Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

"ಟೈಮ್‌ಡ್ ಔಟ್‌ ಆಗಿರಲಿಲ್ಲ": ಸಾಕ್ಷಿ ಹಂಚಿಕೊಂಡ ಎಂಜೆಲೋ ಮ್ಯಾಥ್ಯೂಸ್

ವಿಶ್ವಕಪ್ ಟೂರ್ನಿಯ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ವಿರುದ್ಧದ ಪಂದ್ಯ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಏಂಜಲೋ ಮ್ಯಾಥ್ಯೂಸ್ ಟೈಮ್‌ಡ್ ಔಟ್ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಇನ್ನು ಸ್ವತಃ ಏಂಜಲೋ ಮ್ಯಾಥ್ಯೂಸ್ ಘಟನೆಯ ಬಗ್ಗೆ ಮಾಧ್ಯಮಗಳ ಜಿತೆಗೂ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ ಬಾಂಗ್ಲಾದೇಶ ತಂಡದ ವರ್ತನೆಯ ಬಗ್ಗೆ ತೀವ್ರ ಟೀಕೆಯನ್ನು ಕೂಡ ಮಾಡಿದ್ದಾರೆ.

ಇದೀಗ ಸಾಮಾಜಿಕ ಜಾಲತಾಣದಲ್ಲಿ ಮ್ಯಾಥ್ಯೂಸ್ ತಾನು ಟೈಮ್‌ಡ್‌ ಔಟ್ ಆಗಿರಲಿಲ್ಲ ಎನ್ನುವುದಕ್ಕೆ ಸಾಕ್ಷಿಯೊಂದನ್ನು ನೀಡಿದ್ದಾರೆ. ಎಕ್ಸ್‌ನಲ್ಲಿ ಫೋಟೊವನ್ನು ಪೋಸ್ಟ್ ಮಾಡಿರುವ ಮ್ಯಾಥ್ಯೂಸ್ ಇದರಲ್ಲಿ ಹಿಂದಿನ ಬ್ಯಾಟರ್ ಕ್ಯಾಚ್ ನೀಡಿದ ಹಾಗೂ ನಂತರ ತಾನು ಹೆಲ್ಮೆಟ್ ಬದಲಾಯಿಸಿಕೊಂಡ ಬಳಿಕದ ಸಮಯವನ್ನು ಬಹಿರಂಗಪಡಿಸಿದ್ದಾರೆ. ಈ ಸಂದರ್ಭದಲ್ಲಿ ಇನ್ನೂ ಕೂಡ ಟೈಮ್‌ಡ್ ಔಟ್‌ಗೆ ಐದು ಸೆಕೆಂಡ್‌ಗಳ ಕಾಲಾವಕಾಶವಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

World Cup 2023: Angelo Mathews said 4th umpire was wrong, shares proof in social media

ಇನ್ನು ಇದರ ಜೊತೆಗೆ ಇದರಲ್ಲಿ ಪಂದ್ಯದ ನಾಲ್ಕನೇ ಅಂಫೈರ್ ಇಲ್ಲಿ ತಪ್ಪೆಸಗಿದ್ದಾರೆ ಎಂದು ಎಕ್ಸ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಮ್ಯಾಥ್ಯೂಸ್. "ಇಲ್ಲಿ ನಾಲ್ಕನೇ ಅಂಪೈರ್ ತಪ್ಪೆಸಗಿದ್ದಾರೆ. ಹೆಲ್ಮೆಟ್ ಪಡೆದುಕೊಂಡ ಬಳಿಕವೂ ಐದು ಸೆಕೆಂಡ್‌ಗಳು ಬಾಕಿಯಿತ್ತು. ದಯವಿಟ್ಟು ಇದನ್ನು 4ನೇ ಅಂಫೈರ್ ಸರಿಪಡಿಸಬಹುದೇ? ಹೆಲ್ಮೆಟ್ ಇಲ್ಲದೆ ನಾನು ಬೌಲರನ್ನು ಎದುರಿಸಲು ಸಾಧ್ಯವಾಗದ ಕಾರಣ ಸುರಕ್ಷತೆಯು ಅತಿಮುಖ್ಯವಾಗಿದೆ" ಎಂದಿದ್ದಾರೆ ಏಂಜಲೋ ಮ್ಯಾಥ್ಯೂಸ್.

ಇನ್ನು ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಏಂಜಲೋ ಮ್ಯಾಥ್ಯೂಸ್ ಟೈಮ್‌ಡ್ ಔಟ್ ಆಗುವ ಮೂಲಕ ವಿಕೆಟ್ ಕಳೆದುಕೊಂಡಿದ್ದಾರೆ. ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ನ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಈ ರೀತಿಯಲ್ಲಿ ವಿಕೆಟ್ ಕಳೆದುಕೊಂಡ ದೃಷ್ಟಾಂತ ಎನಿಸಿಕೊಂಡಿದೆ.

ಇನ್ನು ಈ ರೀತಿಯಾಗಿ ಔಟ್ ಎಂದು ಘೋಷಣೆ ಮಾಡಿದ ಬಳಿಕ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ತಂಡಗಳ ನಡುವೆ ಸಾಕಷ್ಟು ಬಿಸಿ ವಾತಾವರಣ ನಿರ್ಮಾಣವಾಗಿತ್ತು. ಇತ್ತಂಡಗಳ ಆಟಗಾರರು ಕುಡ ಸಾಕಷ್ಟು ಮಾತಿನ ಚಕಮಕಿ ಕೂಡ ನಡೆಸಿದ್ದರು. ಇದು ಈಗ ಪಂದ್ಯ ಮುಗಿದ ಬಳಿಕವೂ ಮುಂದುವರಿದಿದೆ. ಶ್ರೀಲಂಕಾ ಹಿರಿಯ ಆಟಗಾರ ಬಾಂಗ್ಲದೇಶ ತಂಡದ ವರ್ತನೆಯ ಬಗ್ಗೆ ಸಾಕಷ್ಟು ಕಟುವಾಗಿ ಟೀಕಿಸಿದ್ದರೆ ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ ತಮ್ಮ ನಿರ್ಧಾರವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

Story first published: Tuesday, November 7, 2023, 12:02 [IST]
Other articles published on Nov 7, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+