For Quick Alerts
ALLOW NOTIFICATIONS  
For Daily Alerts
 

World Cup 2023: ವಿರಾಟ್ ಕೊಹ್ಲಿಯ ಬೃಹತ್ ದಾಖಲೆ ಹಿಂದಿಕ್ಕಿದ ಡೇವಿಡ್ ವಾರ್ನರ್

ಶನಿವಾರ, ಅಕ್ಟೋಬರ್ 29ರಂದು ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಅವರು ಭಾರತದ ವಿರಾಟ್ ಕೊಹ್ಲಿಯ ದಾಖಲೆಯನ್ನು ಹಿಂದಿಕ್ಕಿ ಐಸಿಸಿ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ನಾಲ್ಕನೇ ಆಟಗಾರ ಎನಿಸಿಕೊಂಡರು.

ಧರ್ಮಶಾಲಾದಲ್ಲಿ ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ 36 ವರ್ಷದ ಡೇವಿಡ್ ವಾರ್ನರ್ ತಮ್ಮ ವೈಯಕ್ತಿಕ ಹೆಗ್ಗುರುತನ್ನು ಸಾಧಿಸಿದರು.

World Cup 2023: David Warner Overtakes Virat Kohlis Huge Record In World Cup History

ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಡೇವಿಡ್ ವಾರ್ನರ್ ಕೇವಲ 65 ಎಸೆತಗಳಲ್ಲಿ 5 ಬೌಂಡರಿ ಮತ್ತು 6 ಸಿಕ್ಸರ್‌ಗಳೊಂದಿಗೆ 124.61ರ ಸ್ಟ್ರೈಕ್ ರೇಟ್‌ನಲ್ಲಿ 81 ರನ್ ಬಾರಿಸಿದರು.

ಡೇವಿಡ್ ವಾರ್ನರ್ ಈವರೆಗೆ ತಾವು ಆಡಿದ 24 ವಿಶ್ವಕಪ್ ಪಂದ್ಯಗಳಲ್ಲಿ 63.86ರ ಸರಾಸರಿ ಮತ್ತು 102ರ ಸ್ಟ್ರೈಕ್ ರೇಟ್‌ನಲ್ಲಿ 1,405 ರನ್ ಕಲೆಹಾಕಿದ್ದಾರೆ. ಈ ವೇಳೆ ಆರು ವಿಶ್ವಕಪ್ ಶತಕಗಳನ್ನು ಗಳಿಸಿದ್ದಾರೆ ಇದು ಆಸ್ಟ್ರೇಲಿಯಾ ಪರ ಅತಿ ಹೆಚ್ಚು ಆಗಿದೆ. ಅಲ್ಲದೆ, ನಾಲ್ಕು ಅರ್ಧ ಶತಕಗಳು ಮತ್ತು ಅತ್ಯುತ್ತಮ ವೈಯಕ್ತಿಕ ಸ್ಕೋರ್ 178 ರನ್ ಆಗಿದೆ.

2023ರ ವಿಶ್ವಕಪ್‌ನ ಆರು ಪಂದ್ಯಗಳಲ್ಲಿ ಡೇವಿಡ್ ವಾರ್ನರ್ 68.33ರ ಸರಾಸರಿಯಲ್ಲಿ 413 ರನ್ ಗಳಿಸಿದ್ದಾರೆ ಮತ್ತು 112ಕ್ಕಿಂತ ಅಧಿಕ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಇನ್ನು ಎರಡು ಶತಕ ಮತ್ತು ಒಂದು ಅರ್ಧಶತಕವನ್ನು ಹೊಂದಿದ್ದಾರೆ, ಜೊತೆಗೆ 163 ರನ್ ಅತ್ಯುತ್ತಮ ಸ್ಕೋರ್ ಆಗಿದೆ.

World Cup 2023: David Warner Overtakes Virat Kohlis Huge Record In World Cup History

ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ತಮ್ಮ 31 ವಿಶ್ವಕಪ್ ಪಂದ್ಯಗಳಲ್ಲಿ 55.36ರ ಸರಾಸರಿಯಲ್ಲಿ ಮೂರು ಶತಕ ಮತ್ತು ಒಂಬತ್ತು ಅರ್ಧಶತಕಗಳೊಂದಿಗೆ 1,384 ರನ್ ಬಾರಿಸಿದ್ದಾರೆ.

ಭಾರತದ ದಿಗ್ಗಜ ಸಚಿನ್ ತೆಂಡೂಲ್ಕರ್ 45 ವಿಶ್ವಕಪ್ ಪಂದ್ಯಗಳಲ್ಲಿ ಆರು ಶತಕ ಮತ್ತು 15 ಅರ್ಧಶತಕಗಳೊಂದಿಗೆ 56.95ರ ಸರಾಸರಿಯಲ್ಲಿ 2,278 ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ.

ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ 46 ಪಂದ್ಯಗಳಲ್ಲಿ 45.86ರ ಸರಾಸರಿಯಲ್ಲಿ ಐದು ಶತಕ ಮತ್ತು ಆರು ಅರ್ಧಶತಕಗಳೊಂದಿಗೆ 1,743 ರನ್ ಕಲೆಹಾಕಿ ಎರಡನೇ ಸ್ಥಾನದಲ್ಲಿದ್ದಾರೆ.

World Cup 2023: David Warner Overtakes Virat Kohlis Huge Record In World Cup History

ಶ್ರೀಲಂಕಾದ ಕುಮಾರ ಸಂಗಕ್ಕಾರ ಆಡಿದ 37 ವಿಶ್ವಕಪ್ ಪಂದ್ಯಗಳಲ್ಲಿ 56.74ರ ಸರಾಸರಿಯಲ್ಲಿ ಐದು ಶತಕಗಳು ಮತ್ತು ಏಳು ಅರ್ಧಶತಕಗಳೊಂದಿಗೆ 1,532 ರನ್‌ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.

ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಪಂದ್ಯಕ್ಕೆ ಬರುವುದಾದರೆ, ಟ್ರಾವಿಸ್ ಹೆಡ್ 67 ಎಸೆತಗಳಲ್ಲಿ 10 ಬೌಂಡರಿ ಮತ್ತು 7 ಸಿಕ್ಸರ್ ಮೂಲಕ 109 ರನ್ ಗಳಿಸಿದರೆ, ಡೇವಿಡ್ ವಾರ್ನರ್ ಜೊತೆಗೆ 175 ರನ್‌ಗಳ ಆರಂಭಿಕ ಜೊತೆಯಾಟ ನೀಡಿದರು.

ಕೆಳ ಮಧ್ಯಮ ಕ್ರಮಾಂಕದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ 24 ಎಸೆತಗಳಲ್ಲಿ 5 ಬೌಂಡರಿಗಳೊಂದಿಗೆ ಮತ್ತು 2 ಸಿಕ್ಸರ್ ಸಮೇತ 41 ರನ್, ಜೋಶ್ ಇಂಗ್ಲಿಸ್ 28 ಎಸೆತಗಳಲ್ಲಿ 4 ಬೌಂಡರಿ ಮತ್ತು ಒಂದು ಸಿಕ್ಸರ್ ಮೂಲಕ 38 ರನ್, ನಾಯಕ ಪ್ಯಾಟ್ ಕಮ್ಮಿನ್ಸ್ 14 ಎಸೆತಗಳಲ್ಲಿ 2 ಬೌಂಡರಿ ಮತ್ತು 4 ಸಿಕ್ಸರ್ ನೆರವಿನಿಂದ 37 ರನ್‌ಗಳು ಆಸ್ಟ್ರೇಲಿಯಾ ತಂಡ 49.2 ಓವರ್‌ಗಳಲ್ಲಿ 388 ರನ್ ಕಲೆಹಾಕಲು ನೆರವಾಯಿತು.

ನ್ಯೂಜಿಲೆಂಡ್ ಪರ ಗ್ಲೆನ್ ಫಿಲಿಪ್ಸ್ 37 ರನ್‌ಗೆ 3 ವಿಕೆಟ್ ಮತ್ತು ಟ್ರೆಂಟ್ ಬೌಲ್ಟ್ 77 ರನ್‌ಗೆ 3 ವಿಕೆಟ್ ಪಡೆದು ಮಿಂಚಿದರು. ಮಿಚೆಲ್ ಸ್ಯಾಂಟ್ನರ್ ಎರಡು ವಿಕೆಟ್ ಪಡೆದರೆ, ಮ್ಯಾಟ್ ಹೆನ್ರಿ ಮತ್ತು ಜೇಮ್ಸ್ ನೀಶಮ್ ತಲಾ ಒಂದು ವಿಕೆಟ್ ಪಡೆದರು.

ಆಸ್ಟ್ರೇಲಿಯ ಐದು ಪಂದ್ಯಗಳಲ್ಲಿ ಮೂರು ಗೆಲುವುಗಳನ್ನು ಸಾಧಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದರೆ, ನ್ಯೂಜಿಲೆಂಡ್ ಐದು ಪಂದ್ಯಗಳಲ್ಲಿ ನಾಲ್ಕು ಗೆಲುವು ಕಂಡು ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.

Story first published: Sunday, October 29, 2023, 9:29 [IST]
Other articles published on Oct 29, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+