World Cup 2023: ವಿರಾಟ್ ಕೊಹ್ಲಿ 'ಸ್ವಾರ್ಥಿ' ಎಂದವರನ್ನು ಹಿಗ್ಗಾಮುಗ್ಗಾ ಟೀಕಿಸಿದ ಮಾಜಿ ಕ್ರಿಕೆಟಿಗ ಕ್ರಿಸ್ ಶ್ರೀಕಾಂತ್
ಗುರುವಾರ, ಅಕ್ಟೋಬರ್ 19ರಂದು ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡವು ಬಾಂಗ್ಲಾದೇಶವನ್ನು 7 ವಿಕೆಟ್‌ಗಳಿಂದ ಮಣಿಸಿ ಭರ್ಜರಿ ಗೆಲುವು ದಾಖಲಿಸಿತು.
ಇದೇ ವೇಳೆ ಮತ್ತೊಂದು ಏಕದಿನ ಶತಕವನ್ನು ಪೂರ್ಣಗೊಳಿಸುವ ಪ್ರಯತ್ನದಲ್ಲಿ 2023ರ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಭಾರತದ ಯಶಸ್ವಿ ಚೇಸಿಂಗ್‌ನ ಅಂತ್ಯದ ವೇಳೆಗೆ ಸಿಂಗಲ್ಸ್ ನಿರಾಕರಿಸುವ ವಿರಾಟ್ ಕೊಹ್ಲಿಯ ನಿರ್ಧಾರವು ಸಾಮಾಜಿಕ ಮಾಧ್ಯಮದಲ್ಲಿ ಭಿನ್ನಾಭಿಪ್ರಾಯಗಳನ್ನು ಹುಟ್ಟುಹಾಕಿದೆ.
ಇದು ಸರಿಯೋ ತಪ್ಪೋ, 41.3 ಓವರ್‌ಗಳಲ್ಲಿ ಕೊನೆಗೊಂಡ ಭಾರತದ ಯಶಸ್ವಿ ಗುರಿ ಬೆನ್ನಟ್ಟುವಿಕೆಯಲ್ಲಿ ಕೊನೆಯ 3 ಓವರ್‌ಗಳಲ್ಲಿ ವಿರಾಟ್ ಕೊಹ್ಲಿ 8 ಡಾಟ್ ಬಾಲ್‌ಗಳನ್ನು ಎದುರಿಸಿದರು.

ತಮ್ಮ ಬ್ಯಾಟಿಂಗ್ ಜೊತೆಗಾರ ಕೆಎಲ್ ರಾಹುಲ್ ಅವರೊಂದಿಗೆ ಚರ್ಚಿಸಿದ ನಂತರ, ವಿರಾಟ್ ಕೊಹ್ಲಿ ಸಿಂಗಲ್ಸ್ ಅನ್ನು ನಿರಾಕರಿಸಿದರು. ಅವರು ಕೊನೆಯ 20 ಎಸೆತಗಳಲ್ಲಿ 30 ರನ್ ಗಳಿಸಿ 73ರಿಂದ 103 ರನ್ ಗಳಿಸಿದರು ಮತ್ತು ತಮ್ಮ 48ನೇ ಏಕದಿನ ಶತಕವನ್ನು ಪೂರ್ಣಗೊಳಿಸಿದರು.
ಪುಣೆಯ ಮೈದಾನದಲ್ಲಿ ನೆರೆದಿದ್ದ ಸಾವಿರಾರು ಪ್ರೇಕ್ಷಕರು ವಿರಾಟ್ ಕೊಹ್ಲಿ ಶತಕ ಗಳಿಸುವುದನ್ನು ಇಷ್ಟಪಟ್ಟರು. ಆದರೆ ಸಾಮಾಜಿಕ ಮಾಧ್ಯಮದಲ್ಲಿ ಕ್ರಿಕೆಟ್ ಅಭಿಮಾನಿಗಳ ಒಂದು ಗುಂಪು ಪಂದ್ಯಕ್ಕೆ ಬರುವ ನೆಟ್ ರನ್-ರೇಟ್ ಲೆಕ್ಕಾಚಾರಗಳನ್ನು ಪರಿಗಣಿಸಿ, ಪಂದ್ಯವನ್ನು ಬೇಗ ಮುಗಿಸಲು ಪ್ರಯತ್ನಿಸದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ನಿರ್ಧಾರವನ್ನು ಪ್ರಶ್ನಿಸಿದ್ದಾರೆ.
