ವಿಶ್ವಕಪ್: ಧೋನಿ ಸ್ಟಂಪ್ ಔಟ್ ಆಗಿದ್ದು ಎಷ್ಟು ವರ್ಷಗಳ ಬಳಿಕ ಗೊತ್ತಾ?!

ಸೌತಾಂಪ್ಟನ್, ಜೂನ್ 22: ಏಕದಿನ ಕ್ರಿಕೆಟ್ ವೃತ್ತಿಜೀವನದಲ್ಲಿ ಎರಡನೇ ಬಾರಿಗೆ ಭಾರತದ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ ಸ್ಟಂಪ್ ಔಟ್ ಆಗಿದ್ದಾರೆ. ಸೌತಾಂಪ್ಟನ್‌ನಲ್ಲಿ ಶನಿವಾರ (ಜೂನ್ 22) ನಡೆದ ಭಾರತ vs ಅಫ್ಘಾನಿಸ್ತಾನ ವಿಶ್ವಕಪ್ ಪಂದ್ಯದಲ್ಲಿ ಸ್ಟಂಪಿಂಗ್ ಕಿಂಗ್ ಧೋನಿಯೇ ಸ್ಟಂಪ್ ಔಟ್ ಆದರು.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಭಾರತದ ಇನ್ನಿಂಗ್ಸ್‌ನ 44.3ನೇ ಓವರ್‌ನಲ್ಲಿ ಸ್ಪಿನ್ನರ್ ರಶೀದ್ ಖಾನ್ ಎಸೆತಕ್ಕೆ ಧೋನಿ ಅವರು ಅಫ್ಘಾನ್ ಕೀಪರ್ ಇಕ್ರಮ್ ಅಲಿಖಿಲ್ ಅವರಿಂದ ಸ್ಟಂಪ್ ಔಟ್ ಆಗಿ ಪೈವಿಲಿಯನ್‌ನತ್ತ ನಡೆದರು. ಆಗ ಧೋನಿ 52 ಎಸೆತಗಳಿಗೆ 28 ರನ್ ಬಾರಿಸಿದ್ದರು.
ಭಾರತ vs ಅಫ್ಘಾನಿಸ್ತಾನ, ಜೂನ್ 22, Live ಸ್ಕೋರ್‌ಕಾರ್ಡ್
ಏಕದಿನ ಕ್ರಿಕೆಟ್‌ನಲ್ಲಿ ಧೋನಿ ಹೀಗೆ ಸ್ಟಂಪ್‌ಔಟ್ ಆಗಿದ್ದು ಎರಡನೇ ಸಾರಿ. ಇದಕ್ಕೂ ಮುನ್ನ 8 ವರ್ಷಗಳಿಗೆ ಹಿಂದೆ ಅಂದರೆ 2011ರಲ್ಲಿ ಚೆನ್ನೈನಲ್ಲಿ ನಡೆದಿದ್ದ ವಿಶ್ವಕಪ್‌ನ ಗ್ರೂಪ್ ಹಂತದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಧೋನಿ ಚೊಚ್ಚಲ ಬಾರಿಗೆ ಸ್ಟಂಪ್ ಔಟ್ ಆಗಿದ್ದರು.
ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಭಾರತ, ಕೆಎಲ್ ರಾಹುಲ್ 30, ವಿರಾಟ್ ಕೊಹ್ಲಿ 67, ಕೇದಾರ್ ಜಾಧವ್ 52 ರನ್ ಕೊಡುಗೆಯೊಂದಿಗೆ 50 ಓವರ್‌ಗೆ 8 ವಿಕೆಟ್ ಕಳೆದು 224 ರನ್ ಬಾರಿಸಿತ್ತು. ಅಫ್ಘಾನ್‌ನ ಗುಲ್ಬಾದಿನ್ ನೈಬ್ ಮತ್ತು ಮೊಹಮ್ಮದ್ ನಬಿ ತಲಾ 2 ವಿಕೆಟ್ ಪಡೆದು ಗಮನ ಸೆಳೆದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications