ವಿಶ್ವಕಪ್ ಫೈನಲ್‌ನಲ್ಲಿ ಅರೆ ನಗ್ನವಾಗಿ ಮೈದಾನಕ್ಕೆ ನುಗ್ಗಿದ ಮಹಿಳೆ!

ಲಂಡನ್ ಜುಲೈ 14: ಪ್ರಸಕ್ತ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಮಳೆ ಕಾರಣ ಹಲವು ಪಂದ್ಯಗಳು ಅಡಚಣೆ ಅನುಭವಿಸಿವೆ. ಜೊತೆಗೆ ಪ್ರೇಕ್ಷಕರು ಇದ್ದಂಕ್ಕಿದಂತೆ ಮೈದಾನದ ಒಳ ಹೊಕ್ಕಿ ಕ್ರೀಡಾಂಗಣದ ಸಿಬ್ಬಂದಿಗೆ ಕೆಲಸ ಕೊಟ್ಟು ಪಂದ್ಯಕ್ಕೆ ಅಡಚಣೆ ಉಂಟುಮಾಡಿದ ಘಟನೆಗಳೂ ನಡೆದಿವೆ.
ಕಳೆದ ವಾರವಷ್ಟೇ ವ್ಯಕ್ತಿಯೊಬ್ಬ ನಗ್ನವಾಗಿ ಮೈದಾನದೊಳಹೊಕ್ಕಿ ಸಿಬ್ಬಂದಿಯನ್ನು ಅಲೆದಾಡಿಸಿದ್ದು ಪ್ರೇಕ್ಷಕರು ಮತ್ತು ಆಟಗಾರರೆಲ್ಲರಿಗೂ ಹೊಟ್ಟೆ ಹುಣ್ಣಾಗುವಷ್ಟು ನಗು ತರಿಸಿತ್ತು. ಆದರೆ, ಭಾನುವಾರದ ಫೈನಲ್ ಪಂದ್ಯವೇಳೆ ಅರೆ ನಗ್ನವಾಗಿ ನುಗ್ಗಿದ್ದಲ್ಲದೆ ಅಶ್ಲೀಲ ವೆಬ್‌ಸೈಟ್‌ನ ಪ್ರಚಾರ ಮಾಡಲೆತ್ನಿಸಿದ ಮಹಿಳೆಯನ್ನು ಕೂಡಲೇ ಹಿಡಿಯುವಲ್ಲಿ ಸಿಬ್ಬಂದಿ ಯಶಸ್ವಿಯಾದರು.
ಕಳೆದ ತಿಂಗಳು ಚಾಂಪಿಯನ್ಸ್ ಲೀಗ್ ಫುಟ್ಬಾಲ್ ಟೂರ್ನಿಯ ಫೈನಲ್ ಪಂದ್ಯದ ವೇಳೆಯೂ ಇಂಥದ್ದೇ ಘಟನೆ ನಡೆದಿತ್ತು ಯೂಟ್ಯೂಬ್ ಚಾನಲ್ ನಡೆಸುವ ರಷ್ಯಾ ಮೂಲದ ವಿಟಾಲಿ ಡೊರೊವೆಸ್ಕಿ ಅವರ ಪ್ರೇಯಸಿ ಕಿನ್ಸೇ ವೊಲಾನ್ಸ್ಕೀ ಸ್ವಿಮ್ ಸೂಟ್ ಧರಿಸಿ ಮೈದಾನದ ಒಳ ಹೊಕ್ಕಿದ ವಿಡಿಯೊ ವೈರಲ್ ಆಗಿತ್ತು.
ಇದೀಗ ವಿಟಾಲಿ ಡೊರೊವೆಸ್ಕಿ ಅವರ ತಾಯಿ ಎಲೆನಾ ವುಲಿಟ್ಸ್ಕೀ, ಭಾನುವಾರ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಣ ವಿಶ್ವಕಪ್ ಫೈನಲ್ ಪಂದ್ಯದ ವೇಳೆ ಲಾರ್ಡ್ಸ್ ಅಂಗಣದ ಒಳ ಪ್ರವೇಶಿಸಲು ವಿಫಲ ಯತ್ನ ಮಾಡಿದ್ದಾರೆ. ಬೌಂಡರಿ ಗೆರೆ ಬಳಿ ಇದ್ದ ಕ್ರೀಡಾಂಗಣದ ಸಿಬ್ಬಂದಿ ಒಳಹೊಕ್ಕುವ ಯತ್ನ ನಡೆಸಿದ ಎಲೆನಾ ಅವರನ್ನು ಕೂಡಲೇ ಎಳೆದು ಹೊರಗೊಯ್ಯವಲ್ಲಿ ಸಫಲರಾದರು.
ಇನ್ನು ವರದಿಗಳ ಪ್ರಕಾರ ಕಿನ್ಸೆ ವೊಲಾನ್ಸ್ಕೀ, ಇತ್ತೀಚೆಗೆ ಕೊಪಾ ಅಮೆರಿಕಾ ಫುಟ್ಬಾಲ್ ಟೂರ್ನಿಯ ಫೈನಲ್ ಪಂದ್ಯದ ವೇಳೆಯೂ ಮೈದಾನದ ಒಳ ಹೊಕ್ಕುವ ಪ್ರಯತ್ನ ನಡೆಸಿದ ಹಿನ್ನೆಲೆಯಲ್ಲಿ ವೊಲಾನ್ಸ್ಕೀ ಮತ್ತು ವಿಟಾಲಿ ಡೊರೊವೆಸ್ಕಿ ಇಬ್ಬರನ್ನೂ ಬ್ರೆಜಿಲ್‌ನಲ್ಲಿ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications