World Cup 2023: ವಿಶ್ವಕಪ್‌ಗಾಗಿ ಅಪ್‌ಗ್ರೇಡ್ ಆಗಲಿವೆ ಎಲ್ಲಾ 10 ಕ್ರೀಡಾಂಗಣಗಳು; ಬಿಸಿಸಿಐನಿಂದ ಅನುದಾನ
ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಭಾರತದಲ್ಲಿ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗಾಗಿ ದಿನಗಣನೆ ಆರಂಭವಾಗಿದೆ. ಈಗಾಗಲೇ ಜೂನ್ 27ರಂದು ಅಂತಿಮ ಹಾಗೂ ಸಂಪೂರ್ಣ ವೇಳಾಪಟ್ಟಿಯೂ ಬಿಡುಗಡೆಗೊಂಡಿದೆ.
ವೇಳಾಪಟ್ಟಿ ಪ್ರಕಾರ, ಅಕ್ಟೋಬರ್ 5ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವು ಕಳೆದ ಬಾರಿಯ ರನ್ನರ್-ಅಪ್ ನ್ಯೂಜಿಲೆಂಡ್ ತಂಡವನ್ನು ಎದುರಿಸುವುದರೊಂದಿಗೆ ವಿಶ್ವಕಪ್ ಪಂದ್ಯಾವಳಿಗೆ ಚಾಲನೆ ಸಿಗಲಿದೆ.

2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಗಳು ಕ್ರಮವಾಗಿ ಅಹಮದಾಬಾದ್, ಚೆನ್ನೈ, ಮುಂಬೈ, ಧರ್ಮಶಾಲಾ, ದೆಹಲಿ, ಪುಣೆ, ಬೆಂಗಳೂರು, ಹೈದರಾಬಾದ್, ಲಕ್ನೋ ಮತ್ತು ಕೋಲ್ಕತ್ತಾದ ಸ್ಟೇಡಿಯಂಗಳಲ್ಲಿ ನಡೆಯಲಿವೆ. ಮಾತ್ರವಲ್ಲದೆ, ಗುವಾಹಟಿ ಮತ್ತು ತಿರುವನಂತಪುರಂನಲ್ಲಿರುವ ಕ್ರೀಡಾಂಗಣಗಳು ಅಭ್ಯಾಸ ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ.
ಇದೀಗ ಐಸಿಸಿ ಪಂದ್ಯಾವಳಿಗೆ ಮುಂಚಿತವಾಗಿ ಮೂಲಸೌಕರ್ಯವನ್ನು ನವೀಕರಿಸಲು ಪ್ರತಿ ಸ್ಟೇಡಿಯಂ 50 ಕೋಟಿ ರೂಪಾಯಿಗಳನ್ನು ಪಡೆಯುತ್ತದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹತ್ತು ವಿಶ್ವಕಪ್ ಕ್ರೀಡಾಂಗಣಗಳ ನವೀಕರಣಕ್ಕೆ ಒಟ್ಟು 500 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ನಿಗದಿಪಡಿಸಿದೆ.
ಮುಂಬೈನ ಐಕಾನಿಕ್ ವಾಂಖೆಡೆ ಸ್ಟೇಡಿಯಂ ನಾಲ್ಕು ಲೀಗ್ ಹಂತದ ಪಂದ್ಯಗಳು ಮತ್ತು ಸೆಮಿಫೈನಲ್ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಹೀಗಾಗಿ ಹೊಸ ಎಲ್ಇಡಿ ಲೈಟಿಂಗ್ ಮತ್ತು ನವೀಕರಿಸಿದ ಕಾರ್ಪೊರೇಟ್ ಬಾಕ್ಸ್‌ಗಳು ಮತ್ತು ಶೌಚಾಲಯಗ ನವೀಕರಣದೊಂದಿಗೆ ಸ್ಟೇಡಿಯಂ ಅಪ್‌ಗ್ರೇಡ್ ಆಗಲಿದೆ.
ಇನ್ನು ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂ ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯಕ್ಕೆ ಆತಿಥ್ಯ ವಹಿಸಲಿದ್ದು, ಅದರ ಔಟ್‌ಫೀಲ್ಡ್ ಅನ್ನು ರಿಲೇಡ್ ಮಾಡಲಾಗುತ್ತದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣವು ನವೀಕರಿಸಿದ ಡ್ರೆಸ್ಸಿಂಗ್ ರೂಮ್‌ಗಳನ್ನು ಹೊಂದಲಿದೆ.