ಎಂಸಿಎ ಸ್ಟೇಡಿಯಂನಲ್ಲಿ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ವಿಧಾನವನ್ನು ಅಭಿಮಾನಿಗಳು ಚರ್ಚಿಸುತ್ತಿದ್ದಂತೆ, ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ 'ಸೆಲ್ಫಿಶ್' ಟ್ರೆಂಡಿಂಗ್ ಆಗಿತ್ತು.
ಆದಾಗ್ಯೂ, ಭಾರತ ತಂಡದ ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್ ಅವರು ಶತಕ ಗಳಿಸಿದ ವಿರಾಟ್ ಕೊಹ್ಲಿಯನ್ನು ಟೀಕಿಸುವ ಕೆಲವು ನೆಟ್ಟಿಗರಿಂದ ಆಶ್ಚರ್ಯಚಕಿತರಾದರು ಮತ್ತು ಸ್ಟಾರ್ ಬ್ಯಾಟರ್‌ನ ವಿಧಾನದಲ್ಲಿ ಯಾವುದೇ ತಪ್ಪಿಲ್ಲ ಎಂದು ಒತ್ತಿ ಹೇಳಿದರು.

ಗಮನಾರ್ಹವಾಗಿ, ಭಾರತ ತಂಡ 7 ವಿಕೆಟ್‌ಗಳ ಗೆಲುವಿನ ನಂತರ ಸ್ಟಾರ್ ಸ್ಪೋರ್ಟ್ಸ್ ವೀಕ್ಷಕ ವಿವರಣೆಗಾರರೊಂದಿಗೆ ಮಾತನಾಡಿದ ಕೆಎಲ್ ರಾಹುಲ್, "ನಿಜ ಹೇಳಬೇಕೆಂದರೆ ವಿರಾಟ್ ಕೊಹ್ಲಿ ಬಹಳ ಗೊಂದಲದಲ್ಲಿದ್ದರು. ಸಿಂಗಲ್ಸ್ ತೆಗೆದುಕೊಳ್ಳದಿರುವುದು ಬಹಳ ತಪ್ಪಾಗಿ ಕಾಣಿಸುತ್ತದೆ. ಇದು ವಿಶ್ವಕಪ್ ಪಂದ್ಯದ ದೊಡ್ಡ ವೇದಿಕೆಯಾಗಿದೆ. ನಾನು ನನ್ನ ವೈಯಕ್ತಿಕ ಮೈಲಿಗಲ್ಲು ತಲುಪಲು ಹೀಗೆ ಮಾಡುತ್ತಿದ್ದೇನೆ ಎನಿಸಿಕೊಳ್ಳುತ್ತದೆ ಎಂದು ಹೇಳಿದ್ದರು".
"ಆದರೆ ಅದಕ್ಕೆ ನಾನು ಅವರಿಗೆ ನಾವು ಈ ಪಂದ್ಯದಲ್ಲಿ ಬಹಳ ಸುಲಭವಾಗಿ ಗೆಲುವು ಸಾಧಿಸುತ್ತೇವೆ. ನೀವು ಖಂಡಿತಾ ಶತಕಕ್ಕೆ ಪ್ರಯತ್ನಿಸಿ. ಅಂತಿಮವಾಗಿ ಅದನ್ನು ಅವರು ಸಾಧಿಸಿದರು," ಎಂದು ಕೆಎಲ್ ರಾಹುಲ್ ಸ್ಪಷ್ಟನೆ ನೀಡಿದರು.
ಕೊನೆಯ 3-4 ಓವರ್‌ಗಳಲ್ಲಿ ನಾನೇ ಸಿಂಗಲ್ಸ್ ಅನ್ನು ನಿರಾಕರಿಸುವ ಮೂಲಕ ವಿರಾಟ್ ಕೊಹ್ಲಿಗೆ ಸ್ಟ್ರೈಕ್ ನೀಡಲು ಒತ್ತಾಯಿಸಿದೆ ಎಂದು ಕೆಎಲ್ ರಾಹುಲ್ ದೃಢಪಡಿಸಿದರು.
ಅಂತಿಮವಾಗಿ ಭಾರತವು ಸುಲಭ ಗೆಲುವು ಸಾಧಿಸಿತು. ಇದು ವಿಶ್ವಕಪ್ 2023ರ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಉಳಿಸಿಕೊಳ್ಳಲು ಸಹಾಯ ಮಾಡಿತು. ಭಾರತ ತಂಡ ತನ್ನ ಮುಂದಿನ ಪಂದ್ಯದಲ್ಲಿ ಭಾನುವಾರ, ಅಕ್ಟೋಬರ್ 22ರಂದು ಅಜೇಯ ನ್ಯೂಜಿಲೆಂಡ್ ತಂಡವನ್ನು ಧರ್ಮಶಾಲಾದಲ್ಲಿ ಎದುರಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications