World Cup 2023: ವಿಶ್ವಕಪ್‌ನ 4 ಸೆಮಿಫೈನಲಿಸ್ಟ್‌ಗಳ ಜೊತೆಗೆ 2 ಫೈನಲಿಸ್ಟ್‌ಗಳನ್ನು ಆಯ್ಕೆ ಮಾಡಿದ ಜೇಮ್ಸ್ ಆಂಡರ್ಸನ್
ಭಾರತದಲ್ಲಿ 2023ರ ಐಸಿಸಿ ಏಕದಿನ ವಿಶ್ವಕಪ್ ಅದ್ಭುತವಾಗಿ ಆರಂಭಗೊಂಡಿದ್ದು, ಚೆನ್ನಾಗಿ ನಡೆಯುತ್ತಿದೆ. ವಿಶ್ವದ ಹತ್ತು ಬಲಿಷ್ಠ ತಂಡಗಳು ಪಂದ್ಯಾವಳಿಯಲ್ಲಿ ಭಾಗಿಯಾಗಿವೆ.
ಇದೀಗ ಹಲವು ಅಭಿಮಾನಿಗಳು ಮತ್ತು ಕೆಲವು ಕ್ರಿಕೆಟ್ ಪಂಡಿತರು ಈಗಾಗಲೇ ತಮ್ಮ ನೆಚ್ಚಿನ ನಾಲ್ಕು ತಂಡಗಳನ್ನು ಸೆಮಿಫೈನಲಿಸ್ಟ್‌ಗಳೆಂದು ಭವಿಷ್ಯ ನುಡಿಯುತ್ತಿದ್ದಾರೆ.

ಮಾಜಿ ಕ್ರಿಕೆಟಿಗರಾದ ಸುನಿಲ್ ಗವಾಸ್ಕರ್, ಇರ್ಫಾನ ಪಠಾಣ್, ವಕಾರ್ ಯೂನಿಸ್, ಡೇಲ್ ಸ್ಟೇಯ್ನ್, ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವು ಲೆಜೆಂಡ್‌ಗಳು 2023ರ ವಿಶ್ವಕಪ್‌ನ ಸೆಮಿಫೈನಲ್ ಹಂತಕ್ಕೆ ನಾಲ್ಕು ತಂಡಗಳನ್ನು ಹೆಸರಿಸಿದ್ದಾರೆ.
ಇದೀಗ ಇಂಗ್ಲೆಂಡ್‌ನ ಅನುಭವಿ ವೇಗಿ ಜೇಮ್ಸ್ ಆಂಡರ್ಸನ್ ಕೂಡ ಆ ಪಟ್ಟಿಗೆ ಸೇರಿಕೊಂಡರು ಮತ್ತು ಅವರು ಪಂದ್ಯಾವಳಿಯಲ್ಲಿ ಸೆಮಿಫೈನಲ್ ಹಂತಕ್ಕೆ ನಾಲ್ಕು ತಂಡಗಳನ್ನು ಹೆಸರಿಸುವುದರ ಜೊತೆಗೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಫೈನಲ್‌ನಲ್ಲಿ ಯಾರು ಮುಖಾಮುಖಿಯಾಗಲಿದ್ದಾರೆ ಎನ್ನುವುದನ್ನ ಭವಿಷ್ಯ ನುಡಿದಿದ್ದಾರೆ.
ಜೇಮ್ಸ್ ಆಂಡರ್ಸನ್ ಅವರು ಹಾಲಿ ಚಾಂಪಿಯನ್ ಇಂಗ್ಲೆಂಡ್, ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ, ಆತಿಥೇಯ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳನ್ನು ಹೆಸರಿಸಿದ್ದಾರೆ ಮತ್ತು ಇಂಗ್ಲೆಂಡ್ ತಂಡವು ಭಾರತವನ್ನು ರೋಚಕ ಫೈನಲ್ ಹಣಾಹಣಿಯಲ್ಲಿ ಸೋಲಿಸುತ್ತದೆ ಎಂದು ಹೇಳಿದರು.

