Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅದ್ಭುತ ಕ್ಯಾಚ್ ಮೂಲಕ ಬ್ರಾಥ್‌ವೈಟ್ ಪೆವಿಲಿಯನ್‌ಗಟ್ಟಿದ ಧೋನಿ: ವಿಡಿಯೋ

World Cup 2019: MS Dhoni takes a stunning catch to dismiss Brathwaite

ಮ್ಯಾನ್ಚೆಸ್ಟರ್, ಜೂನ್ 28: ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ಅರ್ಧಶಕದ ಬೆಂಬಲದೊಂದಿಗೆ ಗುರುವಾರ (ಜೂನ್ 27) ನಡೆದ ವಿಶ್ವಕಪ್ ಪಂದ್ಯದಲ್ಲಿ ಭಾರತ, ವೆಸ್ಟ್ ಇಂಡೀಸ್ ವಿರುದ್ಧ 125 ರನ್ ಗೆಲುವನ್ನಾಚರಿಸಿತು. ಇದೇ ಪಂದ್ಯದಲ್ಲಿ ಮಾಜಿ ನಾಯಕ ಧೋನಿ ಅದ್ಭುತ ಕ್ಯಾಚ್‌ಗಾಗಿ ಗಮನ ಸೆಳೆದರು.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ವೆಸ್ಟ್ ಇಂಡೀಸ್ ಇನ್ನಿಂಗ್ಸ್‌ನಲ್ಲಿ 26.1ನೇ ಓವರ್‌ನಲ್ಲಿ ಜಸ್‌ಪ್ರೀತ್ ಬೂಮ್ರಾ ಲೆಂತ್ ಬಾಲ್ ಎಸೆದರು. ಸ್ಟ್ರೈಕ್‌ನಲ್ಲಿದ್ದ ಕಾರ್ಲೋಸ್ ಬ್ರಾಥ್‌ವೈಟ್ ಬ್ಯಾಟ್ ತಾಗಿದ ಚೆಂಡು ಸ್ಲಿಪ್‌ನತ್ತ ಚಿಮ್ಮಿತು. ಆಗ ಡೈವ್ ಮಾಡಿದ ಧೋನಿ ಚೆಂಡನ್ನು ಹಿಡಿದರು.

ಧೋನಿಯ ಚುರುಕು ಕೀಪಿಂಗ್‌ಗೆ ದಂಗಾದ ಬ್ರಾತ್‌ವೈಟ್ 5 ಎಸೆತ ಎದುರಿಸಿ ಕೇವಲ 1 ರನ್‌ಗೆ ನಿರ್ಗಮಿಸುವಂತಾಯ್ತು. ಪಂದ್ಯದಲ್ಲಿ ವಿಂಡೀಸ್‌ ಪರ ಸುನಿಲ್ ಆ್ಯಂಬ್ರಿಸ್ ಅವರ 31 ರನ್ ಮತ್ತು ನಿಕೋಲಸ್ ಪೂರನ್ ಅವರ 28 ರನ್ನೇ ಹೆಚ್ಚೆನಿಸಿತು. ಉಳಿದ ಯಾವ ಬ್ಯಾಟ್ಸ್ಮನ್‌ ಕೂಡ 20 ರನ್ ಸಮೀಪ ಕೂಡ ಸುಳಿಯಲಿಲ್ಲ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತ ಕೆಎಲ್ ರಾಹುಲ್ 48, ಕೊಹ್ಲಿ 72, ಧೋನಿ 56, ಹಾರ್ದಿಕ್ ಪಾಂಡ್ಯ 46 ರನ್ ಕೊಡುಗೆಯಿಂದ 50 ಓವರ್‌ಗೆ 7 ವಿಕೆಟ್ ಕಳೆದು 268 ರನ್ ಬಾರಿಸಿತ್ತು. ಗುರಿ ಬೆಂಬಿದ್ದ ವಿಂಡೀಸ್ 34.2 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 143 ರನ್ ಬಾರಿಸಿ ಶರಣಾಯಿತು. ಮೊಹಮ್ಮದ್ ಶಮಿ 4 ವಿಕೆಟ್ ಪಡೆದು ಬೌಲಿಂಗ್ ಪಾರಮ್ಯ ಮೆರೆದರು.

Story first published: Friday, June 28, 2019, 10:08 [IST]
Other articles published on Jun 28, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+