For Quick Alerts
ALLOW NOTIFICATIONS  
For Daily Alerts
 

ಅತ್ಯಧಿಕ ರನ್‌ ಪಟ್ಟಿಯಲ್ಲಿ ವಾರ್ನರ್ ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ ರೋಹಿತ್

ICC World Cup 2019 : ವಿಶ್ವಕಪ್ ನಲ್ಲಿ ರೋಹಿತ್ ನಂ 1..! | Rohit Sharma
World cup 2019: Rohit Sharma jumped to no.1 spot in most runs

ಬರ್ಮಿಂಗ್‌ಹ್ಯಾಮ್, ಜುಲೈ 2: ಐಸಿಸಿ ವಿಶ್ವಕಪ್ 2019ರಲ್ಲಿ ಭಾರತ ಪರ ಅದ್ಭುತ ಪ್ರದರ್ಶನ ನೀಡುತ್ತಿರುವ ಉಪನಾಯಕ ರೋಹಿತ್ ಶರ್ಮಾ, ಅತ್ಯಧಿಕ ರನ್‌ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಸ್ಫೋಟಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ಹಿಂದಿಕ್ಕೆ ನಂ.1 ಸ್ಥಾನಕ್ಕೇರಿದ್ದಾರೆ. ಮಂಗಳವಾರ (ಜುಲೈ 2) ನಡೆದ ಬಾಂಗ್ಲಾ ವಿರುದ್ಧ ಪಂದ್ಯದಲ್ಲಿ ಶರ್ಮಾ ಈ ಸಾಧನೆ ಮೆರೆದರು.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್‌ನಲ್ಲಿ ನಡೆದ ಬಾಂಗ್ಲಾದೇಶ-ಭಾರತ ವಿಶ್ವಕಪ್ 40ನೇ ಪಂದ್ಯದಲ್ಲಿ ಆರಂಭಿಕರಾಗಿ ಬಂದಿದ್ದ ರೋಹಿತ್ 92 ಎಸೆತಗಳಿಗೆ 104 ರನ್ ಬಾರಿಸಿದರು. ಸೌಮ್ಯ ಸರ್ಕಾರ್ ಎಸೆತಕ್ಕೆ ಲಿಟನ್ ದಾಸ್‌ಗೆ ಕ್ಯಾಚಿತ್ತು ನಿರ್ಗಮಿಸುವ ಮುನ್ನ ರೋಹಿತ್ ಹೆಸರಿನಲ್ಲಿ ಸಾಲು ದಾಖಲೆಗಳು ಸೃಷ್ಟಿಯಾಗಿದ್ದವು.

ಈ ಸಾಧನೆಯೊಂದಿಗೆ ಶರ್ಮಾ ವಿಶ್ವಕಪ್ 2019ರ ಆವೃತ್ತಿಯಲ್ಲಿ ಅತ್ಯಧಿಕ ರನ್ ಪಟ್ಟಿಯಲ್ಲಿ ಡೇವಿಡ್ ವಾರ್ನರ್ ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ್ದಾರೆ. ರೋಹಿತ್ 7 ಇನ್ನಿಂಗ್ಸ್‌ಗಳಲ್ಲಿ 544 ರನ್‌ನೊಂದಿಗೆ ಅಗ್ರ ಸ್ಥಾನದಲ್ಲಿದ್ದರೆ, ವಾರ್ನರ್ 8 ಇನ್ನಿಂಗ್ಸ್‌ಗಳಲ್ಲಿ 516 ರನ್‌ನೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾ ನಾಯಕ ಆ್ಯರನ್ ಫಿಂಚ್ (504 ರನ್) ತೃತೀಯ ಸ್ಥಾನದಲ್ಲಿದ್ದಾರೆ.

ಬಾಂಗ್ಲಾ ವಿರುದ್ಧ 104 ರನ್ ಸಿಡಿಸಿದ್ದ ರೋಹಿತ್ ಐಸಿಸಿ ವಿಶ್ವಕಪ್‌ 2019ರಲ್ಲಿ 4ನೇ ಶತಕ ಬಾರಿಸಿ, ಒಂದೇ ವಿಶ್ವಕಪ್ ಆವೃತ್ತಿಯಲ್ಲಿ ಅತೀ ಹೆಚ್ಚು ಶತಕ ಬಾರಿಸಿದ ಕುಮಾರ ಸಂಗಕ್ಕರ (4 ಶತಕ) ದಾಖಲೆಯನ್ನು ಸರಿದೂಗಿಸಿಕೊಂಡರು. ಅಲ್ಲದೆ 2019ರಲ್ಲಿ 1000+ ಏಕದಿನ ರನ್ ಮೈಲಿಗಲ್ಲನ್ನೂ ಸ್ಥಾಪಿಸಿಸಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ 123, ಪಾಕಿಸ್ತಾನ ವಿರುದ್ಧ 140, ಇಂಗ್ಲೆಂಡ್ ವಿರುದ್ಧ 102 ಮತ್ತು ಬಾಂಗ್ಲಾ ವಿರುದ್ಧ 104 ರನ್ ಹೀಗೆ ಒಟ್ಟು 4 ಶತಕಗಳನ್ನು ರೋಹಿತ್ ಬಾರಿಸಿದಂತಾಗಿದೆ. 544 ರನ್‌ನೊಂದಿಗೆ ಅತ್ಯಧಿಕ ರನ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರೋಹಿತ್, 53 ಬೌಂಡರಿ, 12 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

Story first published: Tuesday, July 2, 2019, 18:22 [IST]
Other articles published on Jul 2, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+