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (ಹೆಚ್‌ಪಿಸಿಎ) ಸ್ಟೇಡಿಯಂನಲ್ಲಿ ಆಮದು ಮಾಡಿದ ಹುಲ್ಲಿನೊಂದಿಗೆ ಒಂದು ಔಟ್‌ಫೀಲ್ಡ್ ಸ್ಥಾಪಿಸಲಾಗುತ್ತದೆ ಮತ್ತು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಹೊಸ ತಾತ್ಕಾಲಿಕ ಮೇಲ್ಛಾವಣಿ ಸ್ಥಾಪಿಸಲು ನಿರ್ಧರಿಸಲಾಗಿದೆ.
ಇದೇ ವೇಳೆ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನವೀಕರಿಸಿದ ಟಿಕೆಟಿಂಗ್ ಸಾಫ್ಟ್‌ವೇರ್ ವ್ಯವಸ್ಥೆ, ಸುಧಾರಿತ ಶೌಚಾಲಯಗಳು ಮತ್ತು 10 ಸಾವಿರ ಆಸನಗಳ ಬದಲಾವಣೆಯೊಂದಿಗೆ ಅಭಿವೃದ್ಧಿಪಡಿಸಲಾಗುತ್ತದೆ.
ಇನ್ನು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಹೊಸ ಎಲ್ಇಡಿ ದೀಪಗಳನ್ನು ಅಳವಡಿಸಲಾಗುವುದು ಮತ್ತು ಎರಡು ಕೆಂಪು ಮಣ್ಣಿನ ಪಿಚ್‌ಗಳನ್ನು ನಿರ್ಮಾಣ ಮಾಡಲಾಗುತ್ತದೆ.
ಧರ್ಮಶಾಲಾ ಸ್ಟೇಡಿಯಂನಲ್ಲಿ ಬೃಹತ್ ನವೀಕರಣ
ಹಿಮಾಚಲಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಪ್ರಕಾರ, ಧರ್ಮಶಾಲಾದಲ್ಲಿನ ಹೆಚ್‌ಪಿಸಿಎ ಸ್ಟೇಡಿಯಂ ಈಗಾಗಲೇ ಬೃಹತ್ ನವೀಕರಣಕ್ಕೆ ಒಳಗಾಗಿದೆ. ಈ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧದ ಭಾರತದ ಪಂದ್ಯ ಸೇರಿದಂತೆ ಐದು ವಿಶ್ವಕಪ್ ಪಂದ್ಯಗಳನ್ನು ಆಯೋಜಿಸಲಿದೆ.
ಧರ್ಮಶಾಲಾ ಸ್ಟೇಡಿಯಂನಲ್ಲಿ 6,000 ಮೀಟರ್ ವಿಶೇಷ ಪೈಪ್‌ಗಳನ್ನು ಹೊಂದಿರುವ ಹೊಸ ಒಳಚರಂಡಿ ವ್ಯವಸ್ಥೆಯನ್ನು ನಿರ್ಮಿಸಲಾಗಿದೆ. ಅಲ್ಲದೆ, ಹೆಚ್ಚಿನ ಮಳೆನೀರನ್ನು ತ್ವರಿತವಾಗಿ ತೆಗೆದುಹಾಕುವ ಸಬ್-ಏರ್ ವ್ಯವಸ್ಥೆ ನಿರ್ಮಿಸಲಾಗಿದೆ.
ತಣ್ಣನೆಯ ಹವಾಮಾನಕ್ಕೆ ಸೂಕ್ತವಾದ ರೈಗ್ರಾಸ್ ಮತ್ತು ಸ್ಕಾಟ್ಲೆಂಡ್‌ನ ಲ್ಯಾಬ್‌ನಲ್ಲಿ ಮೌಲ್ಯಮಾಪನ ಮಾಡಿದ ನದಿ ಮರಳು ಮತ್ತು ಜಲ್ಲಿಕಲ್ಲುಗಳನ್ನು ಕ್ರೀಡಾಂಗಣದ ಹೊರಾಂಗಣದಲ್ಲಿ ಬಳಸಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications