Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್‌: ಬಲಿಷ್ಠ ದಕ್ಷಿಣ ಆಫ್ರಿಕಾಕ್ಕೆ ಆಘಾತ ನೀಡಿದ ಬಾಂಗ್ಲಾದೇಶ!

World Cup 2019 LIVE: South Africa vs Bangladesh, Match-5

ಲಂಡನ್‌, ಜೂನ್‌ 02: ಬ್ಯಾಟಿಂಗ್‌, ಬೌಲಿಂಗ್‌ ಮತ್ತು ಫೀಲ್ಡಿಂಗ್‌ ಎಲ್ಲ ವಿಭಾಗಗಳಲ್ಲಿಯೂ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಮೀರಿಸಿದ ಬಾಂಗ್ಲಾದೇಶ ತಂಡ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ನ 12ನೇ ಆವೃತ್ತಿಯ ಟೂರ್ನಿಯಲ್ಲಿ ಶುಭಾರಂಭ ಮಾಡಿದರೆ, ಮತ್ತೊಮ್ಮೆ ಚೋಕರ್ಸ್‌ ಹಣೆಪಟ್ಟಿಯನ್ನು ಬಗಿ ಮಾಡಿಕೊಳ್ಳುತ್ತಿರುವ ದಕ್ಷಿಣ ಆಫ್ರಿಕಾ ತಂಡ ಸತತ 2ನೇ ಸೋಲಿನ ಆಘಾತಕ್ಕೊಳಗಾಗಿದೆ.

ವಿಶ್ವಕಪ್‌: ಬಾಂಗ್ಲಾದೇಶ-ದಕ್ಷಿಣ ಆಫ್ರಿಕಾ ನಡುವಣ ಪಂದ್ಯದ LIVE ಸ್ಕೋರ್‌ ಕಾರ್ಡ್‌

1
43648

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು

ಇಲ್ಲಿನ ಕೆನ್ನಿಂಗ್ಟನ್‌ ಓವಲ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಬಾಂಗ್ಲಾದೇಶ ತಂಡದ ಬ್ಯಾಟ್ಸ್‌ಮನ್‌ಗಳು ತಂಡಕ್ಕೆ 50 ಓವರ್‌ಗಳಲ್ಲಿ 330/6 ರನ್‌ಗಳ ಬೃಹತ್‌ ಮೊತ್ತ ತಂದುಕೊಟ್ಟರು. ಇದು ವಿಶ್ವಕಪ್‌ ಟೂನರ್ನಿಯಲ್ಲಿ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಬಾಂಗ್ಲಾದೇಶ ತಂಡದ ಗರಿಷ್ಠ ಮೊತ್ತವಾಗಿದೆ.

ಬಳಿಕ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ ಉತ್ತಮ ಆರಂಭದೊಂದಿಗೆ ಮುನ್ನಡೆಯಿತಾದರೂ ನಿರ್ಣಾಯಕ ಘಟ್ಟಗಳಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡು ಒತ್ತಡಕ್ಕೆ ಸಿಲುಕುವ ಮೂಲಕ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 309 ರನ್‌ಗಳನ್ನು ಗಳಿಸಲಷ್ಟೇ ಶಕ್ತವಾಯಿತು.

ಇದಕ್ಕೂ ಮೊದಲು ಅನುಭವಿ ಬ್ಯಾಟ್ಸ್‌ಮನ್‌ಗಳಾದ ಶಾಕಿಬ್‌ ಅಲ್‌ ಹಸನ್ (75) ಮತ್ತು ಮುಷ್ಫಿಕರ್‌ ರಹೀಮ್‌ (78) ತಲಾ ಅರ್ಧಶತಕ ದಾಖಲಿಸಿ ಮೂರನೇ ವಿಕೆಟ್‌ಗೆ 142 ರನ್‌ಗಳ ದಾಖಲೆಯ ಜೊತೆಯಾಟ ನಡೆಸಿ ತಂಡವನ್ನು ಬೃಹತ್‌ ಮೊತ್ತದ ಕಡೆಗೆ ಕೊಂಡೊಯ್ದರು.

