For Quick Alerts
ALLOW NOTIFICATIONS  
For Daily Alerts
 

World Cup 2023: ಇಂಗ್ಲೆಂಡ್‌ ವಿರುದ್ಧದ ಗೆಲುವಿನೊಂದಿಗೆ ಏಕದಿನ ವಿಶ್ವಕಪ್‌ನಲ್ಲಿ 2ನೇ ಯಶಸ್ವಿ ತಂಡವೆನಿಸಿದ ಭಾರತ!

ಭಾನುವಾರ, ಅಕ್ಟೋಬರ್ 29ರಂದು ಲಕ್ನೋ ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನ 29ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ 100 ರನ್‌ಗಳ ಅಮೋಘ ಗೆಲುವಿನೊಂದಿಗೆ ಭಾರತದ ವಿಶ್ವಕಪ್ ಅಭಿಯಾನವು ಉತ್ತಮವಾಗಿ ಮುಂದುವರೆದಿದೆ.

ಐಸಿಸಿ ವಿಶ್ವಕಪ್ ಟೂರ್ನಿಯ ಈ ಆವೃತ್ತಿಯಲ್ಲಿ ಇದು ಭಾರತ ತಂಡಕ್ಕೆ ಸತತ ಆರನೇ ಗೆಲುವಾಗಿದೆ. ಟೀಮ್ ಇಂಡಿಯಾ ಇನ್ನೂ ಒಂದು ಪಂದ್ಯವನ್ನು ಸೋತಿಲ್ಲ. 10 ತಂಡಗಳ 2023ರ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಿ ಮೊತ್ತವನ್ನು ರಕ್ಷಿಸಿಕೊಂಡಿರುವುದು ಇದೇ ಮೊದಲಾಗಿದೆ.

World Cup 2023: India Became The 2nd Successful Team in ODI World Cup With Win Against England

ಗಮನಾರ್ಹವಾಗಿ, ಇದು ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಭಾರತ ತಂಡದ 59ನೇ ಗೆಲುವಾಯಿತು. ಈ ಮೂಲಕ ಆಸ್ಟ್ರೇಲಿಯಾದ ನಂತರ ಏಕದಿನ ವಿಶ್ವಕಪ್‌ನಲ್ಲಿ ಎರಡನೇ ಅತ್ಯಂತ ಯಶಸ್ವಿ ತಂಡವೆನಿಸಿತು. 5 ಬಾರಿಯ ಚಾಂಪಿಯನ್ ಆಸೀಸ್ ತಂಡ 73 ವಿಶ್ವಕಪ್ ಪಂದ್ಯಗಳ ಗೆಲುವುಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಪ್ರತಿಷ್ಠಿತ ವಿಶ್ವಕಪ್ ಇತಿಹಾಸದಲ್ಲಿ ಭಾರತ ತಂಡ ಇದೀಗ ನ್ಯೂಜಿಲೆಂಡ್‌ನ 58 ವಿಶ್ವಕಪ್ ಪಂದ್ಯಗಳ ಗೆಲುವಿನ ಸಂಖ್ಯೆಯನ್ನು ಹಿಂದಿಕ್ಕಿದೆ. ಏಕದಿನ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ 50 ಗೆಲುವು ಸಾಧಿಸಿದ್ದರೆ, ಪಾಕಿಸ್ತಾನ 47, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಲಾ 43 ಪಂದ್ಯಗಳ ಗೆಲುವು ಸಾಧಿಸಿವೆ.

ಇದೇ ವೇಳೆ ಭಾರತ ತಂಡವು ಏಕದಿನ ವಿಶ್ವಕಪ್‌ನಲ್ಲಿ ಎರಡನೇ ಅತಿ ಹೆಚ್ಚು ಗೆಲುವಿನ ಶೇಕಡಾವಾರು ಹೊಂದಿದೆ. ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಟೀಮ್ ಇಂಡಿಯಾ ತಮ್ಮ ಶೇಕಡಾ 65.56ರಷ್ಟು ಪಂದ್ಯಗಳಲ್ಲಿ ಜಯಶಾಲಿಯಾಗಿದ್ದಾರೆ.

World Cup 2023: India Became The 2nd Successful Team in ODI World Cup With Win Against England

ಶೇ.73ರಷ್ಟು ಗೆಲುವಿನ ಶೇಕಡಾವಾರು ಜೊತೆ ಆಸ್ಟ್ರೇಲಿಯಾ ಇಲ್ಲಿಯೂ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ ತಂಡ 61.43ರಷ್ಟು ಗೆಲುವಿನ ಶೇಕಡಾವಾರಿನೊಂದಿಗೆ ಮೂರನೇ ಸ್ಥಾನದಲ್ಲಿದೆ.

ಇಂಗ್ಲೆಂಡ್ ವಿರುದ್ಧ ವಿಧ್ವಂಸಕ ದಾಳಿ ನಡೆಸಿದ ಭಾರತೀಯ ಬೌಲರ್‌ಗಳು

ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಅವರು ಭಾರತ ತಂಡವನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಇಂಗ್ಲೆಂಡ್ ಶಿಸ್ತುಬದ್ಧ ಬೌಲಿಂಗ್ ಪ್ರದರ್ಶನ ನೀಡಿತು ಮತ್ತು ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಅವರ ಆರಂಭಿಕ ವಿಕೆಟ್‌ಗಳನ್ನು ಪಡೆದರು.

