For Quick Alerts
ALLOW NOTIFICATIONS  
For Daily Alerts
 

World Cup 2023: ಏಕದಿನ ವಿಶ್ವಕಪ್ ಅರ್ಹತಾ ಸುತ್ತಿಗೆ 15 ಸದಸ್ಯರ ಶ್ರೀಲಂಕಾ ತಂಡ ಪ್ರಕಟ

ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ಆಯ್ಕೆ ಸಮಿತಿಯು ಮುಂಬರುವ 2023ರ ಐಸಿಸಿ ಏಕದಿನ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಗಳಿಗಾಗಿ ಜಿಂಬಾಬ್ವೆಗೆ ಪ್ರಯಾಣಿಸಲಿರುವ 15 ಸದಸ್ಯರ ಶ್ರೀಲಂಕಾ ತಂಡವನ್ನು ಪ್ರಕಟಿಸಿದೆ.

ಶ್ರೀಲಂಕಾದ ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವ ರೋಶನ್ ರಣಸಿಂಘೆ ಅನುಮೋದಿಸಿದ ತಂಡವು ಜೂನ್ 10ರ ಶನಿವಾರ ಆಫ್ರಿಕಾದ ಜಿಂಬಾಬ್ವೆಗೆ ಪ್ರಯಾಣ ಬೆಳೆಸಲಿದೆ.

World Cup 2023: 15-member Sri Lanka Squad Announced For ODI World Cup Qualifiers Round

ವಿಶೇಷವಾಗಿ, ರಾಷ್ಟ್ರೀಯ ತಂಡಕ್ಕೆ ಸಲಹೆಗಾರ ತರಬೇತುದಾರರಾಗಿರುವ ಮಾಜಿ ನಾಯಕ ಮಹೇಲಾ ಜಯವರ್ಧನೆ ಅವರು ನಿರ್ಣಾಯಕ ಅರ್ಹತಾ ಪಂದ್ಯಗಳಿಗೆ ಶ್ರೀಲಂಕಾ ತಂಡದೊಂದಿಗೆ ಪ್ರಯಾಣಿಸಲಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ದೃಢಪಡಿಸಿದೆ.

ಅರ್ಹತಾ ಪಂದ್ಯಗಳಿಗೆ ಸೀಮಿತ ಬೆಂಬಲ ಸಿಬ್ಬಂದಿಯನ್ನು ಕಳುಹಿಸಲಾಗುವುದು ಮತ್ತು ಅಕ್ಟೋಬರ್-ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ 2023ರ ಏಕದಿನ ವಿಶ್ವಕಪ್‌ನಲ್ಲಿ ತಂಡವು ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡರೆ, ಹೆಚ್ಚಿನ ಸದಸ್ಯರನ್ನು ಕಳಿಸಲಾಗುವುದು ಎಂದು ಶ್ರೀಲಂಕಾ ಕ್ರಿಕೆಟ್ ತಿಳಿಸಿದೆ.

"ಜಿಂಬಾಬ್ವೆಯಲ್ಲಿ ನಡೆಯುವ ಅರ್ಹತಾ ಸುತ್ತಿನ ಪಂದ್ಯಗಳಿಗೆ ಸೀಮಿತ ಬೆಂಬಲ ಸಿಬ್ಬಂದಿಯನ್ನು ನಾವು ಕಳುಹಿಸಬೇಕಾಗಿದೆ. ಆದರೆ, ನಮ್ಮ ತಂಡ ವಿಶ್ವಕಪ್‌ಗೆ ಅರ್ಹತೆ ಪಡೆದರೆ, ಖಂಡಿತವಾಗಿಯೂ ಹೆಚ್ಚಿನ ಸಿಬ್ಬಂದಿಯನ್ನು ಕಳುಹಿಸಲು ಪ್ರಯತ್ನಿಸುತ್ತೇವೆ," ಎಂದು ಶ್ರೀಲಂಕಾ ಕ್ರಿಕೆಟ್ ವೈದ್ಯಕೀಯ ಸಮಿತಿಯ ಅಧ್ಯಕ್ಷ ಪ್ರೊ. ಅರ್ಜುನ ಡಿ ಸಿಲ್ವಾ ಹೇಳಿದ್ದಾರೆ.

