For Quick Alerts
ALLOW NOTIFICATIONS  
For Daily Alerts
 

World Cup 2023: ಆಸ್ಟ್ರೇಲಿಯಾ ತಂಡಕ್ಕೆ ಡಬಲ್ ಶಾಕ್; ವಿಶ್ವಕಪ್‌ನಿಂದ ಇಬ್ಬರು ಆಟಗಾರರು ಔಟ್!

ಭಾರತದಲ್ಲಿ ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ನಡೆಯುವ 2023ರ ಐಸಿಸಿ ಪುರುಷರ ಏಕದಿನ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಗೆ ಆರಂಭಕ್ಕೆ ದಿನಗಣನೆ ಶುರುವಾಗಿದೆ.

ಸೆಪ್ಟೆಂಬರ್ 29ರಿಂದ ಅಭ್ಯಾಸ ಪಂದ್ಯಗಳು ನಡೆಯಲಿದ್ದು, ಭಾರತದಲ್ಲಿ ಒಂದೂವರೆ ತಿಂಗಳ ಕಾಲ ಐಸಿಸಿ ಕ್ರಿಕೆಟ್ ಹಬ್ಬದಲ್ಲಿ ವಿಶ್ವದ ಪ್ರಮುಖ ಹತ್ತು ತಂಡಗಳು ಭಾಗವಹಿಸಲಿವೆ. ಈಗಾಗಲೇ ನೆದರ್ಲ್ಯಾಂಡ್ಸ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ತಂಡಗಳು ಭಾರತಕ್ಕೆ ಬಂದಿಳಿದಿವೆ.

World Cup 2023: Huge Setback For Australia Team; Two Players Ruled Out of The World Cup Squad


ಇದೇ ವೇಳೆ ವಿಶ್ವಕಪ್ ಪಂದ್ಯಾವಳಿಗೂ ಮುನ್ನ ಐದು ಬಾರಿಯ ಏಕದಿನ ವಿಶ್ವಕಪ್ ಚಾಂಪಿಯನ್ ಆಸ್ಟ್ರೇಲಿಯಾ ತಂಡಕ್ಕೆ ಭಾರೀ ಹಿನ್ನಡೆಯಾಗಿದೆ. ಸ್ಟಾರ್ ಬ್ಯಾಟರ್ ಟ್ರಾವಿಸ್ ಹೆಡ್ ಮತ್ತು ಆಲ್‌ರೌಂಡರ್ ಆಶ್ಟನ್ ಅಗರ್ ಅವರು ಮುಂಬರುವ ಏಕದಿನ ವಿಶ್ವಕಪ್ ತಂಡದಿಂದ ಹೊರಬೀಳಲಿದ್ದಾರೆ.

ಟ್ರಾವಿಸ್ ಹೆಡ್ ಕೈ ಮುರಿತಕ್ಕೆ ಒಳಗಾಗಿದ್ದರೆ, ಎಡಗೈ ಸ್ಪಿನ್ನರ್ ಆಶ್ಟನ್ ಅಗರ್ ಕಾಲಿನ ಕರು ಗಾಯದಿಂದ ಬಳಲುತ್ತಿದ್ದಾರೆ. ಆಸ್ಟ್ರೇಲಿಯಾದ "ದಿ ಡೈಲಿ ಟೆಲಿಗ್ರಾಫ್' ಪತ್ರಿಕೆಯ ಪ್ರಕಾರ, ದಕ್ಷಿಣ ಆಫ್ರಿಕಾ ವಿರುದ್ಧದ ಇತ್ತೀಚಿನ ಟಿ20 ಸರಣಿಯ ವೇಳೆ ಆದ ಗಾಯದಿಂದ ಆಶ್ಟನ್ ಅಗರ್ ಚೇತರಿಸಿಕೊಂಡಿಲ್ಲ.

