For Quick Alerts
ALLOW NOTIFICATIONS  
For Daily Alerts
 

World Cup 2023: 1,20,000 ಅಡಿ ಎತ್ತರದಲ್ಲಿ ಅನಾವರಣಗೊಂಡ ಏಕದಿನ ವಿಶ್ವಕಪ್ ಟ್ರೋಫಿ!

ಏಕದಿನ ವಿಶ್ವಕಪ್‌ನ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪ್ರತಿ ಸರಣಿ, ಪ್ರತಿ ಪ್ರವಾಸ ಕೂಡ ಇನ್ನು ಈ ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡೇ ನಡೆಸಲಾಗುತ್ತದೆ. ಪ್ರತಿ ತಂಡಗಳು ಕೂಡ ಭಾರತದಲ್ಲಿ ನಡೆಯಲಿರುವ ಈ ಬಾರಿಯ ವಿಶ್ವಕಪ್‌ನಲ್ಲಿ ಗೆಲುವು ಸಾಧಿಸುವ ಗುರಿಯಿಟ್ಟುಕೊಂಡು ವಿಶೇಷ ರಣತಂತ್ರಗಳನ್ನು ಹೆಣೆಯುತ್ತಿದೆ. ಇನ್ನು ಈ ಬಾರಿಯ ವಿಶ್ವಕಪ್ ಟೂರ್ನಿಯ ಹಿನ್ನೆಲೆಯಲ್ಲಿ ಟ್ರೋಫಿಯನ್ನು ಅತ್ಯಂತ ವಿಶೇಷವಾಗಿ ಆಗಸದಿಂದ ಅನಾವರಣಗೊಳಿಸಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜೈ ಶಾ ಮಾಹಿತಿ ನೀಡಿದ್ದಾರೆ.

ಈ ಟ್ರೋಫಿ ಇದೀಗ ಅಹ್ಮದಾಬಾದ್‌ನ ನರೇಂದ್ರ ಮೊದಿ ಕ್ರೀಡಾಂಗಣದಲ್ಲಿ ಇಳಿದಿದ್ದು ಅದಕ್ಕೂ ಆಗಸದಾಚೆ ಪ್ರಯಾಣಿಸಿದ್ದು ಬರೊಬ್ಬರಿ 1,20,000 ಅಡಿ ಎತ್ತರದಲ್ಲಿ ಅನಾವರಣಗೊಂಡಿದೆ. ಈ ಮೂಲಕ ಕ್ರೀಡಾಲೋಕದಲ್ಲಿ ವಿಶೇಷ ಸಾಧನೆಯೊಂದನ್ನು ಐಸಿಸಿ ಹಾಗೂ ಬಿಸಿಸಿಐ ಮಾಡಿದೆ. ಬೆಸ್ಪೋಕ್ ಸ್ಟ್ರಾಟೀಸ್ಪೆರಿಕ್ ಬಲೂನ್‌ನ ಸಹಾಯದಿಂದ ಆಗಸಕ್ಕೆ ತಲುಪಿದಲಾಗಿದ್ದು ಬಾಹ್ಯಾಕಾಶದ ಸನಿಹಕ್ಕೆ ತೆರಳಿ 4ಕೆ ಕ್ಯಾಮರಾಗಳನ್ನು ಬಳಸಿ ಟ್ರೋಫಿಯ ಕೆಲ ಅದ್ಭುತ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಈ ಮೂಲಕ ಕ್ರೀಡಾಲೋಕದ ಇತಿಹಾಸದಲ್ಲಿ ವಿಶೀಷ್ಟವಾಗಿ ಟ್ರೋಫಿಯನ್ನು ಅನಾವರಣಗೊಳಿಸಿದಂತಾಗಿದೆ.

World Cup 2023: ICC World cup Trophy Unveiled At 120,000 Feet Above Earth

ಏಕದಿನ ವಿಶ್ವಕಪ್ ಟ್ರೋಫಿ ಅನಾವರಣವಾಗಿದ್ದು ಭಾರತಕ್ಕೆ ಬಂದಿಳಿದಿದೆ. ಇನ್ನು ಈ ಟ್ರೋಫಿ ವಿಶ್ವಪರ್ಯಟನೆ ನಡೆಸಲಿದ್ದು ವಿಶ್ವಕಪ್ ವಿಶ್ವದ ಅನೇಕ ನಗರಗಳಿಗೆ ತೆರಳಲಿದೆ. ಕುವೈಟ್, ಬಹ್ರೈನ್, ಮಲೇಷ್ಯಾ, ಯುಎಸ್‌ಎ, ನೈಜೀರಿಯಾ, ಉಗಾಂಡಾ, ಫ್ರಾನ್ಸ್, ಇಟೆಲಿ, ಸೇರಿದಂತೆ ಒಟ್ಟು 18 ರಾಷ್ಟ್ರಗಳಿಗೆ ಪ್ರಯಾಣಿಸಲಿದೆ. ಈ ಮೂಲಕ ಅಲ್ಲಿನ ಅಭಿಮಾನಿಗಳಿಗೆ ವಿಶ್ವಕಪ್ ಟ್ರೋಫಿಯನ್ನು ವೀಕ್ಷಿಸುವ ಅವಕಾಶ ದೊರೆಯಲಿದೆ.

ಇನ್ನು ಈ ಬಾರಿಯ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಇನ್ನು ಕೂಡ ಬಿಡುಗಡೆಯಾಗಿಲ್ಲ. ವಿಶ್ವಕಪ್ ಆಯೋಜನೆಯ ತಾಣಗಳಲ್ಲಿ ಗೊಂದಲ ಇದ್ದ ಕಾರಣ ವೇಳಾಪಟ್ಟಿ ಬಿಡುಗಡೆಯಾಗುವುದು ತಡವಾಗಿದೆ. ಈಗಿನ ಮಾಹಿತಿಯ ಪ್ರಕಾರ ಜೂನ್ 27 ಮಂಗಳವಾರದಂದು ವಿಶ್ವಕಪ್ ವೇಳಾಪಟ್ಟಿ ಬಿಡುಗಡೆಯಾಗಲಿದೆ ಎನ್ನಲಾಗಿದೆ.

Story first published: Monday, June 26, 2023, 23:14 [IST]
Other articles published on Jun 26, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+