For Quick Alerts
ALLOW NOTIFICATIONS  
For Daily Alerts
 

World Cup 2023: ಚರಿತ್ ಅಸಲಂಕಾ ಭರ್ಜರಿ ಶತಕ; ಬಾಂಗ್ಲಾದೇಶಕ್ಕೆ ಕಠಿಣ ಗುರಿ ನೀಡಿದ ಶ್ರೀಲಂಕಾ

ಸೋಮವಾರ, ನವೆಂಬರ್ 6ರಂದು ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯತ್ತಿರುವ 2023ರ ಐಸಿಸಿ ಏಕದಿನ ವಿಶ್ವಕಪ್‌ನ 38ನೇ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ವಿರುದ್ಧ ಶ್ರೀಲಂಕಾ ಸವಾಲಿನ ಮೊತ್ತ ಕಲೆಹಾಕಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ಚರಿತ್ ಅಸಲಂಕಾ ಅವರ ಭರ್ಜರಿ ಶತಕದ ನೆರವಿನಿಂದ ನಿಗದಿತ 49.3 ಓವರ್‌ಗಳಲ್ಲಿ279 ರನ್‌ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಬಾಂಗ್ಲಾದೇಶ ತಂಡಕ್ಕೆ 280 ರನ್‌ಗಳ ಕಠಿಣ ಗೆಲುವಿನ ಗುರಿ ನೀಡಿದೆ.

world-cup-2023

ಶ್ರೀಲಂಕಾದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಪಾಥುಮ್ ನಿಸ್ಸಾಂಕ ಮತ್ತು ಕುಸಲ್ ಪೆರೇರಾ ಉತ್ತಮ ಆರಂಭ ಒದಗಿಸಲು ವಿಫಲರಾದರು. ತಂಡದ 5 ರನ್‌ಗಳಾಗಿದ್ದಾಗ ಕುಸಲ್ ಪೆರೇರಾ ಕೇವಲ 4 ರನ್ ಗಳಿಸಿ ಔಟಾದರು.

ನಂತರ ಬಂದ ನಾಯಕ ಕುಸಲ್ ಮೆಂಡೀಸ್ ಜೊತೆ ಸೇರಿ ಪಾಥುಮ್ ನಿಸ್ಸಾಂಕ ಎರಡನೇ ವಿಕೆಟ್‌ಗೆ 61 ರನ್‌ಗಳ ಜೊತೆಯಾಟ ನೀಡಿದರು. ಈ ವೇಳೆ ಕುಸಲ್ ಮೆಂಡೀಸ್ 19 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಅನಂತರ ಪಾಥುಮ್ ನಿಸ್ಸಾಂಕ 36 ಎಸೆತಗಳಲ್ಲಿ 8 ಬೌಂಡರಿ ಸಮೇತ 41 ರನ್ ಔಟಾದರು.

ಮಧ್ಯಮ ಕ್ರಮಾಂಕದಲ್ಲಿ ಸದೀರ ಸಮರವಿಕ್ರಮ 42 ಎಸೆತಗಳಲ್ಲಿ 4 ಬೌಂಡರಿಗಳ ಮೂಲಕ 41 ರನ್ ಗಳಿಸಿ ತಂಡಕ್ಕೆ ನೆರವಾದರು. ನಂತರ ಬಂದ ಏಂಜೆಲೊ ಮ್ಯಾಥ್ಯೂಸ್ ಒಂದೂ ಎಸೆತ ಎದುರಿಸದೇ ಟೈಮ್ಡ್ ಔಟ್ ಮೂಲಕ ಹೊರನಡೆಯಬೇಕಾಯಿತು.

World Cup 2023: Charith Asalanka Hits Century; Bangladesh Need 280 Runs To Win Against Sri Lanka

ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ನೆಲಕಚ್ಚಿ ಆಡಿದ ಚರಿತ್ ಅಸಲಂಕಾ 105 ಎಸೆತಗಳಲ್ಲಿ 6 ಬೌಂಡರಿ ಹಾಗೂ 5 ಸಿಕ್ಸರ್ ಸಮೇತ 106 ರನ್ ಬಾರಿಸಿ ಕೊನೆಯಲ್ಲಿ ಔಟಾದರು. ಇವರಿಗೆ ಸಾಥ್ ನೀಡಿದ ಧನಂಜಯ್ ಡಿ ಸಿಲ್ವಾ 36 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 34 ರನ್ ಗಳಿಸಿದರು.

ಉಳಿದಂತೆ ಮಹೀಶ್ ತೀಕ್ಷಣ 31 ಎಸೆತಗಳಲ್ಲಿ 3 ಬೌಂಡರಿಗಳ ನೆರವಿನಿಂದ 22 ರನ್ ಗಳಿಸಿದರೆ, ದುಶ್ಮಂತ್ ಚಮೀರ 4 ರನ್ ಗಳಿಸಿದರು.

World Cup 2023: Charith Asalanka Hits Century; Bangladesh Need 280 Runs To Win Against Sri Lanka

ಬೌಲಿಂಗ್‌ನಲ್ಲಿ ಬಾಂಗ್ಲಾದೇಶ ತಂಡದ ಪರ ತಂಝಿಮ್ ಹಸನ್ ಸಕಿಬ್ 10 ಓವರ್‌ಗಳಲ್ಲಿ 80 ರನ್ ನೀಡಿ 3 ವಿಕೆಟ್ ಪಡೆದರೆ, ಶಕೀಬ್ ಅಲ್ ಹಸನ್ 10 ಓವರ್‌ಗಳಲ್ಲಿ 57 ರನ್ ನೀಡಿ 2 ವಿಕೆಟ್ ಕಬಳಿಸಿದರೆ, ಶೋರಿಫುಲ್ ಇಸ್ಲಾಂ 9.3 ಓವರ್‌ಗಳಲ್ಲಿ 52 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಮಹಿದಿ ಹಸನ್ ಮಿರಾಜ್ ಒಂದು ವಿಕೆಟ್ ತಮ್ಮದಾಗಿಸಿಕೊಂಡರು.

Story first published: Monday, November 6, 2023, 17:54 [IST]
Other articles published on Nov 6, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+