ಟೀಮ್ ಇಂಡಿಯಾದ ಡಿಫೆನ್ಸೀವ್ ಬ್ಯಾಟಿಂಗ್ ಕುರಿತು ಸೆಹ್ವಾಗ್ ಟೀಕೆ!

ಹೊಸದಿಲ್ಲಿ, ಜೂನ್ 27: ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಬ್ಯಾಟ್ಸ್‌ಮನ್‌ಗಳು ಸ್ಪಿನ್ ಬೌಲರ್‌ಗಳ ಎದುರು ರಕ್ಷಣಾತ್ಮಕ ಆಟವಾಡುವ ತಂತ್ರದ ಮೊರೆ ಹೋಗಿರುವುದರ ವಿರುದ್ಧವಾಗಿ ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಡ್ಯಾಷಿಂಗ್ ಓಪನರ್ ಖ್ಯಾತಿಯ ವೀರೇಂದ್ರ ಸೆಹ್ವಾಗ್ ಟೀಕೆ ಮಾಡಿದ್ದಾರೆ.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ
ಅಫಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಎಂ.ಎಸ್ ಧೋನಿ ಮತ್ತು ಕೇದಾರ್ ಜಾಧವ್ ನಿಧಾನ ಗತಿಯಲ್ಲಿ ಬ್ಯಾಟಿಂಗ್ ಮಾಡಿ ಅಭಿಮಾನಿಗಳಿಮದ ಮತ್ತು ಹಾಲಿ-ಮಾಜಿ ಕ್ರಿಕೆಟಿಗರಿಂದ ವ್ಯಾಪಕ ಟೀಕೆಗೆ ಗುರಿಯಾಗಿದ್ದರು.
ಇದೀಗ ಗುರುವಾರ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲೂ ಭಾರತೀಯ ಬ್ಯಾಟ್ಸ್‌ಮನ್‌ಗಳು ಮತ್ತದೇ ರೀತಿಯಲ್ಲಿ ಕುಟ್ಟಿ ಕುಟ್ಟಿ ಆಡುವ ತಂತ್ರಕ್ಕೆ ಮೊರೆ ಹೋಗಿರುವುದು ಸೆಹ್ವಾಗ್ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಕುರಿತಾಗಿ ವೀರು ತಮ್ಮ ಅಧಿಕೃತ ಟ್ವಿಟರ್ ಖಾತೆ ಮೂಲಕ ಕಳವಳ ವ್ಯಕ್ತ ಪಡಿಸಿದ್ದಾರೆ.
"ರಶೀದ್ ಖಾನ್ ಮೊದಲ 4 ಓವರ್‌ಗಳಲ್ಲಿ 25 ರನ್‌ಗಳನ್ನು ಬಿಟ್ಟುಕೊಟ್ಟಿದ್ದರು. ಆದರೆ, ಕೊನೆಯ 6 ಓವರ್‌ಗಳಲ್ಲಿ ಕೇವಲ 13 ರನ್‌ಗಳನ್ನು ಮಾತ್ರವೇ ನೀಡಿದರು. ಅಂತೆಯೇ ಫಾಬಿಯಾನ್ ಆಲೆನ್ 5 ಓವರ್‌ಗಳಲ್ಲಿ 34 ರನ್ ನೀಡಿದರೂ, ಬಳಿಕ ಇನ್ನುಳಿದ 5 ಓವರ್‌ಗಳಲ್ಲಿ 18 ರನ್ ಮಾತ್ರವೇ ಬಿಟ್ಟುಕೊಟ್ಟಿದ್ದಾರೆ. ಸ್ಪಿನ್ನರ್‌ಗಳ ಎದುರು ಇಷ್ಟು ರಕಷ್ಣಾತ್ಮಕ ಆಟ ಸರಿಯಲ್ಲ,'' ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡ ತನ್ನ ಪಾಲಿನ 50 ಓವರ್‌ಗಳಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡು 268 ರನ್‌ಗಳ ಸವಾಲಿನ ಮೊತ್ತವನ್ನಷ್ಟೇ ದಾಖಲಿಸಿದೆ. ನಾಯಕ ವಿರಾಟ್ ಕೊಹ್ಲಿ 72 ರನ್ ಗಳಿಸಿದರೆ, ವಿಕೆಟ್ ಕೀಪರ್ ಎಂ.ಎಸ್ ಧೋನಿ ಔಟಾಗದೆ 56 ರನ್‌ಗಳನ್ನು ಗಳಿಸಿ ತಂಡದ ಮೊತ್ತ 250ರ ಗಡಿ ದಾಟುವಂತೆ ಮಾಡಿದರು.
ಡಿಆರ್‌ಎಸ್‌ನಲ್ಲಿ ರೋಹಿತ್ ಔಟ್ ಆದುದಕ್ಕೆ ಪತ್ನಿ ರಿತಿಕಾ ಶಾಕ್!
ಭಾರತ ತಂಡಕ್ಕೆ ವೆಸ್ಟ್ ಇಂಡೀಸ್ ವಿರುದ್ಧ ಜಯ ಪ್ರಾಪ್ತಿಯಾದರೆ ಅಂಕಪಟ್ಟಿಯಲ್ಲಿ 6 ಪಂದ್ಯಗಳಿಂದ 11 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆಯಲಿದ್ದು, ಸೆಮಿಫೈನಲ್ಸ್ ಅರ್ಹತೆಯನ್ನು ಬಹುತೇಕ ಖಚಿತ ಪಡಿಸಿಕೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications