For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ 2023ರಲ್ಲಿ ರನ್‌ ಮಳೆ ಹರಿಸಿದ ದಾಂಡಿಗರು: ಎರಡಕ್ಕಿಂತ ಹೆಚ್ಚು ಶತಕ ಸಾಧಕರು

By ನಾಗೇಶ್

ಪ್ರಸಕ್ತ ವಿಶ್ವಕಪ್ ನಲ್ಲಿ ಸ್ಟಾರ್ ಆಟಗಾರರು ರನ್ ಹೊಳೆ ಹರಿಸಿದ್ದಾರೆ. ತಮ್ಮ ಧಮಾಕೆದಾರ ಪ್ರದರ್ಶನದ ಬಲದಿಂದ ತಂಡಕ್ಕೆ ಹಲವರು ನೆರವಾಗಿದ್ದಾರೆ. ಈ ಬಾರಿ ವಿಶ್ವಕಪ್‌ನಲ್ಲಿ ಶತಕ ಸಾಧಕರಿಗೇನು ಕಮ್ಮಿ ಇಲ್ಲ. ಪ್ರತಿ ಬಾರಿಯಂತೆ ಈ ಬಾರಿಯೂ ಬಲಿಷ್ಠ ತಂಡಗಳ ಆಟಗಾರರು ಮೈದಾನದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ ಅಬ್ಬರಿಸಿದ್ದಾರೆ.

2023ರ ವಿಶ್ವಕಪ್‌ನಲ್ಲಿ ಒಂದಕ್ಕಿಂತ ಹೆಚ್ಚು ಶತಕ ಸಿಡಿಸಿದ ಆರು ಬ್ಯಾಟ್ಸ್‌ಮನ್‌ಗಳಿದ್ದಾರೆ. ಈ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಅಗ್ರಸ್ಥಾನದಲ್ಲಿದ್ದಾರೆ. ಅವರು ನಾಲ್ಕು ಶತಕಗಳನ್ನು ಗಳಿಸಿದ್ದಾರೆ.
ಸೌತ್ ಆಫ್ರಿಕಾ ತಂಡದ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ವಿಶ್ವಕಪ್ 2023 ರಲ್ಲಿ ಇದುವರೆಗೆ ನಾಲ್ಕು ಶತಕಗಳನ್ನು ಗಳಿಸಿದ್ದಾರೆ. ಈ ನಾಲ್ಕು ಶತಕಗಳ ನೆರವಿನಿಂದ ಅವರು 8 ಪಂದ್ಯಗಳಲ್ಲಿ ಒಟ್ಟು 550 ರನ್ ಗಳಿಸಿದ್ದಾರೆ. ಅವರ ಬ್ಯಾಟಿಂಗ್ ಸರಾಸರಿ 68.75 ಮತ್ತು ಸ್ಟ್ರೈಕ್ ರೇಟ್ 111.33.

World cup 2023: Batters who hit two or more centuries in this tournament

ಕಿವೀಸ್ ಬ್ಯಾಟ್ಸ್‌ಮನ್ ರಚಿನ್ ರವೀಂದ್ರ ಹೆಸರು ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. 2023ರ ವಿಶ್ವಕಪ್‌ನಲ್ಲಿ ರಚಿನ್ ಮೂರು ಶತಕಗಳನ್ನು ಬಾರಿಸಿದ್ದಾರೆ. ಅವರು 8 ಪಂದ್ಯಗಳಲ್ಲಿ 74.71 ಸರಾಸರಿ ಮತ್ತು 107.39 ಸ್ಟ್ರೈಕ್ ರೇಟ್‌ನಲ್ಲಿ 523 ರನ್ ಗಳಿಸಿದ್ದಾರೆ.

ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ 2023 ರ ವಿಶ್ವಕಪ್‌ನಲ್ಲಿ ಎರಡು ಶತಕಗಳನ್ನು ಗಳಿಸಿದ್ದಾರೆ. ಮ್ಯಾಕ್ಸ್‌ವೆಲ್ ಈ ಪಂದ್ಯಾವಳಿಯಲ್ಲಿ ಏಳು ಪಂದ್ಯಗಳನ್ನು ಆಡಿದ್ದಾರೆ ಮತ್ತು 79.40 ಸರಾಸರಿ ಮತ್ತು 152.69 ಸ್ಟ್ರೈಕ್ ರೇಟ್‌ನಲ್ಲಿ 397 ರನ್ ಗಳಿಸಿದ್ದಾರೆ.

ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಕೂಡ ಸ್ಥಾನ ಪಡೆದಿದ್ದಾರೆ. ಕೊಹ್ಲಿ 8 ಪಂದ್ಯಗಳಲ್ಲಿ ಎರಡು ಶತಕ ಬಾರಿಸಿದ್ದಾರೆ. ಅವರು 108.60 ಸರಾಸರಿಯಲ್ಲಿ 543 ರನ್ ಗಳಿಸಿದ್ದಾರೆ ಮತ್ತು ಸ್ಟ್ರೈಕ್ ರೇಟ್ 88.29 ಆಗಿದೆ.‌

ದಕ್ಷಿಣ ಆಫ್ರಿಕಾದ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ 2023 ರ ವಿಶ್ವಕಪ್‌ನ 8 ಪಂದ್ಯಗಳಲ್ಲಿ ಎರಡು ಶತಕಗಳನ್ನು ಗಳಿಸಿದ್ದಾರೆ. ಈ ಅವಧಿಯಲ್ಲಿ, ಅವರ ಬ್ಯಾಟಿಂಗ್ ಸರಾಸರಿ 45.75 ಮತ್ತು ಸ್ಟ್ರೈಕ್ ರೇಟ್ 90.59 ಆಗಿತ್ತು.

ಆಸ್ಟ್ರೇಲಿಯಾದ ಸ್ಫೋಟಕ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಕೂಡ ಈ ಟೂರ್ನಿಯಲ್ಲಿ ಎರಡು ಶತಕ ಸಿಡಿಸಿದ್ದಾರೆ. ಅವರು 8 ಪಂದ್ಯಗಳಲ್ಲಿ 55.75 ಸರಾಸರಿ ಮತ್ತು 108.25 ಸ್ಟ್ರೈಕ್ ರೇಟ್‌ನಲ್ಲಿ 446 ರನ್ ಗಳಿಸಿದ್ದಾರೆ.

Story first published: Saturday, November 11, 2023, 8:50 [IST]
Other articles published on Nov 11, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+