ವಿಶ್ವಕಪ್ ಸಂದರ್ಭಲ್ಲಿ ಮೈ11ಸರ್ಕಲ್ ನಲ್ಲಿ ನಿಂತ ಗಂಗೂಲಿ

ಬೆಂಗಳೂರು, ಮೇ 21: ವಿಶ್ವಕಪ್ 2019 ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈ ನಡುವೆ ಫ್ಯಾಂಟಸಿ ಕ್ರಿಕೆಟ್ ಆಪ್ ಗಳ ಭರಾಟೆ ಶುರುವಾಗಿದೆ. ಪ್ಲೇಗೇಮ್ಸ್ ಪ್ರೈ.ಲಿಮಿಟೆಡ್‍ನ ಅತ್ಯಮೋಘ ಫ್ಯಾಂಟಸಿ ಕ್ರಿಕೆಟ್ ವೇದಿಕೆ ಮೈ 11 ಸರ್ಕಲ್. ವೇಗವಾಗಿ ಬೆಳೆಯುತ್ತಿರುವ ಫ್ಯಾಂಟಸಿ ಕ್ರಿಕೆಟ್ ಆಪ್‍ಗೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಮೈ11ಸರ್ಕಲ್ ರಾಯಭಾರಿಯಾಗಿದ್ದಾರೆ.
ಮೈ11ಸರ್ಕಲ್ ಕ್ರಿಕೆಟ್ ಋತುವಿನಲ್ಲಿ ಅನೇಕ ಕೊಡುಗೆ ನೀಡುತ್ತಿದ್ದು ಗಂಗೊಲಿ ಇವೆಲ್ಲದಕ್ಕೂ ರಾಯಭಾರಿ ಆಗಿದ್ದಾರೆ. ಭಾರತದಲ್ಲಿ ಕ್ರಿಕೆಟನ್ನು ಧರ್ಮದಂತೆ ಕಾಣುತ್ತಿರುವ ಕೋಟ್ಯಾಂತರ ಅಭಿಮಾನಿಗಳನ್ನು ಇದು ಆಕರ್ಷಿಸಲಿದೆ. ಈ ಅಭಿಮಾನಿಗಳು ಹೊಸತನ್ನು ಫೇವರಿಟ್ ದಾದಾ ಜತೆ ಆನಂದಿಸಲಿದ್ದಾರೆ.
ರಂಜಿಸುವ ಕ್ರೀಡೆಯ ಭಾಗವಾಗುತ್ತಿರುವುದು ನನಗೆ ಸಂತಸ ತಂದಿದೆ. ಕ್ರೀಡೆಯಲ್ಲಿ ಪಾಲ್ಗೊಂಡ ಭಾವನೆ ಮೂಡಿಸಿದೆ. ಮೈ11ಸರ್ಕಲ್ ಆಡುವ ಆಟಗಾರರೂ ಸಹ ಸಂಪೂರ್ಣ ಆನಂದಿಸುತ್ತಾರೆ ಎಂದು ನಾನು ಭಾವಿಸುತ್ತೇನೆ, ರಾಷ್ಟ್ರಾದ್ಯಂತ ಆಟಗಾರರ ಜತೆ ಆಟ ಮತ್ತು ಮನರಂಜನೆ ಪಡೆಯುದನ್ನು ಎದುರು ನೋಡುತ್ತಿದ್ದೇನೆ ಎಂದು ಸೌರವ್ ಗಂಗೂಲಿ ಹೇಳಿದರು.
ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿ ತನಗಿರುವ ಜ್ಞಾನವನ್ನು ಪರೀಕ್ಷೆಗೆ ಒಡ್ಡಲು ಈ ಆಪ್ ಅವಕಾಶ ನೀಡುತ್ತದೆ, ಅವರದೇ ತಂಡದ ಆಟಗಾರರು ಆಯ್ದ ತಂಡದ ಆಟಗಾರರ ಜತೆ ಪಾಯಿಂಟ್ ಹಂಷಿಕೊಳ್ಳಬಹುದು ಗರಿಷ್ಠ ಪಾಯಿಂಟ್ ಜತೆಗೆ ನಗದು ಬಹುಮಾನ ಸಹ ತಮ್ಮದಾಗಿಸಿ ಕೊಳ್ಳಬಹುದಾಗಿದೆ. ಮುಂಬರುವ ಋತುವಿನÀಲ್ಲಿ ಇದು ಮತ್ತಷ್ಟು ರೋಚಕ ಆಗಿರುತ್ತದೆ, ಪ್ರತಿ ಅಭಿಮಾನಿ ಅತ್ಯುತ್ತಮ ಪ್ರದರ್ಶನ ತೋರಲು ಮೈ11ಸರ್ಕಲ್ ಅವಕಾಶ ನೀಡಿದೆ.
ಸೌರವ್ ಗಂಗೂಲಿ ಮೈ11ಸರ್ಕಲ್ ಕುಟುಂಬದ ಒಂದು ಭಾಗವಾಗಿರುವುದು ಸಂತೋಷ. ಈ ಕ್ರೀಡೆ ಕ್ರಿಕೆಟ್ ಬಗೆಗಿನ ಜ್ಞಾನ, ಆಕರ್ಷಣೆ ನಿರ್ಧಾರಕ್ಕೆ ಕಾರಣ ಆಗಿದೆ, ಸೌರವ್ ಗಂಗೂಲಿ ಜತೆ ಆಪ್ ಕ್ರಿಕೆಟ್ ಪ್ರೇಮಿಗಳ ಆಸಕ್ತಿ ಹೆಚ್ಚಿಸಲು ಆಪ್ ಉತ್ಸಾಹದಿಂದ ಇದೆ. ನಮ್ಮ ಆಪ್‍ನಲ್ಲಿ ಪ್ರತಿ ಆಟಗಾರ ಕ್ರಿಕೆಟ್ ತಂಡದ ನಾಯಕನಂತೆ ತನ್ನದೇ ಆದ ತಂಡ ಮಾಡುತ್ತಾನೆ.
ನಾಯಕತ್ವದ ವಿಷಯದಲ್ಲಿ ಸೌರವ್ ಗಂಗೂಲಿ ಶ್ರೇಷ್ಠ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ ಮೈ11ಸರ್ಕಲ್‍ನಲ್ಲಿ ಸೌರವ್ ಜತೆಗಿನ ಪ್ರಯಾಣವನ್ನು ಆನಂದಿಸುವ ಕ್ಷಣವನ್ನು ಎಲ್ಲ ಆಟಗಾರರು ಎದುರು ನೋಡುತ್ತಿದ್ದಾರೆ ಎಂದು ಅವಿಕ್ ದಾಸ್, ಬ್ರಾಂಡ್ ಮುಖ್ಯಸ್ಥರು ಹೇಳಿದರು. ಮೈ11ಸರ್ಕಲ್ ಪ್ರಸ್ತುತ ಅಂತಾರಾಷ್ಟೀಯ ಮತ್ತು ದೇಶೀಯ ಪಂದ್ಯಗಳನ್ನು ತನ್ನ ಸ್ಪರ್ಧೆ ಪೇಜ್‍ನಲ್ಲಿ ನೀಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications