈವ್‌ ಸ್ಕೋರ್‌ ಕಾರ್ಡ್‌

1
43668

ದಕ್ಷಿಣ ಆಫ್ರಿಕಾ ಪರ ಹಶೀಮ್‌ ಆಮ್ಲಾ (55), ಮತ್ತು ವ್ಯಾನ್‌ ಡೆರ್‌ ಡುಸೆನ್‌ (ಔಟಾಗದೆ 67 ರನ್‌) ಅರ್ಧಶತಕಗಳನ್ನು ದಾಖಲಿಸಿ ತಂಡದ ಮೊತ್ತವನ್ನು 200ರ ಗಡಿ ದಾಟುವಂತೆ ನೋಡಿಕೊಂಡರು. ಉಳಿದ ಬ್ಯಾಟ್ಸ್‌ಮನ್‌ಗಳಲ್ಲಿ ಕೆಲವರು ಉತ್ತಮ ಆರಂಭ ಪಡೆದರೂ ದೊಡ್ಡ ಮೊತ್ತವನ್ನಾಗಿ ಪರಿವರ್ತಿಸುವಲ್ಲಿ ವಿಫಲರಾದರು.

ಕಿವೀಸ್‌ ಪರ ಮಿಂಚಿನ ದಾಳಿ ಸಂಘಟಿಸಿದ ವೇಗದ ಬೌಲರ್‌ ಲಾಕಿ ಫರ್ಗ್ಯೂಸನ್ 59ಕ್ಕೆ 3 ವಿಕೆಟ್‌ ಉರುಳಿಸಿ ಯಶಸ್ವಿ ಬೌಲರ್‌ ಎನಿಸಿದರೆ, ಟ್ರೆಂಟ್‌ ಬೌಲ್ಟ್‌, ಕಾಲಿನ್‌ ಡಿ'ಗ್ರ್ಯಾಂಡ್‌ ಹೋಮ್‌ ಮತ್ತು ಮಿಚೆಲ್‌ ಸ್ಯಾಂಟ್ನರ್‌ ತಲಾ ಒಂದು ವಿಕೆಟ್‌ ಪಡೆದು ಉತ್ತಮ ಸಾಥ್‌ ನೀಡಿದರು.

ಸಾಧಾರಣ ರನ್ ಗುರಿ ಬೆಂಬತ್ತಿದ್ದ ನ್ಯೂಜಿಲೆಂಡ್‌ಗೆ ಮಾರ್ಟಿನ್ ಗಪ್ಟಿಲ್ 35, ನಾಯಕ ಕೇನ್ ವಿಲಿಯಮ್ಸನ್ 106, ಜೇಮ್ಸ್ ನೀಶಮ್ 23, ಕಾಲಿನ್ ಡೆ ಗ್ರ್ಯಾಂಡ್‌ ಹೋಮ್ 63 ರನ್ ಬೆಂಬಲ ಲಭಿಸಿತು. ಕಿವೀಸ್ 48.3ನೇ ಓವರ್‌ಗೆ 6 ವಿಕೆಟ್ ನಷ್ಟದಲ್ಲಿ 245 ರನ್ ಬಾರಿಸಿತು.

ಕಿವೀಸ್ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾದ ಕ್ರಿಸ್ ಮೀರಿಸ್ 3, ಕಾಗಿಸೋ ರಬಾಡಾ, ಲುಂಗಿ ಸಾನಿ ಎನ್‌ಗಿಡಿ ಮತ್ತು ಆಂಡಿಲೆ ಫೆಹ್ಲುಕ್ವಾಯೊ ತಲಾ 1 ವಿಕೆಟ್ ಪಡೆದರು. ಕೇನ್ ವಿಲಿಯಮ್ಸನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಸಂಕ್ಷಿಪ್ತ ಸ್ಕೋರ್‌

ದಕ್ಷಿಣ ಆಫ್ರಿಕಾ: 49 ಓವರ್‌ಗಳಲ್ಲಿ 241/6 (ಹಶೀಮ್‌ ಆಮ್ಲಾ 55, ಫಾಫ್‌ ಡು'ಪ್ಲೆಸಿಸ್‌ 23, ಏಡೆನ್‌ ಮಾರ್ಕ್ರಮ್‌ 38, ವ್ಯಾನ್‌ ಡೆ ಡುಸೆನ್‌ ಔಟಾಗದೆ 68, ಡೇವಿಡ್‌ ಮಿಲ್ಲರ್‌ 36; ಲಾಕಿ ಫರ್ಗ್ಯೂಸನ್‌ 59ಕ್ಕೆ 3).

ತನ್ನ ಮೊದಲ ನಾಲ್ಕು ಪಂದ್ಯಗಳಲ್ಲಿ ಸೋತು ಸುಣ್ಣವಾಗಿರುವ ದಕ್ಷಿಣ ಆಫ್ರಿಕಾ ತಂಡ ಕಳೆದ ಪಂದ್ಯದಲ್ಲಿ ಅಫಘಾನಿಸ್ತಾನವನ್ನು ಮಣಿಸಿ ಮೊದಲ ಜಯದ ಸವಿಯುಂಡಿತ್ತು. ಮತ್ತೊಂದೆಡೆ ಸೋಲೇ ಕಾಣದಂತೆ ಅಜೇಯವಾಗಿ ಮುನ್ನಡೆಯುತ್ತಿರುವ ನ್ಯೂಜಿಲೆಂಡ್‌ ತಂಡ ಅಂಕಪಟ್ಟಿಯಲ್ಲಿ ಮರಳಿ ಅಗ್ರಸ್ಥಾನಕ್ಕೇರುವ ಲೆಕ್ಕಾಚಾರದಲ್ಲಿತ್ತು. ಇದೇ ವೇಳೆ ಗಾಯದ ಸಮಸ್ಯೆಯಿಂದ ಚೇತರಿಸಿರುವ ದಕ್ಷಿಣ ಆಫ್ರಿಕಾದ ಪ್ರಮುಖ ಬೌಲರ್‌ ಲುಂಗಿ ಎನ್ಗಿಡಿ ಆಡುವ 11ರ ಬಳಗಕ್ಕೆ ಮರಳಿದರು.

ತಂಡಗಳ ವಿವರ

ದಕ್ಷಿಣ ಆಫ್ರಿಕಾ (ಪ್ಲೇಯಿಂಗ್‌ 11): ಹಶೀಮ್‌ ಆಮ್ಲಾ, ಕ್ವಿಂಟನ್‌ ಡಿ'ಕಾಕ್‌ (ವಿಕೆಟ್‌ಕೀಪರ್‌), ಏಡೆನ್‌ ಮಾರ್ಕ್ರಮ್‌, ಫಾಫ್‌ ಡು'ಪ್ಲೆಸಿಸ್‌ (ನಾಯಕ), ರಾಸಿ ವ್ಯಾನ್‌ ಡೆರ್‌ ಡುಸೆನ್‌, ಡೇವಿಡ್‌ ಮಿಲ್ಲರ್‌, ಆಂಡಿಲ್‌ ಫೆಹ್ಲುಕ್ವಾಯೊ, ಕ್ರಿಸ್‌ ಮಾರಿಸ್‌, ಕಗಿಸೊ ರಬಾಡ, ಲುಂಗಿ ಎನ್ಗಿಡಿ, ಇಮ್ರಾನ್‌ ತಾಹಿರ್‌.

ನ್ಯೂಜಿಲೆಂಡ್‌ (ಪ್ಲೇಯಿಂಗ್‌ 11): ಮಾರ್ಟಿನ್‌ ಗಪ್ಟಿಲ್‌, ಕಾಲಿನ್‌ ಮನ್ರೊ, ಕೇನ್‌ ವಿಲಿಯಮ್ಸನ್‌ (ನಾಯಕ), ರಾಸ್‌ ಟೇಲರ್‌, ಟಾಮ್‌ ಲೇಥಮ್‌ (ವಿಕೆಟ್‌ಕೀಪರ್‌), ಜಿಮ್ಮಿ ನೀಶಮ್‌, ಕಾಲಿನ್‌ ಡಿ'ಗ್ರ್ಯಾಂಡ್‌ಹೋಮ್‌, ಮಿಚೆಲ್‌ ಸ್ಯಾಂಟ್ನರ್‌, ಮ್ಯಾಟ್‌ ಹೆನ್ರಿ, ಲಾಕಿ ಫಗ್ರ್ಯೂಸನ್‌, ಟ್ರೆಂಟ್‌ ಬೌಲ್ಟ್‌.

{headtohead_cricket_6_4}

Story first published: Thursday, June 20, 2019, 10:31 [IST]
Other articles published on Jun 20, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+