ಆಲ್‌ರೌಂಡರ್ ತನ್ನ ಮೊದಲ ಮಗುವಿನ ಜನನಕ್ಕಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಒಂದು ಪಂದ್ಯದ ನಂತರ ತವರಿಗೆ ಹಿಂದಿರುಗಿದ್ದರು. ಆಮೇಲೆ ಭಾರತ ವಿರುದ್ಧದ ಏಕದಿನ ಸರಣಿಯನ್ನು ಕಳೆದುಕೊಂಡರು.

World Cup 2023: Huge Setback For Australia Team; Two Players Ruled Out of The World Cup Squad

ಆದಾಗ್ಯೂ, ಎಡಗೈ ಸ್ಪಿನ್ನರ್ ಆಶ್ಟನ್ ಅಗರ್ ಭಾರತದಲ್ಲಿರುವ ಆಸ್ಟ್ರೇಲಿಯಾ ತಂಡವನ್ನು ಸೇರುವ ಸಾಧ್ಯತೆ ಇಲ್ಲ. ಮಾರ್ನಸ್ ಲ್ಯಾಬುಸ್ಚಾಗ್ನೆ ಮತ್ತು ಮ್ಯಾಥ್ಯೂ ಶಾರ್ಟ್ ಅವರೊಂದಿಗೆ ತನ್ವೀರ್ ಸಂಘವನ್ನು ಅವರ ಸಂಭಾವ್ಯ ಬದಲಿ ಆಯ್ಕೆಗಳಾಗಿದ್ದಾರೆ.

ಐಸಿಸಿ ಗಡುವಿನ ದಿನವಾದ ಗುರುವಾರ, ಸೆಪ್ಟೆಂಬರ್ 28ರ ಮಧ್ಯಾಹ್ನ ಆಸ್ಟ್ರೇಲಿಯಾ ತನ್ನ ಅಂತಿಮ 15 ಆಟಗಾರರ ವಿಶ್ವಕಪ್ ತಂಡವನ್ನು ಪ್ರಕಟಿಸುವ ನಿರೀಕ್ಷೆಯಿದೆ.

ಆಸ್ಟ್ರೇಲಿಯಾ ತಂಡದ ರಾಷ್ಟ್ರೀಯ ಆಯ್ಕೆಗಾರರು ವಿಶ್ವಕಪ್‌ನ ಮೊದಲ ಲೆಗ್‌ಗೆ ಗಾಯಗೊಂಡಿರುವ ಟ್ರಾವಿಸ್ ಹೆಡ್ ಅನ್ನು ಕರೆದುಕೊಂಡು ಹೋಗಬೇಕೆ ಎಂಬ ಸಂದಿಗ್ಧತೆಯನ್ನು ಎದುರಿಸುತ್ತಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕನೇ ಏಕದಿನ ಸಂದರ್ಭದಲ್ಲಿ ಕೈ ಮುರಿತಕ್ಕೆ ಒಳಗಾದ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್, ಅಕ್ಟೋಬರ್ ಅಂತ್ಯದವರೆಗೆ ಚೇತರಿಸಿಕೊಳ್ಳುವ ನಿರೀಕ್ಷೆಯಿಲ್ಲ ಎನ್ನಲಾಗಿದೆ.

ಆಯ್ಕೆಗಾರರು ವಿಶ್ವಕಪ್‌ಗೆ ಅಂತಿಮಗೊಳಿಸಿದ 15 ಆಟಗಾರರ ತಂಡದಿಂದ ಟ್ರಾವಿಸ್ ಹೆಡ್ ಅವರನ್ನು ಹೊರಹಾಕಲು ನಿರ್ಧರಿಸಿದರೆ, ಬೇರೊಂದು ಗಾಯಾಳು ಹೊರತು ಅವರನ್ನು ಮರಳಿ ತಂಡಕ್ಕೆ ಸೇರಿಸಲಾಗುವುದಿಲ್ಲ.

