2023ರ ವಿಶ್ವಕಪ್ ಕೊನೆಯ ಹಂತಕ್ಕೆ ಬಂದು ನಿಂತಿದೆ. ಈ ಟೂರ್ನಿಯಲ್ಲಿ ಭಾರತದ ಆಟಗಾರರು ತವರಿನ ಪಿಚ್ ನ ಲಾಭ ಪಡೆದು ಅಭಿಮಾನಿಗಳು ಮುಂದೆ ಅಬ್ಬರಿಸಿದ್ದಾರೆ. ಅಲ್ಲದೆ ಹಲವು ಸ್ಮರಣೀಯ ಪಂದ್ಯಗಳನ್ನು ಆಡಿದ್ದಾರೆ. ಭಾನುವಾರ ವಿಶ್ವಕಪ್ ಫೈನಲ್ ನಡೆಯಲಿದ್ದು, ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿ ಯಾರಿಗೆ ಲಭಿಸುತ್ತದೆ ಎಂಬ ಚರ್ಚೆಗಳು ಆರಂಭವಾಗಿವೆ.
2023 ರ ವಿಶ್ವಕಪ್ನಲ್ಲಿ 'ಪ್ಲೇಯರ್ ಆಫ್ ದಿ ಟೂರ್ನಮೆಂಟ್' ಪ್ರಶಸ್ತಿಯ ರೇಸ್ ನಲ್ಲಿ ವಿರಾಟ್ ಕೊಹ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ವಿಶ್ವಕಪ್ನಲ್ಲಿ ಅವರು 100ಕ್ಕೂ ಹೆಚ್ಚು ಸರಾಸರಿಯಲ್ಲಿ 711 ರನ್ ಗಳಿಸಿದ್ದಾರೆ. ವಿಶ್ವಕಪ್ ಇತಿಹಾಸದಲ್ಲಿ ಆಟಗಾರನೊಬ್ಬ ವಿಶ್ವಕಪ್ನಲ್ಲಿ 700ರ ಗಡಿ ದಾಟಿದ್ದು ಇದೇ ಮೊದಲು. ವಿರಾಟ್ 10 ಇನ್ನಿಂಗ್ಸ್‌ಗಳಲ್ಲಿ ಮೂರು ಶತಕ ಮತ್ತು ಐದು ಅರ್ಧಶತಕಗಳನ್ನು ಗಳಿಸಿದ್ದಾರೆ.

ಈ ರೇಸ್‌ನಲ್ಲಿ ವಿರಾಟ್ ಗೆ ಭರ್ಜರಿ ಪೈಪೋಟಿ ನೀಡುತ್ತಿರುವ ಆಟಗಾರ ಮೊಹಮ್ಮದ್ ಶಮಿ. ಭಾರತದ ವೇಗದ ಬೌಲರ್ 2023 ರ ವಿಶ್ವಕಪ್‌ನಲ್ಲಿ ಕೇವಲ 6 ಪಂದ್ಯಗಳನ್ನು ಆಡಿದ್ದಾರೆ. ಮತ್ತು ಪ್ರಸ್ತುತ ಅವರು ಹೆಚ್ಚು ವಿಕೆಟ್ ಪಡೆದ ಬೌಲರ್ಗಳಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಶಮಿ ಇದುವರೆಗೆ 23 ವಿಕೆಟ್ ಪಡೆದಿದ್ದಾರೆ. ಬೌಲಿಂಗ್ ಸರಾಸರಿ ಮತ್ತು ಬೌಲಿಂಗ್ ಸ್ಟ್ರೈಕ್ ರೇಟ್‌ನಲ್ಲೂ ಅವರು ನಂಬರ್-1 ಆಗಿದ್ದಾರೆ. ಶಮಿ ಅವರ ಬೌಲಿಂಗ್ ಸರಾಸರಿ 10 ಕ್ಕಿಂತ ಕಡಿಮೆ ಮತ್ತು ಅವರು ಪ್ರತಿ 11 ನೇ ಎಸೆತದಲ್ಲಿ ವಿಕೆಟ್ ಪಡೆಯುತ್ತಿದ್ದಾರೆ. ಅಲ್ಲದೆ, ಈ ವಿಶ್ವಕಪ್ನ 6 ಪಂದ್ಯಗಳಲ್ಲಿ ಅವರು ಮೂರು ಬಾರಿ 'ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.
ಈ ರೇಸ್‌ನಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ಕೂಡ ಇದ್ದಾರೆ. ಈ ವಿಶ್ವಕಪ್‌ನಲ್ಲಿ ರೋಹಿತ್ ಅತಿ ಹೆಚ್ಚು ರನ್ ಗಳಿಸಿದ ಐದನೇ ಸ್ಥಾನದಲ್ಲಿದ್ದಾರೆ. 10 ಪಂದ್ಯಗಳಲ್ಲಿ 550 ರನ್ ಗಳಿಸಿದ್ದಾರೆ. ಅವರು ಖಂಡಿತವಾಗಿಯೂ ಕೊಹ್ಲಿಗಿಂತ 161 ರನ್ ಹಿಂದಿದ್ದಾರೆ ಆದರೆ ರೋಹಿತ್ ಅವರ ಸ್ಟ್ರೈಕ್ ರೇಟ್ 124.15 ಆಗಿದೆ. ಅವರ ಸ್ಫೋಟಕ ಬ್ಯಾಟಿಂಗ್‌ನಿಂದಾಗಿ ಭಾರತ ತಂಡ ಪ್ರತಿಯೊಂದು ಪಂದ್ಯದಲ್ಲೂ ಉತ್ತಮ ಆರಂಭವನ್ನು ಪಡೆಯಡಲು ಸಾಧ್ಯವಾಗಿದೆ. ಅವರ ಇನ್ನಿಂಗ್ಸ್ ತಂಡದ ವೇಗವನ್ನು ನಿರ್ಧರಿಸಿದೆ. ಇಂತಹ ಪರಿಸ್ಥಿತಿಯಲ್ಲಿ ರೋಹಿತ್‌ಗೆ 'ಪ್ಲೇಯರ್ ಆಫ್ ದಿ ಟೂರ್ನಮೆಂಟ್' ಪ್ರಶಸ್ತಿಯೂ ಸಿಗಬಹುದು.
ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಸ್ಪಿನ್ನರ್ ಆಡಮ್ ಝಂಪಾ ಕೂಡ ಸೇರಿದ್ದಾರೆ. ಈ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಜಾಂಪಾ. ಅವರು 5.47 ರ ಬೌಲಿಂಗ್ ಸರಾಸರಿಯಲ್ಲಿ 22 ವಿಕೆಟ್ ಪಡೆದಿದ್ದಾರೆ. ಅಹಮದಾಬಾದ್ ನಲ್ಲಿ ನಡೆಯಲಿರುವ ಫೈನಲ್ ನಲ್ಲಿ ಸ್ಪಿನ್ ಟ್ರ್ಯಾಕ್ ಇರಬಹುದು. ಅಂತಹ ಪರಿಸ್ಥಿತಿಯಲ್ಲಿ, ಜಂಪಾ ಅಬ್ಬರಿಸಬಹುದು. ಇದೇ ಕಾರಣಕ್ಕೆ ಅವರು ಈ ಲೀಸ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಆಸ್ಟ್ರೇಲಿಯಾದ ಬ್ಯಾಟರ್ ಡೇವಿಡ್ ವಾರ್ನರ್ ಕೂಡ ಈ ರೇಸ್‌ನಲ್ಲಿದ್ದಾರೆ. ಇದುವರೆಗೆ 10 ಪಂದ್ಯಗಳಲ್ಲಿ ವಾರ್ನರ್ 528 ರನ್ ಗಳಿಸಿದ್ದಾರೆ. ಅವರು 52.80 ಸರಾಸರಿಯಲ್ಲಿ ಮತ್ತು 107.53 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಆಸ್ಟ್ರೇಲಿಯಾದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ರೋಹಿತ್ ಅವರಂತೆ ವಾರ್ನರ್ ಕೂಡ ಕಾಂಗರೂ ತಂಡಕ್ಕೆ ಆರಂಭಿಕ ವೇಗವನ್ನು ಒದಗಿಸುತ್ತಿದ್ದಾರೆ.