Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್: ಮೆಗ್ರಾತ್ ವಿಶ್ವದಾಖಲೆ ಮುರಿದ ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್

World Cup 2019: Mitchell Starc scripts World Cup history against England

ಬರ್ಮಿಂಗ್‌ಹ್ಯಾಮ್, ಜುಲೈ 12: ವಿಶ್ವಕಪ್‌ ಒಂದೇ ಆವೃತ್ತಿಯಲ್ಲಿ ಅತ್ಯಧಿಕ ವಿಕೆಟ್ ದಾಖಲೆ ಹೊಂದಿದ್ದ ಆಸ್ಟ್ರೇಲಿಯಾ ಮಾಜಿ ವೇಗಿ ಗ್ಲೆನ್ ಮೆಗ್ರಾತ್ ಅವರನ್ನು ಆಸೀಸ್ ವೇಗಿಯೇ ಆದ ಮಿಚೆಲ್ ಸ್ಟಾರ್ ಸರಿಗಟ್ಟಿದ್ದಾರೆ. ಐಸಿಸಿ ವಿಶ್ವಕಪ್ 2019ರಲ್ಲಿ ಸ್ಟಾರ್ಕ್ ಒಟ್ಟಿಗೆ 27 ವಿಕೆಟ್‌ಗಳನ್ನು ಪಡೆದುಕೊಳ್ಳುವುದರೊಂದಿಗೆ ಇತಿಹಾಸ ನಿರ್ಮಿಸಿದ್ದಾರೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್‌ನಲ್ಲಿ ಗುರುವಾರ (ಜುಲೈ 11) ನಡೆದ ವಿಶ್ವಕಪ್ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಮಿಚೆಲ್ ಸ್ಟಾರ್ಕ್ ಈ ಮೈಲಿಗಲ್ಲು ಸ್ಥಾಪಿಸಿದರು. ಇಂಗ್ಲೆಂಡ್ ಇನ್ನಿಂಗ್ಸ್‌ನ 18ನೇ ಓವರ್‌ನಲ್ಲಿ ಆರಂಭಿಕ ಬ್ಯಾಟ್ಸ್ಮನ್ ಜಾನಿ ಬೇರ್ಸ್ಟೋವ್ ವಿಕೆಟ್ ಮುರಿಯುವುದರ ಮೂಲಕ ಸ್ಟಾರ್ಕ್ ಅಪೂರ್ವ ಸಾಧನೆ ಮೆರೆದರು.

2007ರ ವಿಶ್ವಕಪ್‌ನಲ್ಲಿ ಒಟ್ಟು 26 ವಿಕೆಟ್‌ ಸಾಧನೆಯೊಂದಿಗೆ ಮೆಗ್ರಾತ್ ಈ ದಾಖಲೆ ನಿರ್ಮಿಸಿದ್ದರು. ಆ ಟೂರ್ನಿಯಲ್ಲಿ ಆಸ್ಟ್ರೇಲಿಯಾವೇ ಚಾಂಪಿಯನ್ ಆಗಿ ಹೊರಮೊಮ್ಮಿತ್ತು. ಆದರೆ ಗುರುವಾರದ ಪಂದ್ಯ ಆಸೀಸ್ ಪಾಲಿಗೆ ನಿರಾಸೆ ಮೂಡಿಸಿದೆ. 8 ವಿಕೆಟ್‌ ಸುಲಭ ಜಯ ಸಾಧಿಸಿದ ಇಯಾನ್ ಮಾರ್ಗನ್ ಬಳಗ ಫೈನಲ್ ಪ್ರವೇಶಿಸಿದೆ.

ವಿಶ್ವಕಪ್ ಒಂದೇ ಆವೃತ್ತಿಯಲ್ಲಿ ಅತ್ಯಧಿಕ ವಿಕೆಟ್ ಸಾಧಕರ ಪಟ್ಟಿಯಲ್ಲಿ ಸ್ಟಾರ್ಕ್ 27 ವಿಕೆಟ್‌ಗಳೊಂದಿಗೆ ಮೊದಲ ಸ್ಥಾನ (2019), ಗ್ಲೆನ್ ಮೆಗ್ರಾತ್ 26 ವಿಕೆಟ್‌ಗಳೊಂದಿಗೆ ದ್ವಿತೀಯ ಸ್ಥಾನ (2007), ಶ್ರೀಲಂಕಾದ ಚಮಿಂಡ ವಾಸ್ 23 ವಿಕೆಟ್‌ಗಳೊಂದಿಗೆ ತೃತೀಯ ಸ್ಥಾನ (2003), ಆಸೀಸ್‌ನ ಶಾನ್ ಟೇಟ್ (23 ವಿಕೆಟ್, 2007), ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ (23 ವಿಕೆಟ್, 2007) ಅನಂತರದ ಸ್ಥಾನಗಳಲ್ಲಿದ್ದಾರೆ.

ಬರ್ಮಿಂಗ್‌ಹ್ಯಾಮ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿದ ಆಸ್ಟ್ರೇಲಿಯಾ 49 ಓವರ್‌ಗೆ ಸರ್ವ ಪತನ ಕಂಡು 223 ರನ್ ಬಾರಿಸಿತ್ತು. ಇಂಗ್ಲೆಂಡ್ 32.1 ಓವರ್‌ಗೆ 2 ವಿಕೆಟ್ ನಷ್ಟದಲ್ಲಿ 226 ರನ್ ಪೇರಿಸಿತು. ಇದರೊಂದಿಗೆ ಇಂಗ್ಲೆಂಡ್ ತಂಡ 1992ರ ಬಳಿಕ ಇದೇ ಮೊದಲ ಬಾರಿಗೆ ವಿಶ್ವಕಪ್ ಫೈನಲ್‌ಗೆ ಪ್ರವೇಶಿಸಿದೆ.

Story first published: Friday, July 12, 2019, 10:36 [IST]
Other articles published on Jul 12, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+