World cup: ರೀಸ್ ಟೋಪ್ಲಿ ಗಾಯಗೊಂಡು ಟೂರ್ನಿಯಿಂದ ಔಟ್: ಜೋಫ್ರಾ ಆರ್ಚರ್ ಕನಸು ಮತ್ತೊಮ್ಮೆ ಭಗ್ನ
ಈ ಬಾರಿಯ ವಿಶ್ವಕಪ್ ಟೂರ್ನಿಗೆ ಹಾಲಿ ಚಾಂಪಿಯನ್ ತಂಡವಾಗಿ ಕಣಕ್ಕಿಳಿದಿರುವ ಇಂಗ್ಲೆಂಡ್ ತಂಡ ಈವರೆಗೆ ಹೀನಾಯ ಪ್ರದರ್ಶನ ನೀಡಿದೆ. ಈವರೆಗೆ ಆಡಿರುವ ನಾಲ್ಕು ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡ ಕೇವಲ ಒಂದು ಗೆಲುವು ಮಾತ್ರವೇ ಸಾಧಿಸಿದ್ದು ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಈ ಸಂದರ್ಭದಲ್ಲಿ ಇಂಗ್ಲೆಂಡ್ ತಂಡಕ್ಕೆ ಗಾಯದ ಆಘಾತ ಎದುರಾಗಿದೆ.
ತಂಡದ ವೇಗದ ಬೌಲರ್ ರೀಸ್ ಟೋಪ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಕೈಬೆರಳಿದ ಗಾಯಕ್ಕೆ ತುತ್ತಾಗಿದ್ದಾರೆ. ಹೀಗಾಗಿ ವಿಶ್ವಕಪ್ ಟೂರ್ನಿಯ ಉಳಿದ ಪಂದ್ಯಗಳಿಗೆ ರೀಸ್ ಟೋಪ್ಲಿ ಅಲಭ್ತವಾಗುವುದು ದೃಢಪಟ್ಟಿದೆ. ಇದೀಗ ರೀಸ್ ಟೋಪ್ಲಿ ಬದಲಿಗೆ ಮತ್ತೋರ್ವ ವೇಗದ ಬೌಲರ್‌ಗೆ ತಂಡದಲ್ಲಿ ಅವಕಾಶ ದೊರೆತಿದೆ.

ಆದರೆ ಇಂಗ್ಲೆಂಡ್ ತಂಡದ ಸ್ಟಾರ್ ವೇಗಿಯಾಗಿ ಗುರುತಿಸಿಕೊಂಡು ಗಾಯದ ಸಮಸ್ಯೆಯಿಂದಾಗಿ ಸುದೀರ್ಘ ಕಾಲದಿಂದ ತಂಡದಿಂದ ಹೊರಗುಳಿದಿದ್ದು ಪ್ರಸ್ತುತ ಮೀಸಲು ಆಟಗಾರನಾಗಿ ಹೆಸರಿಸಲ್ಪಟ್ಟಿರುವ ಜೋಫ್ರಾ ಆರ್ಚರ್‌ಗೆ ಈ ಸಂದರ್ಭದಲ್ಲಿಯೂ ನಿರಾಸೆಯಾಗಿದೆ. ರೀಸ್ ಟೋಪ್ಲಿ ಬದಲಿಗೆ ಜೋಫ್ರಾ ಆರ್ಚರ್‌ಗೆ ಅವಕಾಶ ದೊರೆಯದೆ ಬೈಡನ್ ಕೇರ್ಸ್‌ಗೆ ಅವಕಾಶ ದೊರೆತಿದೆ.
ವಿಶ್ವಕಪ್ 2023ರಲ್ಲಿ ತಮ್ಮ ಮೊದಲ 4 ಪಂದ್ಯಗಳಲ್ಲಿ 3 ರಲ್ಲಿ ಸೋಲು ಕಂಡಿರುವ ಇಂಗ್ಲೆಂಡ್ ತಂಡಕ್ಕೆ ತಮ್ಮ ಅಭಿಯಾನದಲ್ಲಿ ಕಮ್‌ಬ್ಯಾಕ್ ಮಾಡಲು ಈಗ ವಿಶೇಷ ಶಕ್ತಿಯ ಅಗತ್ಯವಿದೆ. ಅಲ್ಲದೆ ಇಂಗ್ಲೆಂಡ್ ತಂಡ ತನ್ನ ಮುಂದಿನ ಪಂದ್ಯದಲ್ಲಿ ಭಾರತ ತಂಡವನ್ನು ಎದುರಿಸಲಿದ್ದು ಲಕ್ನೋದಲ್ಲಿ ಈ ಪಂದ್ಯ ಆಯೋಜನೆಯಾಗಲಿದೆ.
ಬ್ರೈಡನ್ ಕಾರ್ಸ್ ಇಂಗ್ಲೆಂಡ್ ಪರ 12 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 2021ರಲ್ಲಿ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ 28ರ ಹರೆಯದ ವೇಗಿ 14 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು ಸೆಪ್ಟೆಂಬರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ 4-ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಿದ್ದರು ಮತ್ತು ಐರ್ಲೆಂಡ್ ವಿರುದ್ಧ 2 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಆ ಸಂದರ್ಭದಲ್ಲಿ ಇಂಗ್ಲೆಂಡ್ ಎರಡನೇ ಸ್ಟ್ರಿಂಗ್ ತಂಡವನ್ನು ಕಣಕ್ಕಿಳಿಸಿತು.
ಇಂಗ್ಲೆಂಡ್ ಸ್ಕ್ವಾಡ್: ಜಾನಿ ಬೈರ್‌ಸ್ಟೋವ್, ಡೇವಿಡ್ ಮಲನ್, ಜೋ ರೂಟ್, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್ (c & wk), ಡೇವಿಡ್ ವಿಲ್ಲಿ, ಆದಿಲ್ ರಶೀದ್, ಗಸ್ ಅಟ್ಕಿನ್ಸನ್, ಮಾರ್ಕ್ ವುಡ್, ಮೊಯಿನ್ ಅಲಿ, ಕ್ರಿಸ್ ವೋಕ್ಸ್, ಬ್ರೈಡನ್ ಕಾರ್ಸೆ, ಸ್ಯಾಮ್ ಕರ್ರಾನ್, ಲಿಯಾಮ್ ಲಿವಿಂಗ್ಸ್ಟೋನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications