Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೇನ್ ವಿಲಿಯಮ್ಸನ್ ಕಣಕ್ಕಿಳಿಯುವ ಬಗ್ಗೆ ಅಪ್‌ಡೇಟ್ ನೀಡಿದ ಕಿವೀಸ್ ಕೋಚ್

ನ್ಯೂಜಿಲೆಂಡ್ ತಂಡದ ನಾಯಕ ಸ್ಟಾರ್ ಆಟಗಾರ ಕೇನ್ ವಿಲಿಯಮ್ಸನ್ ಗಾಯದಿಂದ ಚೇತರಿಸಿಕೊಂಡಿದ್ದು ವಿಶ್ವಕಪ್ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಆದರೆ ವಿಶ್ವಕಪ್‌ನ ಆರಂಭಿಕ ಪಂದ್ಯದಿಂದ ಕೇನ್ ಹೊರಗುಳಿದಿದ್ದು ಯಾವಾಗ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಪ್ರಶ್ನೆಗಳು ಎದ್ದಿತ್ತು. ಇದೀಗ ಈ ವಿಚಾರವಾಗಿ ನ್ಯೂಜಿಲೆಂಡ್ ತಂಡದ ಮುಖ್ಯ ಕೋಚ್ ಗ್ಯಾರಿ ಸ್ಟೀಡ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಈ ಬಾರಿಯ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ತಂಡದ ಮೂರನೇ ಪಂದ್ಯದಿಂದ ಕೇನ್ ವಿಲಿಯಮ್ಸನ್ ಲಭ್ಯವಿರಲಿದ್ದಾರೆ ಎನ್ನುವ ಮಾಹಿತಿಯನ್ನು ಕಿವೀಓಸ್ ಕೋಚ್ ಬಹಿರಂಗಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಮತ್ತೊಬ್ಬರು ಆಟಗಾರರಾದ ಟಿಮ್ ಸೌಥಿ ಹಾಗೂ ಲೂಕಿ ಫರ್ಗ್ಯೂಸನ್ ಗಾಯದ ಬಗ್ಗೆಯೂ ಮಾಹಿತಿ ನೀಡಿದ್ದಾರೆ.

World Cup 2023: Kane Williamson injury update; coach Gary Stead said he will be available from 3rd match

ವಿಲಿಯಮ್ಸನ್, ಸೌಥಿ ಮತ್ತು ಫರ್ಗುಸನ್ ಈ ಮೂವರು ಕೂಡ ವಿಶ್ವಕಪ್ 2023ರಲ್ಲಿ ನ್ಯೂಜಿಲೆಂಡ್ ತಂಡದ ಆರಂಭಿಕ ಪಂದ್ಯಕ್ಕೆ ಗೈರುಹಾಜರಾಗಿದ್ದರು. ಆ ಪಂದ್ಯದ ಸಂದರ್ಭದಲ್ಲಿ ಮೂವರು ಕೂಡ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ ಆಡುವ ಬಳಗದಲ್ಲಿ ಸ್ಥಾನವನ್ನು ಪಡೆದುಕೊಂಡಿರಲಿಲ್ಲ.

ಕೇನ್ ವಿಲಿಯಮ್ಸನ್ ಕಳೆದ ಐಪಿಎಲ್ ಆವೃತ್ತಿಯ ಆರಂಭಿಕ ಪಂದ್ಯದಲ್ಲಿಯೇ ಗಾಯಕ್ಕೆ ತುತ್ತಾಗಿದ್ದು ಸುದೀರ್ಘ ಕಾಲದಿಂದ ಚಿಕಿತ್ಸೆಯಲ್ಲಿದ್ದು ಚೇತರಿಸಿಕೊಂಡಿದ್ದಾರೆ. ಇನ್ನು ಟಿಮ್ ಸೌಥಿ ಹೆಬ್ಬೆರಳಿನ ಗಾಯಕ್ಕೆ ತುತ್ತಾಗಿದ್ದು ಚೇತರಿಕೆಯ ಹಂತದಲ್ಲಿದ್ದಾರೆ. ಇನ್ನು ಫರ್ಗ್ಯೂಸನ್ ಬೆನ್ನು ನೋವಿನ ಕಾರಣದಿಂದಾಗಿ ಮೊದಲ ಪಂದ್ಯದಿಂದ ಹೊರಗುಳಿದಿದ್ದರು.

ನ್ಯೂಜಿಲೆಂಡ್ ಕ್ರಿಕೆಟ್‌ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಾತನಾಡುತ್ತಾ ಕೋಚ್ ಸ್ಟೀಡ್ ಎಲ್ಲಾ ಮೂರು ಆಟಗಾರರ ಚೇತರಿಕೆಯ ಮಾಹಿತಿ ಹಂಚಿಕೊಂಡಿದ್ದಾರೆ. ವೇಗಿ ಫರ್ಗ್ಯೂಸನ್ ಆಕ್ಟೋಬರ್ 9 ರಂದು ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯಕ್ಕೆ ಲಭ್ಯವಿರಲಿದ್ದಾರೆ ಎಂದಿದ್ದಾರೆ. ಸೌಥಿ ಕೂಡ ಉತ್ತಮ ತರಬೇತಿ ಪಡೆದಿದ್ದಾರೆ ಮತ್ತು ಭಾನುವಾರ ಅಂತಿಮ ಎಕ್ಸ್-ರೇ ಮಾಡಲಾಗುತ್ತದೆ ಅದರ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ ಎಂದಿದ್ದಾರೆ. ನೆದರ್ಲೆಂಡ್ಸ್ ವಿರುದ್ಧದ ಪಂದ್ಯಕ್ಕೆ ಈ ವೇಗಿ ಕೂಡ ಲಭ್ಯವಿರುವ ನಿರೀಕ್ಷೆಯಿದೆ ಎಂದಿದ್ದಾರೆ ಕಿವೀಸ್ ಕೋಚ್

ಇನ್ನು ಕೇನ್ ವಿಲಿಯಮ್ಸನ್ ಬಗ್ಗೆ ಮಾತನಾಡುತ್ತಾ "ಕೇನ್ ವಿಲಿಯಮ್ಸನ್ ಅವರು ಕೂಡ ಅದ್ಭುತವಾಗಿ ಚೇತರಿಸಿಕೊಳ್ಳಿತ್ತಿದ್ದಾರೆ. ಫೀಲ್ಡಿಂಗ್ ಮಾತ್ರವೇ ಅವರು ಗಮನಹರಿಸಬೇಕಿರುವ ಅಂಶ. ಆ ವಿಭಾಗದಲ್ಲಿ ಆತನ ಆತ್ಮವಿಶ್ವಾಸ ಇನ್ನೂ ಸ್ವಲ್ಪ ಹೆಚ್ಚಿಸಿಕೊಳ್ಳಬೇಕಿದೆ" ಎಂದಿದ್ದಾರೆ. ನ್ಯೂಜಿಲೆಂಡ್ ತಂಡ ತನ್ನ ಮುಂದಿನ ಪಂದ್ಯವನ್ನು ಬಾಂಗ್ಲಾದೇಶದ ವಿರುದ್ಧ ಅಕ್ಟೋಬರ್ 13ರಂದು ಆಡಲಿದೆ.

Story first published: Sunday, October 8, 2023, 13:00 [IST]
Other articles published on Oct 8, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+