World Cup 2023: 15-member Sri Lanka Squad Announced For ODI World Cup Qualifiers Round

ತವರಿನಲ್ಲಿ ಇತ್ತೀಚೆಗಷ್ಟೇ ಮುಕ್ತಾಯಗೊಂಡ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಅಫ್ಘಾನಿಸ್ತಾನ ವಿರುದ್ಧ 2-1 ಅಂತರದ ಜಯ ಸಾಧಿಸಿದ ಹಿನ್ನಲೆಯಲ್ಲಿ ಸಿಂಹಳೀಯ ತಂಡ ಮಹತ್ವದ ಐಸಿಸಿ ಪಂದ್ಯಾವಳಿಗೆ ತೆರಳುತ್ತಿದೆ. 2023ರ ವಿಶ್ವಕಪ್ ಅರ್ಹತಾ ಪಂದ್ಯಗಳು ಭಾನುವಾರ, ಜೂನ್ 18ರಂದು ಪ್ರಾರಂಭವಾಗಲಿದ್ದು, ಜುಲೈ 9ರಂದು ಅಂತಿಮ ಪಂದ್ಯ ನಡೆಯಲಿದೆ.

ಶ್ರೀಲಂಕಾ ತಂಡವು ಐರ್ಲೆಂಡ್, ಓಮನ್, ಸ್ಕಾಟ್ಲೆಂಡ್ ಮತ್ತು ಯುಎಇ ಜೊತೆಗೆ ಬಿ ಗುಂಪಿನಲ್ಲಿ ಸ್ಥಾನ ಪಡೆದಿದೆ. ಗಮನಾರ್ಹ ಅಂಶವೆಂದರೆ, ಹತ್ತು ತಂಡಗಳು ಕ್ವಾಲಿಫೈಯರ್‌ಗಳ ಭಾಗವಾಗಿದ್ದು, ಪಂದ್ಯಾವಳಿಯ ಫೈನಲ್ ತಲುಪುವ ಎರಡು ತಂಡಗಳು ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್‌ನಲ್ಲಿ ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಳ್ಳಲಿವೆ.

ದಸುನ್ ಶನಕ ನಾಯಕತ್ವದ ಶ್ರೀಲಂಕಾ ತಂಡವು ನೆದರ್ಲ್ಯಾಂಡ್ಸ್ ಹಾಗೂ ಯುನೈಟೆಡ್ ಸ್ಟೇಟ್ಸ್ ತಂಡಗಳ ವಿರುದ್ಧ ಕ್ರಮವಾಗಿ ಜೂನ್ 13 ಮತ್ತು ಜೂನ್ 15ರಂದು ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ.

ಶ್ರೀಲಂಕಾ ತಂಡ ತಮ್ಮ ಗುಂಪು ಹಂತದ ಅಭಿಯಾನವನ್ನು ಸೋಮವಾರ, ಜೂನ್ 19ರಂದು ಯುಎಇ ವಿರುದ್ಧ ಸೆಣಸಾಡುವ ಮೂಲಕ ಪ್ರಾರಂಭಿಸಲಿದ್ದಾರೆ.

ವಿಶ್ವಕಪ್ ಅರ್ಹತಾ ಪಂದ್ಯಗಳಿಗೆ ಶ್ರೀಲಂಕಾ ತಂಡ

ದಸುನ್ ಶನಕ (ನಾಯಕ), ಕುಸಲ್ ಮೆಂಡಿಸ್ (ಉಪ ನಾಯಕ & ವಿಕೆಟ್ ಕೀಪರ್), ದಿಮುತ್ ಕರುಣಾರತ್ನೆ, ಪಾಥುಮ್ ನಿಸ್ಸಾಂಕ, ಚರಿತ್ ಅಸಲಂಕ, ಧನಂಜಯ ಡಿ ಸಿಲ್ವಾ, ಸದೀರ ಸಮರವಿಕ್ರಮ (ವಿಕೆಟ್ ಕೀಪರ್), ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ದುಷ್ಮಂತ ಚಮೀರ, ಕಸುನ್ ರಜಿತ, ಲಹಿರು ಕುಮಾರ, ಮಹೀಶ್ ತೀಕ್ಷಣ, ಮತೀಶ ಪತಿರಣ, ದುಶನ್ ಹೇಮಂತ.

Story first published: Friday, June 9, 2023, 17:00 [IST]
Other articles published on Jun 9, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+