"ಸೆಮಿಫೈನಲಿಸ್ಟ್‌ಗಳಾ ಇಂಗ್ಲೆಂಡ್, ಭಾರತ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಪರಿಗಣಿಸುತ್ತೇನೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡ ಹೇಗೆ ಸೋಲಿಸಿದೆ ಎಂಬುದನ್ನು ನಾನು ಇಷ್ಟಪಡುತ್ತೇನೆ".
"ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ಬಲವಾಗಿದೆ ಮತ್ತು ಬೌಲಿಂಗ್‌ನಲ್ಲಿ ಅವರಿಗೆ ಉತ್ತಮ ಆಯ್ಕೆಗಳಿವೆ. ನ್ಯೂಜಿಲೆಂಡ್‌ನಂತೆ ಪಾಕಿಸ್ತಾನ ತಂಡವು ಹತ್ತಿರದಲ್ಲಿದೆ, ಆದರೆ ಇಬ್ಬರೂ ಸೆಮಿಫೈನಲ್ ತಪ್ಪಿಸಿಕೊಳ್ಳುತ್ತಾರೆ. ರೋಚಕ ಫೈನಲ್‌ನಲ್ಲಿ ಇಂಗ್ಲೆಂಡ್ ತಂಡವು ಭಾರತವನ್ನು ಸೋಲಿಸುವುದನ್ನು ನಾನು ಎದುರು ನೋಡುತ್ತೇನೆ," ಎಂದು ಹಿರಿಯ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಬಿಬಿಸಿಗೆ ತಿಳಿಸಿದರು.
ಇಂಗ್ಲೆಂಡ್ ತನ್ನ ಆರಂಭಿಕ ಸೋಲಿನಿಂದ ಹೊರಬರಲು ನೋಡುತ್ತಿದೆ
ಇಲ್ಲಿಯವರೆಗೆ ಇಂಗ್ಲೆಂಡ್‌ನ ವಿಶ್ವಕಪ್ ಅಭಿಯಾನದ ಕುರಿತು ಮಾತನಾಡುವುದಾದರೆ, ಅಕ್ಟೋಬರ್ 5ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ಟಾಮ್ ಲ್ಯಾಥಮ್ ನಾಯಕತ್ವದ ನ್ಯೂಜಿಲೆಂಡ್ ವಿರುದ್ಧ ಹಾಲಿ ಚಾಂಪಿಯನ್ ಇಂಗ್ಲೆಂಡ್ ಸೋಲು ಅನುಭವಿಸಿತು ಎಂದರು.
ಅಷ್ಟೇನೂ ಉತ್ತಮ ಪ್ರದರ್ಶನ ನೀಡದ ಇಂಗ್ಲೆಂಡ್ ತಂಡ ಜೋ ರೂಟ್ ಮತ್ತು ಜೋಸ್ ಬಟ್ಲರ್ ಅವರ ಆಟದ ನೆರವಿನಿಂದ ಸ್ಕೋರ್ ಬೋರ್ಡ್‌ನಲ್ಲಿ 282 ರನ್ ಗಳಿಸಲು ಯಶಸ್ವಿಯಾಯಿತು.
ಆದಾಗ್ಯೂ, ನ್ಯೂಜಿಲೆಂಡ್ ತಂಡ ಟಾರ್ಗೆಟ್ ಬೆನ್ನಟ್ಟಲು ಮೈದಾನಕ್ಕಿಳಿದ ನಂತರ, ಡೆವೊನ್ ಕಾನ್ವೇ ಮತ್ತು ರಚಿನ್ ರವೀಂದ್ರ ಅವರ ಅಮೋಘ ಶತಕಗಳ ನೆರವಿನಿಂದ ನ್ಯೂಜಿಲೆಂಡ್ ಒಂಬತ್ತು ವಿಕೆಟ್‌ಗಳ ಅಮೋಘ ಗೆಲುವು ದಾಖಲಿಸಿತು.
ಇಂಗ್ಲೆಂಡ್ ತಂಡ ತನ್ನ ಎರಡನೇ ಪಂದ್ಯವನ್ನು ಮಂಗಳವಾರ, ಅಕ್ಟೋಬರ್ 10ರಂದು ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸುತ್ತಿದೆ. ಮೊದಲು ಮಾಡಿದ ಇಂಗ್ಲೆಂಡ್ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 364 ರನ್‌ಗಳನ್ನು ಕಲೆಹಾಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications