ಮೈಕಲ್ ವಾನ್ ಮನ ಗೆದ್ದ ಟೀಮ್ ಇಂಡಿಯಾದ ಅಭಿಮಾನಿ!

ಬರ್ಮಿಂಗ್‌ಹ್ಯಾಮ್, ಜುಲೈ 02: ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಎಲ್ಲಾ ಪಂದ್ಯಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಸೇರುತ್ತಿರುವ ಪ್ರೇಕ್ಷಕರು ತಮ್ಮ ತಂಡವನ್ನು ಹುರಿದುಂಬಿಸುವುದರಲ್ಲಿ ಉಳಿದೆಲ್ಲಾ ತಂಡಗಳ ಅಭಿಮಾನಿಗಳಿಗಿಂತಲೂ ಮುಂದಿದ್ದಾರೆ.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ
ಅಂದಹಾಗೆ ಮಂಗಳವಾರ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದ ವೇಳೆ ಟೀಮ್ ಇಂಡಿಯಾದ ಅಭಿಮಾನಿಯೊಬ್ಬರ ಚಿತ್ರ ವೈರಲ್ ಆಗಿತ್ತು. ಇಳಿವಯಸ್ಸಿನ ಮಹಿಳೆ ಒಬ್ಬರು ಬಾಯಲ್ಲಿ ತುತ್ತೂರಿ ಊದುತ್ತಾ ಭಾರತ ತಂಡಕ್ಕೆ ಪ್ರೋತ್ಸಾಹಿಸುತ್ತಿದ್ದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆಯ ಸುರಿಮಳೆಯನ್ನೇ ಗಿಟ್ಟಿಸಿತು.
ಅದರಲ್ಲೂ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್, ಮೆನ್ ಇನ್ ಬ್ಲೂ ಪಡೆಗೆ ಪ್ರೋತ್ಸಾಹಿಸುತ್ತಿದ್ದ ಮುದುಕಿಯ ಉತ್ಸಾಹ ಕಂಡು ಫುಲ್ ಫಿದಾ ಆಗಿದ್ದರು. ಅಷ್ಟೇ ಅಲ್ಲದೆ "ಇದು ವಿಶ್ವಕಪ್ ಟೂರ್ನಿಯ ಅತ್ಯುತ್ತಮ ಚಿತ್ರ" ಎಂದು ಟ್ವೀಟ್ ಕೂಡ ಮಾಡಿದ್ದಾರೆ.
ಇದೇ ವೇಳೆ ಟ್ವೀಟಿಗರು ಕೂಡ ತಾವೇನು ಕಮ್ಮಿ ಇಲ್ಲ ಎಂಬಂತೆ ಟೀಮ್ ಇಂಡಿಯಾದ ನೂತನ ಚಿಯರ್ ಲೀಡರ್‌ಗೆ ಮೆಚ್ಚುಗೆಯ ಸುರಿಮಳೆ ಹರಿಸಿದ್ದಾರೆ "ವಿಮೆನ್ ಆಫ್ ದಿ ಮ್ಯಾಚ್" ಎಂದೆಲ್ಲಾ ಹೊಗಳಿದ್ದಾರೆ. ಮತ್ತೂ ಕೆಲವರು ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಕಾಣಲು ಸಿಕ್ಕ ಅದ್ಭುತ ಚಿತ್ರವಿದು ಎಂದೆಲ್ಲಾ ಗುಣಗಾನ ಮಾಡಿದ್ದಾರೆ.
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 314 ರನ್‌ಗಳನ್ನು ದಾಖಲಿಸಿತು. ರೋಹಿತ್ ಶರ್ಮಾ ಪ್ರಸಕ್ತ ವಿಶ್ವಕಪ್‌ನಲ್ಲಿ ನಾಲ್ಕನೇ ಶತಕ ಸಿಡಿಸಿ ತಂಡಕ್ಕೆ ಬೃಹತ್ ಮೊತ್ತ ತಂದುಕೊಟ್ಟರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications