Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಂಡೊ-ಕಿವೀಸ್‌ ಸೆಮಿಫೈನಲ್‌ಗೆ ಮಳೆ ಅಡ್ಡಿ ಪಡಿಸಿದರೆ ಏನಾಗುತ್ತದೆ?

World Cup 2019: What happens if Ind vs NZ semifinals get washed out?

ಮ್ಯಾಂಚೆಸ್ಟರ್‌, ಜುಲೈ 08: ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಭಾರತ ತಂಡ ಗೆದ್ದು ಅಂಕಪಟ್ಟಿಯ ಅಗ್ರಸ್ಥಾನಕ್ಕೇರಿದರೆ, ದಕ್ಷಿಣ ಆಫ್ರಿಕಾ ವಿರುದ್ಧ ಸೋಲುಂಡ ಆಸ್ಟ್ರೇಲಿಯಾ ತಂಡ ಎರಡನೇ ಸ್ಥಾನಕ್ಕೇ ಜಾರಿತು.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಇದರೊಂದಿಗೆ ಮೊದಲ ಸೆಮಿಫೈನಲ್‌ನಲ್ಲಿ ಭಾರತ ತಂಡ ನ್ಯೂಜಿಲೆಂಡ್‌ ವಿರುದ್ಧ ಜುಲೈ 9ರಂದು ಓಲ್ಡ್‌ ಟ್ರಾಫರ್ಡ್‌ ಅಂಗಣದಲ್ಲಿ ಪೈಪೋಟಿ ನಡೆಸಲಿದೆ. ಮತ್ತೊಂದೆಡೆ ಜುಲೈ 11ರಂದು ನಡೆಯಲಿರುವ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ತನ್ನ ಸಾಂಪ್ರದಾಯಿಕ ಎದುರಾಳಿ ಇಂಗ್ಲೆಂಡ್‌ ವಿರುದ್ಧ ಪೈಪೋಟಿ ನಡೆಸಲಿದೆ.

ಅಂದಹಾಗೆ ಮ್ಯಾಂಚೆಸ್ಟರ್‌ನಲ್ಲಿ ಜುಲೈ 9ರಂದು ಮಂಗಳವಾರ ಶೇ.40 ರಷ್ಟು ಭಾರಿ ಮಳೆಯಾಗುವ ಸಾಧ್ಯತೆ ಇದೆ. ಒಂದು ವೇಳೆ ಮಳೆ ಸುರಿದು ಪಂದ್ಯಕ್ಕೆ ಅಡಚಣೆಯಾದರೆ ಭಾರತ ತಂಡದ ಗತಿಯೇನು ಎಂಬುದು ಅಭಿಮಾನಿಗಳ ಚಿಂತೆಗೆ ಕಾರಣವಾಗಿದೆ.

ಭಾರತ ತಂಡ ವಿಶ್ವಕಪ್‌ಗೂ ಮುನ್ನ ನಡೆದ ಅಭ್ಯಾಸ ಪಂದ್ಯದಲ್ಲಿ ಇದೇ ಮ್ಯಾಂಚೆಸ್ಟರ್‌ ಅಂಗಣದಲ್ಲಿ 6 ವಿಕೆಟ್‌ಗಳ ಹೀನಾಯ ಸೋಲುಂಡಿತ್ತು. ಕಿವೀಸ್‌ ಬೌಲರ್‌ಗಳು ತಮ್ಮ ಸ್ವಿಂಗ್‌ ಅಸ್ತ್ರದ ಮೂಲಕ ಟೀಮ್‌ ಇಂಡಿಯಾ ಬ್ಯಾಟ್ಸ್‌ಮನ್‌ಗಳನ್ನು ಬೇಟೆಯಾಡಿದ್ದರು. ಲೀಗ್‌ ಹಂತದ ಪಂದ್ಯದಲ್ಲಿ ಭಾರತ ತಂಡ ಈ ಸೋಲಿಗೆ ಸೇಡು ತೀರಿಸಿಕೊಳ್ಳುತ್ತದೆ ಎಂಬ ನಿರೀಕ್ಷೆ ಇತ್ತಾದರೂ, ಈ ಪಂದ್ಯ ಮಳೆಗೆ ಆಹುತಿಯಾಗಿ ಇತ್ತಂಡಗಳು ಅಂಗಳನ್ನು ಹಂಚಿಕೊಳ್ಳುವಂತಾಗಿತ್ತು.

ಆದರೀಗೆ ಸೆಮಿಫೈನಲ್ಸ್‌ ಕೂಡ ಮಳೆಗೆ ಬಲಿಯಾದರೆ ಗತಿಯೇನು? ಎಂಬ ಸ್ಥಿತಿ ಎದುರಾಗಿದೆ. ಅಂದಹಾಗೆ ಲೀಗ್‌ ಹಂತದ ಪಂದ್ಯಗಳಿಗೆ ಮಳೆ ಅಡಚಣೆಯಾದರೆ ಅಂಕಗಳನ್ನು ಹಂಚಿಕೊಳ್ಳದೆ ಬೇರೆ ಮಾರ್ಗವಿಲ್ಲ. ಆದರೆ, ಸೆಮಿಫೈನಲ್ಸ್‌ ಮತ್ತು ಫೈನಲ್‌ ಪಂದ್ಯಗಳಿಗೆ ಈ ರೀತಿಯಾದರೆ ಹೆಚ್ಚುವರಿ ದಿನವನ್ನು ಪಂದ್ಯ ಆಯೋಜನೆ ಸಲುವಾಗಿ ಕಾಯ್ದಿರಿಸಲಾಗಿದೆ. ಅಂದಹಾಗೆ ಕಾಯ್ದಿರಿಸಿದ ದಿನದಂದು ಮಳೆಯಾಗುವ ಯಾವುದೇ ಸೂಚನೆ ಇಲ್ಲ.

ಇನ್ನು ಸೆಮಿಫೈನಲ್ಸ್‌ನಲ್ಲಿ ಇತ್ತಡಂಗಳಿಗೆ ಕನಿಷ್ಠ 20 ಓವರ್‌ಗಳ ಆಟವಾಡಲು ಸಾಧ್ಯವಾಗದೇ ಇದ್ದರೆ. ಫಲಿತಾಂಶಕ್ಕಾಗಿ ಸೂಪರ್‌ ಓವರ್‌ ಆಡಿಸುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಸೂಪರ್‌ ಓವರ್‌ ಕೂಡ ಸಾಧ್ಯವಾಗದೇ ಹೋದರೆ ಅಂಕಪಟ್ಟಿಯಲ್ಲಿ ಯಾವ ತಂಡ ಉತ್ತಮ ಸ್ಥಾನ ಹೊಂದಿರುತ್ತದೋ ಆ ತಂಡಕ್ಕೆ ಫೈನಲ್‌ ಪ್ರವೇಶಿಸುವ ಅರ್ಹತೆ ಲಭ್ಯವಾಗಲಿದೆ.

ಇದರರ್ಥ ಮಂಗಳವಾರ ಮತ್ತು ಬುಧವರಾವೂ ಪಂದ್ಯ ನಡೆಯಲು ಸಾಧ್ಯವಾಗದೇ ಇದ್ದರೆ ಅಂಕಪಟ್ಟಿಯ ಅಗ್ರಸ್ಥಾನಿ ಭಾರತ ಸುಲಭವಾಗಿ ಫೈನಲ್‌ ಪ್ರವೇಶಿಸಲಿದೆ. ಮತ್ತೊಂದು ಸೆಮಿಫೈನಲ್ಸ್‌ ಕೂಡ ಇದೇ ರೀತಿಯ ಫಲಿತಾಂಶ ಕಂಡರೆ ಇಂಗ್ಲೆಂಡ್‌ಗೆ ಹಿಂದಿಕ್ಕಿ ಆಸ್ಟ್ರೇಲಿಯಾ ಫೈನಲ್‌ ತಲುಪಲಿದೆ.

Story first published: Monday, July 8, 2019, 17:59 [IST]
Other articles published on Jul 8, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+