ಆದಾಗ್ಯೂ, ನಾಯಕ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ನಾಲ್ಕನೇ ವಿಕೆಟ್‌ಗೆ 91 ರನ್‌ಗಳ ಜೊತೆಯಾಟದೊಂದಿಗೆ ತಂಡಕ್ಕೆ ಆಸರೆಯಾದರು.

ಒಂದು ತುದಿಯಿಂದ ವಿಕೆಟ್‌ಗಳು ಬೀಳುತ್ತಿದ್ದರೆ ಭಾರತೀಯ ನಾಯಕ ರೋಹಿತ್ ಶರ್ಮಾ ಅಬ್ಬರದಿಂದ ಬ್ಯಾಟಿಂಗ್ ಆರಂಭಿಸಿದರು. ಅಂತಿಮವಾಗಿ 101 ಎಸೆತಗಳಲ್ಲಿ 10 ಬೌಂಡರಿ ಮತ್ತು 3 ಸಿಕ್ಸರ್‌ಗಳ ಮೂಲಕ 87 ರನ್ ಗಳಿಸಿ ಔಟಾದರು.

ಕೆಎಲ್ ರಾಹುಲ್ ಕೂಡ 39 ರನ್‌ ಗಳಿಸಿ ನಿರ್ಗಮಿಸಿದರು. ಕೊನೆಯಲ್ಲಿ ಸೂರ್ಯಕುಮಾರ್ ಯಾದವ್ ಅವರು ಬಾಲಂಗೋಚಿಗಳ ಸಹಾಯದಿಂದ ಭಾರತ ತಂಡವನ್ನು 229 ರನ್‌ಗಳ ಮೊತ್ತಕ್ಕೆ ಮುನ್ನಡೆಸಿದರು.

ಪ್ರತ್ಯುತ್ತರವಾಗಿ, ಜಾನಿ ಬೈರ್‌ಸ್ಟೋವ್ ಮತ್ತು ಡೇವಿಡ್ ಮಲಾನ್ ಇಂಗ್ಲೆಂಡ್‌ ತಂಡಕ್ಕೆ ಸ್ಫೋಟಕ ಆರಂಭ ನೀಡಿದರು. ಜಸ್ಪ್ರೀತ್ ಬುಮ್ರಾ ಅವರು ಸತತ ಎರಡು ಎಸೆತಗಳಲ್ಲಿ ಡೇವಿಡ್ ಮಲಾನ್ ಮತ್ತು ಜೋ ರೂಟ್ ವಿಕೆಟ್ ಪಡೆದು ಆತಿಥೇಯ ತಂಡಕ್ಕೆ ಮೇಲುಗೈ ತಂದುಕೊಟ್ಟರು.

ಮೊಹಮ್ಮದ್ ಶಮಿ ಅವರು ನ್ಯೂಜಿಲೆಂಡ್ ವಿರುದ್ಧದ ಪ್ರದರ್ಶನವನ್ನು ಇಂಗ್ಲೆಂಡ್ ವಿರುದ್ಧವೂ ಮುಂದುವರೆಸಿದರು ಮತ್ತು ಮೊದಲ ಪವರ್‌ಪ್ಲೇನಲ್ಲಿ ಎರಡು ವಿಕೆಟ್‌ಗಳನ್ನು ಪಡೆದರು.

ಬಳಿಕ ಜೋಸ್ ಬಟ್ಲರ್ ಮತ್ತು ಮೊಯಿನ್ ಅಲಿ ದೊಡ್ಡ ಜೊತೆಯಾಟ ನಿರ್ಮಿಸಲು ಪ್ರಯತ್ನಿಸಿದರು. ಆದರೆ ಕುಲದೀಪ್ ಯಾದವ್ ಅವರು ಆಂಗ್ಲ ನಾಯಕನ ವಿಕೆಟ್ ಪಡೆಯುವ ಮೂಲಕ ಬ್ರೇಕ್ ಹಾಕಿದರು.

ಅಂತಿಮವಾಗಿ ಹಾಲಿ ಚಾಂಪಿಯನ್ ಇಂಗ್ಲೆಂಡ್ 100 ರನ್‌ಗಳ ಹೀನಾಯ ಸೋಲಿಗೆ ಶರಣಾಯಿತು. 2023ರ ಏಕದಿನ ವಿಶ್ವಕಪ್‌ನಲ್ಲಿ ಇದು ಅವರ ಐದನೇ ಸೋಲಾಗಿದೆ. ಭಾರತ ತಂಡ ಈ ಅಮೋಘ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಪುನಃ ಅಗ್ರಸ್ಥಾನ ಪಡೆದುಕೊಂಡಿದೆ.

Story first published: Monday, October 30, 2023, 10:43 [IST]
Other articles published on Oct 30, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+