ಸಂಕ್ಷಿಪ್ತ ಸ್ಕೋರ್‌

ಬಾಂಗ್ಲಾದೇಶ: 50 ಓವರ್‌ಗಳಲ್ಲಿ 330/6 (ಸೌಮ್ಯ ಸರ್ಕಾರ್‌ 42, ಶಾಕಿಬ್‌ ಅಲ್‌ ಹಸನ್‌ 75, ಮುಷ್ಫಿಕರ್‌ ರಹೀಮ್‌ 78, ಮಹ್ಮೂದುಲ್ಲ ಔಟಾಗದೆ 46; ಆಂಡಿಲ್‌ ಫೆಹ್ಲುಕ್ವಾಯೊ 52ಕ್ಕೆ 2, ಕ್ರಿಸ್‌ ಮಾರಿಸ್‌ 73ಕ್ಕೆ 2, ಇಮ್ರಾನ್‌ ತಾಹಿರ್‌ 57ಕ್ಕೆ 2).

ದಕ್ಷಿಣ ಆಫ್ರಿಕಾ: 50 ಓವರ್‌ಗಳಲ್ಲಿ 309/8 (ಏಡೆನ್‌ ಮಾರ್ಕ್ರಮ್‌ 45, ಫಾಫ್‌ ಡು'ಪ್ಲೆಸಿಸ್‌ 62, ಡೇವಿಡ್‌ ಮಿಲ್ಲರ್‌ 38, ವ್ಯಾನ್‌ ಡೆರ್‌ ಡುಸಾನ್‌ 41, ಜೆಪಿ ಡುಮಿನಿ 45; ಮುಸ್ತಾಫಿಜುರ್‌ ರೆಹ್ಮಾನ್‌ 67ಕ್ಕೆ 3, ಮೊಹಮ್ಮದ್‌ ಸೈಫುದ್ದೀನ್‌ 57ಕ್ಕೆ 2).

ತಂಡಗಳ ವಿವರ

ಬಾಂಗ್ಲಾದೇಶ ಪ್ಲೇಯಿಂಗ್‌ 11: ತಮೀಮ್‌ ಇಕ್ಬಾಲ್‌, ಸೌಮ್ಯ ಸರ್ಕಾರ್‌, ಶಾಕಿಬ್‌ ಅಲ್‌ ಹಸನ್‌, ಮುಷ್ಫಿಕರ್‌ ರಹೀಮ್‌ (ವಿಕೀ), ಮೊಹಮ್ಮದ್‌ ಮಿಥುನ್‌, ಮಹ್ಮೂದುಲ್ಲಾ, ಮೊಸಾದೆಕ್‌ ಹೊಸೇನ್‌, ಮೊಹಮ್ಮದ್‌ ಸೈಫುದ್ದೀನ್‌, ಮೆಹ್ದಿ ಹಸನ್‌, ಮಶ್ರಫೆ ಮೊರ್ತಾಝಾ (ನಾಯಕ), ಮುಸ್ತಾಫಿಜುರ್‌ ರೆಹ್ಮಾನ್‌.

ದಕ್ಷಿಣ ಆಫ್ರಿಕಾ ಪ್ಲೇಯಿಂಗ್‌ 11: ಕ್ವಿಂಟನ್‌ ಡಿ;ಕಾಕ್‌ (ವಿಕೀ), ಏಡನ್‌ ಮಾರ್ಕ್ರಮ್‌, ಫಾಫ್‌ ಡು'ಪ್ಲೆಸಿಸ್‌ (ನಾಯಕ), ರಾಸಿ ವ್ಯಾನ್‌ ಡೆರ್‌ ಡುಸಾನ್‌, ಜೆಪಿ ಡುಮಿನಿ, ಡೇವಿಡ್‌ ಮಿಲ್ಲರ್‌, ಆಂಡಿಲ್‌ ಫೆಹ್ಲುಕ್ವಾಯೊ, ಕ್ರಿಸ್‌ ಮಾರಿಸ್‌, ಕಗಿಸೊ ರಬಾಡ, ಲುಂಗಿ ಎನ್ಗಿಡಿ, ಇಮ್ರಾನ್‌ ತಾಹಿರ್‌.

Story first published: Sunday, June 2, 2019, 23:13 [IST]
Other articles published on Jun 2, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+