For Quick Alerts
ALLOW NOTIFICATIONS  
For Daily Alerts
 

ಭಾರತ vs ನೆದರ್ಲೆಂಡ್ಸ್: ಆಡುವ ಬಳಗದ ಬದಲಾವಣೆ ಬಗ್ಗೆ ದೊಡ್ಡ ಸುಳಿವು ನೀಡಿದ ಕೋಚ್ ದ್ರಾವಿಡ್

ಈ ಬಾರಿಯ ವಿಶ್ವಕಪ್ ಟೂರ್ನಿಯ ಕಟ್ಟ ಕಡೆಯ ಲೀಗ್ ಪಂದ್ಯದಲ್ಲಿ ಟೀಮ್ ಇಂಡಿಯಾ ನೆದರ್ಲೆಂಡ್ಸ್ ತಂಡವನ್ನು ಎದುರಿಸಲಿದೆ. ಟೀಮ್ ಇಂಡಿಯಾ ಈಗಾಗಲೇ ಸೆಮಿಓಐನಲ್‌ನಲ್ಲಿ ಮೊದಲ ಸ್ಥಾನವನ್ನು ಖಚಿತಪಡಿಸಿಕೊಂಡಿದೆ ನೆದರ್ಲೆಂಡ್ಸ್ ವಿಶ್ವಕಪ್ ಟೂರ್ನಿಯಿಂದ ಈಗಾಗಲೇ ನಿರ್ಗಮಿಸಿಯಾಗಿದೆ. ಹೀಗಾಗಿ ಈ ಪಂದ್ಯ ಎರಡು ತಂಡಗಳಿಗೂ ಫಲಿತಾಂಶದ ದೃಷ್ಟಿಯಿಂದ ಯಾವುದೇ ಬದಲಾವಣೆ ಮಾಡುವುದುದಿಲ್ಲ. ಆದರೆ ಗೆಲುವಿನ ಲಯವನ್ನು ಮುಂದುವರಿಸಿಕೊಳ್ಳುವ ದೃಷ್ಟಿಯಿಂದ ಭಾರತಕ್ಕೆ ಈ ಪಂದ್ಯ ಮಹತ್ವದ್ದಾಗಿದ್ದರೆ ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನದಿಂದ ಮೇಲಕ್ಕೆ ಬರಲು ನೆದರ್ಲೆಂಡ್ಸ್ ಪ್ರಯತ್ನ ನಡೆಸಲಿದೆ.

ಈ ಸಂದರ್ಭದಲ್ಲಿ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಕೆಲ ಬದಲಾವನೆಗಳನ್ನು ಮಾಡಿಕೊಂಡು ಕಣಕ್ಕಿಳಿಯುವ ಸಾಧ್ಯತೆಯಿದೆ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿದೆ. ಸೆಮಿ ಫೈನಲ್ ದೃಷ್ಟಿಯಿಂದ ಕೆಲ ಆಟಗಾರರಿಗೆ ವಿಶ್ರಾಂತಿ ನೀಡಿ ಬೆಂಚ್ ಕಾಯುತ್ತಿರುವ ಆಟಗಾರರಿಗೆ ಅವಕಾಶ ನೀಡಬಹುದು ಎನ್ನುವ ಚ್ಚೆಗಳು ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾದ ಕೋಚ್ ರಾಹುಲ್ ದ್ರಾವಿಡ್ ಪ್ರಮುಖ ಸುಳಿವೊಂದನ್ನು ನೀಡಿದ್ದಾರೆ.

World Cup 2023: Coach Rahul Dravid hint on Team India playing XI for match against Netherlands

ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಆಡುವ ಬಳಗದಲ್ಲಿ ಬದಲಾವಣೆ ಮಾಡಿಕೊಂಡು ಕಣಕ್ಕಿಳಿಯುವ ಸಾಧ್ಯತೆಯಿಲ್ಲ ಎನ್ನುವ ಸುಳಿವು ನೀಡಿದ್ದಾರೆ. ಸೆಮಿಫೈನಲ್ ಮುಂದಿಟ್ಟುಕೊಂಡು ಈ ಹಂತದಲ್ಲಿ ಯಾವುದೇ ಬದಲಾವಣೆ ಅಸಾಧ್ಯ ಎನ್ನುವ ರೀತಿಯಲ್ಲಿ ದ್ರಾವಿಡ್ ಮಾತನ್ನಾಡಿದ್ದಾರೆ.

