ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್: ಶ್ರೀಲಂಕಾ ವಿರುದ್ಧ ಬೌಲಿಂಗ್ ಆಯ್ದ ದಕ್ಷಿಣ ಆಫ್ರಿಕಾ

World cup 2019: Sri Lanka vs South Africa, Match 35-Preview

ಲಂಡನ್, ಜೂನ್ 28: ಚೆಸ್ಟರ್-ಲೆ-ಸ್ಟ್ರೀಟ್ ನಲ್ಲಿರುವ ರಿವರ್ಸ್‌ಸೈಡ್ ಗ್ರೌಂಡ್‌ನಲ್ಲಿ ಇಂದು (ಜೂನ್ 28) ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗುತ್ತಿವೆ. ದಕ್ಷಿಣ ಆಫ್ರಿಕಾ ಈಗಾಗಲೇ ಸೆಮಿಫೈನಲ್ ಅವಕಾಶ ಕೈತಪ್ಪಿಸಿಕೊಂಡಿರುವುದರಿಂದ ಅದರ ಪಾಲಿಗೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಪಂದ್ಯವಿದು. ಟಾಸ್ ಗೆದ್ದಿರುವ ದಕ್ಷಿಣ ಆಫ್ರಿಕಾ ಬೌಲಿಂಗ್ ಆಯ್ದುಕೊಂಡಿದೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಇಂಗ್ಲೆಂಡ್ ವಿರುದ್ಧ ಗೆದ್ದು ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿರುವ ಶ್ರೀಲಂಕಾ, ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವಿನ ನೆಲೆಯಲ್ಲಿ ಪ್ರಬಲ ಹೋರಾಟ ನಡೆಸೋದು ನಿರೀಕ್ಷಿತ. ಪ್ರೋಟಿಯಾಸ್‌ಗೆ ಈ ಪಂದ್ಯದ ಗೆಲುವು ಪ್ರತಿಷ್ಠೆಯದ್ದು. ಆದರೆ ಆಫ್ರಿಕಾಕ್ಕೆ ಲಸಿತ್ ಮಾಲಿಂಗ ಬೆದರಿಕೆಯಿದೆ. ಪಂದ್ಯಕ್ಕೆ ಮಳೆಯ ಅಡಚಣೆಯ ಸಂಭವ ಕಡಿಮೆ.

ದಕ್ಷಿಣ ಆಫ್ರಿಕಾ vs ಶ್ರೀಲಂಕಾ, ಜೂನ್ 28, Live ಸ್ಕೋರ್‌ಕಾರ್ಡ್

1
43678

ಸದ್ಯ ವಿಶ್ವಕಪ್ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಸೆಮಿಫೈನಲ್ ಪ್ರವೇಶಿಸಿದ್ದಾಗಿದೆ. ಭಾರತ ಮತ್ತು ನ್ಯೂಜಿಲೆಂಡ್ ಸೆಮಿಫೈನಲ್ ಖಾತ್ರಿಗೆ ಇನ್ನೊಂದು ಗೆಲುವು ಬೇಕು. ನಾಲ್ಕನೇ ಸ್ಥಾನದಲ್ಲಿ ಆತಿಥೇಯ ಇಂಗ್ಲೆಂಡ್ ಇದೆ. ಇನ್ನು 2 ಜಯ ದಾಖಲಿಸಿರುವ ಶ್ರೀಲಂಕಾ 7ನೇ ಸ್ಥಾನದಲ್ಲಿ, 1 ಗೆಲುವು ಕಂಡಿರುವ ದಕ್ಷಿಣ ಆಫ್ರಿಕಾ 8ನೇ ಸ್ಥಾನದಲ್ಲಿದೆ.

ದಕ್ಷಿಣ ಆಫ್ರಿಕಾ ತಂಡ: ಹಾಶಿಮ್ ಆಮ್ಲಾ, ಕ್ವಿಂಟನ್ ಡಿ ಕಾಕ್, ಫಾಫ್ ಡು ಪ್ಲೆಸಿಸ್, ಐಡೆನ್ ಮಾರ್ಕ್ರಮ್, ರಾಸ್ಸಿ ವಾನ್ ಡೆರ್ ಡುಸೆನ್, ಡೇವಿಡ್ ಮಿಲ್ಲರ್, ಆ್ಯಡಿಲೆ ಫೆಹ್ಲುಕ್ವಾಯೊ, ಕ್ರಿಸ್ ಮೋರಿಸ್, ಕಾಗಿಸೋ ರಬಾಡಾ/ಬ್ಯೂರನ್ ಹೆಂಡ್ರಿಕ್ಸ್, ಲುಂಗಿ ಎನ್‌ಜಿಡಿ, ಇಮ್ರಾನ್ ತಾಹಿರ್.

ಶ್ರೀಲಂಕಾ ತಂಡ: ದಿಮುತ್ ಕರುಣರತ್ನೆ, ಕುಸಾಲ್ ಪೆರೆರಾ, ಅವಿಷ್ಕಾ ಫರ್ನಾಂಡೊ, ಕುಸಾಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ಜೀವನ್ ಮೆಂಡಿಸ್, ಧನಂಜಯ ಡೆ ಸಿಲ್ವಾ, ಥಿಸೆರಾ ಪೆರೆರಾ, ಇಸುರು ಉದಾನಾ, ನುವಾನ್ ಪ್ರದೀಪ್, ಲಸಿತ್ ಮಾಲಿಂಗ.

{headtohead_cricket_7_6}

Story first published: Friday, June 28, 2019, 15:31 [IST]
Other articles published on Jun 28, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X