For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್: ಸಚಿನ್ ತೆಂಡೂಲ್ಕರ್ ಅಪರೂಪದ ದಾಖಲೆ ಸರಿದೂಗಿಸಿದ ರೋಹಿತ್

ICC World Cup 2019 : ವಿಶ್ವಕಪ್ ನಲ್ಲಿ ರೋಹಿತ್ ಮಾಡಿದ್ದು ಭರ್ಜರಿ ದಾಖಲೆ..! | Rohit Sharma |Oneindia Kannada
World Cup 2019: Rohit Sharma equals Sachin Tendulkar’s record

ಲೀಡ್ಸ್, ಜುಲೈ 6: ಐಸಿಸಿ ವಿಶ್ವಕಪ್‌ 2019ರಲ್ಲಿ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ಭಾರತ ತಂಡದ ಉಪ ನಾಯಕ ರೋಹಿತ್ ಶರ್ಮಾ ಅವರು ಶನಿವಾರ (ಜುಲೈ 6) ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 27ನೇ ಏಕದಿನ ಶತಕ ಸಿಡಿಸಿದ್ದಾರೆ. ಇದರೊಂದಿಗೆ ಅಪರೂಪದ ದಾಖಲೆಗಳಿಗೂ ರೋಹಿತ್ ಕಾರಣರಾಗಿದ್ದಾರೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಲೀಡ್ಸ್ ನ ಹೆಡಿಂಗ್ಲಿಯಲ್ಲಿ ನಡೆದಿದ್ದ ವಿಶ್ವಕಪ್ 44ನೇ ಪಂದ್ಯದಲ್ಲಿ 103 ರನ್ ಬಾರಿಸಿದ ರೋಹಿತ್ ಶರ್ಮಾ 12ನೇ ವಿಶ್ವಕಪ್ ಆವೃತ್ತಿಯಯಲ್ಲಿ 5ನೇ ಸೆಂಚುರಿ ಬಾರಿಸಿದ ವಿಶ್ವದಾಖಲೆಗೆ ಕಾರಣರಾಗಿದ್ದಾರೆ. ಈ ಸಾಧಿನೆಗಾಗಿ ಹಿಟ್ ಮ್ಯಾನ್ ರೋಹಿತ್ ಶ್ರೀಲಂಕಾ ಮಾಜಿ ನಾಯಕ ಕುಮಾರ ಸಂಗಕ್ಕಾರ ಅವರ ವಿಶ್ವಕಪ್ 4 ಶತಕಗಳ ದಾಖಲೆ ಸರಿಗಟ್ಟಿದ್ದಾರೆ.

ಸಂಗಕ್ಕಾರ ಅವರು 2015ರ ಆವೃತ್ತಿಯ ವಿಶ್ವಕಪ್‌ನಲ್ಲಿ 4 ಶತಕಗಳನ್ನು ಬಾರಿಸಿದ್ದರು. ರೋಹಿತ್ ಈ ಸಾಧನೆಯನ್ನು ಹಿಂದಿನ ಬಾಂಗ್ಲಾ ವಿರುದ್ಧದ ಪಂದ್ಯದಲ್ಲೇ ಸರಿಗೂಗಿಸಿಕೊಂಡಿದ್ದರು. ಇಷ್ಟೇ ಅಲ್ಲದೆ ಶರ್ಮಾ ಅವರು ಸಚಿನ್ ಹೆಸರಿನಲ್ಲಿದ್ದ ದಾಖಲೆಯನ್ನೂ ಸರಿದೂಗಿಸಿಕೊಂಡಿದ್ದಾರೆ.

ರೋಹಿತ್ ಶರ್ಮಾ ವಿಶ್ವಕಪ್‌ನಲ್ಲಿ ಮೊದಲ ಶತಕ ಬಾರಿಸಿದ್ದು 2015ರಲ್ಲಿ ಬಾಂಗ್ಲಾದೇಶ ವಿರುದ್ಧ. ಈ ವಿಶ್ವಕಪ್‌ನಲ್ಲಿ 5 ಶತಕಗಳು ಸೇರಿ ಒಟ್ಟು 6 ವಿಶ್ವಕಪ್‌ ಸೆಂಚುರಿಗಳೊಂದಿಗೆ ಸಚಿನ್ ದಾಖಲೆಯನ್ನು ರೋಹಿತ್ ಸರಿದೂಗಿಸಿಕೊಂಡಿದ್ದಾರೆ. ವಿಶ್ವಕಪ್‌ನಲ್ಲಿ ಭಾರತದ ಮಾಜಿ ಆರಂಭಿಕ ಆಟಗಾರ ಸಚಿನ್ ಕೂಡ 6 ಶತಕಗಳ ದಾಖಲೆ ಹೊಂದಿದ್ದಾರೆ.

ವಿಶ್ವಕಪ್‌ನಲ್ಲಿ ಲೀಗ್ ಹಂತದಲ್ಲಿ ಒಟ್ಟು ಅತ್ಯಧಿಕ ರನ್ ಸಾಧನೆಗಾಗಿ ರೋಹಿತ್, ಸಚಿನ್ ಅವರನ್ನು ಹಿಂದಿಕ್ಕಿದ್ದಾರೆ. ವಿಶ್ವಕಪ್ ಆವೃತ್ತಿಯ ಗ್ರೂಪ್ ಹಂತದಲ್ಲಿ ಸಚಿನ್ 586 ರನ್ ದಾಖಲೆ ಹೊಂದಿದ್ದಾರೆ. ಆದರೆ ರೋಹಿತ್ ಒಟ್ಟು 8 ಇನ್ನಿಂಗ್ಸ್‌ಗಳಲ್ಲಿ 647 ರನ್ ಗಳಿಸಿ ಒಟ್ಟು ಅತ್ಯಧಿಕ ರನ್ ಸಾಧಕರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಅಂದ್ಹಾಗೆ ಲಂಕಾ ವಿರುದ್ಧ ಶನಿವಾರ ಭಾರತ 7 ವಿಕೆಟ್ ಗೆಲುವನ್ನಾಚರಿಸಿತು.

Story first published: Sunday, July 7, 2019, 6:53 [IST]
Other articles published on Jul 7, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+