ಒಂದು ವೇಳೆ, ಟ್ರಾವಿಸ್ ಹೆಡ್ ಚೇತರಿಸಿಕೊಳ್ಳುವವರೆಗೂ ಅವರನ್ನು ತಂಡದಲ್ಲಿ ಇರಿಸಿಕೊಳ್ಳಲು ನಿರ್ಧರಿಸಿದರೆ, ಹೆಡ್ ಅವರನ್ನು ಇನ್ನೊಬ್ಬ ಆಟಗಾರನೊಂದಿಗೆ ಬದಲಾಯಿಸಲಾಗುವುದಿಲ್ಲ.

ಆಸ್ಟ್ರೇಲಿಯಾ ತಂಡದ ವಿಶ್ವಕಪ್‌ನ ಆರಂಭಿಕ ಪಂದ್ಯವು ಭಾನುವಾರ, ಅಕ್ಟೋಬರ್ 8ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆತಿಥೇಯ ಭಾರತ ತಂಡದ ಸೆಣಸಾಡಲಿದೆ.

ರಾಜ್‌ಕೋಟ್‌ನಲ್ಲಿ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ತಂಡವು ಭಾರತ ತಂಡವನ್ನು ಸೋಲಿಸಿದರೂ, ಸರಣಿಯನ್ನು 1-2 ಅಂತರದಿಂದ ಕಳೆದುಕೊಂಡಿತು.

ಆಸ್ಟ್ರೇಲಿಯಾ ತಂಡ ಇದೀಗ ಏಕದಿನ ವಿಶ್ವಕಪ್‌ಗೆ ಮುನ್ನ ದಕ್ಷಿಣ ಆಫ್ರಿಕಾ ಮತ್ತು ಭಾರತದ ವಿರುದ್ಧ ಏಕದಿನ ಸರಣಿಯನ್ನು ಸೋತಿದೆ ಎಂಬುದು ಗಮನಾರ್ಹ.

"ನಾನು ಮಧ್ಯಾಹ್ನಕ್ಕಿಂತ ರಾತ್ರಿಯಲ್ಲಿ ಬೌಲ್ ಮಾಡಲು ಬಹಳ ಸಂತೋಷಪಡುತ್ತೇನೆ. ಗ್ಲೆನ್ ಮ್ಯಾಕ್ಸ್‌ವೆಲ್ 4 ವಿಕೆಟ್ ಪಡೆದು ಮತ್ತು ಮಿಚೆಲ್ ಸ್ಟಾರ್ಕ್ ಉತ್ತಮ ಲಯದಲ್ಲಿ ಕಾಣುತ್ತಿದ್ದರು. ಪಂದ್ಯಾವಳಿಯ ಆರಂಭಕ್ಕೆ ಟ್ರಾವಿಸ್ ಹೆಡ್ ಫಿಟ್ ಆಗುವುದಿಲ್ಲ. ಆಶ್ಟನ್ ಅಗರ್ ಕಾಲಿನ ಕರುವಿನ ಗಾಯದಿಂದ ತವರಿಗೆ ಮರಳಿದ್ದಾರೆ ಮತ್ತು ಮುಂದಿನ ಎರಡು ವಾರಗಳವರೆಗೆ ಟ್ರಾವಿಸ್ ಹೆಡ್ ಫಿಟ್ ಆಗಿರುವುದಿಲ್ಲ. ನಾವು ಪೂರ್ಣ ಸಾಮರ್ಥ್ಯದ ತಂಡವನ್ನು ಹೊಂದಿರುವ ಮೊದಲ ತಂಡ ಆಗಿರುವುದರಿಂದ ಸಂತೋಷವಾಗಿದೆ," ಎಂದು ಪ್ಯಾಟ್ ಕಮ್ಮಿನ್ಸ್ ತಿಳಿಸಿದರು.

Story first published: Thursday, September 28, 2023, 14:53 [IST]
Other articles published on Sep 28, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+