Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್ ಫೈನಲ್, Live: ಇಂಗ್ಲೆಂಡ್ ಎದುರು ಬ್ಯಾಟಿಂಗ್ ಆಯ್ದ ನ್ಯೂಜಿಲೆಂಡ್

World cup 2019: New Zealand vs England, Final - Preview

ಲಂಡನ್, ಜುಲೈ 14: ಇಂಗ್ಲೆಂಡ್ ಮತ್ತು ವೇಲ್ಸ್ ನಲ್ಲಿ ನಡೆಯುತ್ತಿರುವ ವಿಶ್ವಕಪ್ 2019 ಕೊನೇ ಪಂದ್ಯ ಇಂದು ಆತಿಥೇಯ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿದೆ. ಲಂಡನ್‌ನ ಲಾರ್ಡ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಫೈನಲ್ ಹಣಾಹಣಿಯಲ್ಲಿ ಯಾರೇ ಗೆದ್ದರೂ ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಚಾಂಪಿಯನ್ ಹೆಸರು ಅಚ್ಚಾಗಲಿದೆ. ಟಾಸ್ ಗೆದ್ದಿರುವ ನ್ಯೂಜಿಲೆಂಡ್ ಬ್ಯಾಟಿಂಗ್ ಆಯ್ದುಕೊಂಡಿದೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್ ಇದು 2ನೇ ಸಾರಿ ಫೈನಲ್ ನಲ್ಲಿ ಸ್ಪರ್ಧಿಸುತ್ತಿದೆ. ಇದಕ್ಕೂ ಮೊದಲು ಅಂದರೆ 2015ರಲ್ಲಿ ಕಿವೀಸ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು ಕಾದಾಡಿತ್ತು. ಆದರೆ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಜಂಟಿ ಆಶ್ರಯದಲ್ಲಿ ನಡೆದಿದ್ದ ಪಂದ್ಯವನ್ನು ಕಾಂಗರೂ ಪಡೆ ಜಯಿಸಿತ್ತು.

ಇಂಗ್ಲೆಂಡ್ vs ನ್ಯೂಜಿಲೆಂಡ್, ಫೈನಲ್, ಜುಲೈ 14, Live ಸ್ಕೋರ್‌ಕಾರ್ಡ್

1
43691

ಇಂಗ್ಲೆಂಡ್ ಇದು 4ನೇ ಸಾರಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಡುತ್ತಿದೆ. ಆದರೆ ಇದಕ್ಕೂ ಹಿಂದೆ ಆಂಗ್ಲರು ಫೈನಲ್ ಪ್ರವೇಶಿಸಿದ್ದು 1992ರಲ್ಲಿ. ಅಂದರೆ ಸುಮಾರು 27 ವರ್ಷಗಳ ಹಿಂದೆ. ಅಂತೂ ಆಸ್ಟ್ರೇಲಿಯಾ, ಭಾರತ, ವೆಸ್ಟ್ ಇಂಡೀಸ್, ಶ್ರೀಲಂಕಾ, ಪಾಕಿಸ್ತಾನ ತಂಡಗಳು ಬಿಟ್ಟು ಬೇರೆ ತಂಡಗಳು ಟ್ರೋಫಿ ಜಯಿಸಿಲ್ಲ.

ಈ ಬಾರಿ ವಿಶ್ವಕಪ್ ಹೊಸ ಚಾಂಪಿಯನ್ ಆಗಿ ಗುರುತಿಸಿಕೊಳ್ಳಲು ಎರಡೂ ತಂಡಗಳಿಗೂ ಅವಕಾಶವಿದೆ. ಎರಡೂ ತಂಡಗಳೂ ಟೂರ್ನಿಯ ಪ್ರಬಲ ತಂಡಗಳಾಗಿ ಗುರುತಿಸಿಕೊಂಡಿರುವುದರಿಂದ ಪಂದ್ಯ ಕುತೂಹಲ ಮೂಡಿಸಿದೆ. ಮಳೆಯ ತೊಂದರೆ ಇರದಿದ್ದರೆ ಪಂದ್ಯ ಎಂದಿನಂತೆ 3 pmಗೆ ಆರಂಭಗೊಳ್ಳಲಿದೆ.

ನ್ಯೂಜಿಲೆಂಡ್ ತಂಡ: ಮಾರ್ಟಿನ್ ಗಪ್ಟಿಲ್, ಹೆನ್ರಿ ನಿಕೋಲ್ಸ್, ಕೇನ್ ವಿಲಿಯಮ್ಸನ್ (ಸಿ), ರಾಸ್ ಟೇಲರ್, ಜೇಮ್ಸ್ ನೀಶಮ್, ಟಾಮ್ ಲ್ಯಾಥಮ್ (ವಿಕೆ), ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಟ್ರೆಂಟ್ ಬೌಲ್ಟ್, ಲಾಕಿ ಫರ್ಗುಸನ್.

ಇಂಗ್ಲೆಂಡ್ ತಂಡ: ಜೇಸನ್ ರಾಯ್, ಜಾನಿ ಬೈರ್‌ಸ್ಟೋವ್, ಜೋ ರೂಟ್, ಇಯಾನ್ ಮಾರ್ಗನ್ (ಸಿ), ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್ (ವಿಕೆ), ಕ್ರಿಸ್ ವೋಕ್ಸ್, ಲಿಯಾಮ್ ಪ್ಲಂಕೆಟ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ಮಾರ್ಕ್ ವುಡ್.

{headtohead_cricket_4_2}

Story first published: Sunday, July 14, 2019, 15:00 [IST]
Other articles published on Jul 14, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+