ಪಂದ್ಯಕ್ಕೂ ಮುನ್ನ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಕೋಚ್ ದ್ರಾವಿಡ್ ಭಾರತ ತಂಡಕ್ಕೆ ಆರು ದಿನಗಳ ಉತ್ತಮವಾದ ವಿಶ್ರಾಂತಿ ದೊರೆತಿದೆ. ಹೀಗಾಗಿ ನಾಕೌಟ್‌ಗೂ ಮುನ್ನ ಭಾರತ ತಂಡದ ಆಡುವ ಬಳಗದಲ್ಲಿ ಯಾವುದೇ ಬದಲಾವನೆ ಮಾಡುವ ಸಾಧ್ಯತೆಯಿಲ್ಲ ಎನ್ನುವ ಸುಳಿವು ನೀಡಿದ್ದಾರೆ.

"ಕಳೆದ ಪಂದ್ಯದ ಬಳಿಕ ನಾವು ಆರು ದಿನಗಳ ವಿಶ್ರಾಂತಿ ಹೊಂದಿದ್ದೇವೆ. ಉತ್ತಮವಾದ ವಿಶ್ರಾಂತಿ ಪಡೆದುಕೊಂಡಿದ್ದೇವೆ. ಆಟಗಾರರು ಉತ್ತಮವಾದ ಸ್ಥಿತಿಯಲ್ಲಿದ್ದಾರೆ. ಸೆಮಿಫೈನಲ್‌ಗೂ ಮುನ್ನ ಒಂದು ಪಂದ್ಯ ಮಾತ್ರವೇ ನಮಗೆ ಬಾಕಿಯಿದೆ. ಹುಡುಗರೆಲ್ಲಾ ವಿಶ್ರಾಂತಿ ಪಡೆದುಕೊಂಡಿದ್ದಾರೆ. ನಾನು ಇಷ್ಟನ್ನು ಮಾತ್ರವೇ ಹೇಳಲು ಸಾಧ್ಯ" ಎಂದು ಕೋಚ್ ಹೇಳಿಕೆ ನೀಡುವ ಮೂಲಕ ಬದಲಾವಣೆ ನಿರೀಕ್ಷೆ ಮಾಡುವುದು ಬೇಡ ಎನ್ನುವ ನಿಟ್ಟಿನಲ್ಲಿ ಹೇಳಿಕೆ ನೀಡಿದ್ದಾರೆ.

"ನಾವು ಟೂರ್ನಿಯ ಕೊನೆಯ ಹಂತದಲ್ಲಿದ್ದೇವೆ. ಆಡುವ ಬಳಗದಲ್ಲಿ ಯಾರೆಲ್ಲಾ ಇರಬಹುದು ಎಂದು ನೀವು ನಿರೀಕ್ಷಿಸುವ ಆಟಗಾರರ ಮೇಲೆ ನಮ್ಮ ಗಮನ ನೆಟ್ಟಿದೆ. ಸೆಮಿಪೈನಲ್‌ಗೆ ಮುನ್ನ ನಾವು ಮಾನಸಿಲವಾಗಿ ಮತ್ತು ದೈಹಿಕವಾಗಿ ಪೂರಕವಾಗಿರಬೇಕಿದೆ. ಅದು ಸಾಧ್ಯವಾದರೆ ಫೈನಲ್‌ನಲ್ಲಿ ಆಡಲಿದ್ದೇವೆ" ಎಂದು ಕೋಚ್ ರಾಹುಲ್ ದ್ರಾವಿಡ್ ನೆದರ್ಲೆಂಡ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಪ್ರತಿಕ್ರಿಯೆ ನೀಡಿದ್ದಾರೆ.

ಭಾರತ ಭಾನುವಾರ ನೆದರ್ಲೆಂಡ್ಸ್ ತಂಡದ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲಿದೆ. ಈ ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ ಅಭಿಮಾಣಿಗಳ ಚಿತ್ತ ಸಹಜವಾಗಿಯೇ ಟೀಮ್ ಇಂಡಿಯಾದ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಮೇಕೆ ನಿಟ್ಟಿದ್ದು ಈ ಪಂದ್ಯದಲ್ಲಿ ಕೊಹ್ಲಿ ಮತ್ತೊಂದು ಶತಕ ಸಿಡಿಸಿ ಸಚಿನ್ ತೆಂಡೂಲ್ಕರ್ ಅವರ ದಾಖಲೆ ಹಿಂದಿಕ್ಕಿ 50ನೇ ಏಕದಿನ ಶತಕ ಸಿಡಿಸಿ ವಿಶ್ವದಾಖಲೆ ಬರೆಯಲಿದ್ದಾರೆಯೇ ಎನ್ನುವ ಕುತೂಹಕ ಮೂಡಿಸಿದೆ.

Story first published: Saturday, November 11, 2023, 15:36 [IST]
Other articles published on Nov 11, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+