Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಈ ಮೂರು ತಂಡಗಳ ಪೈಕಿ ಒಂದು ತಂಡ ಗೆಲ್ಲಲಿದೆ ಈ ಬಾರಿಯ ವಿಶ್ವಕಪ್: ಕ್ರಿಸ್ ಶ್ರೀಕಾಂತ್ ಭವಿಷ್ಯ

ವಿಶ್ವಕಪ್ ಟೂರ್ನಿಗೆ ದಿನಗಣನೆ ಆರಂಭವಾಗಿದ್ದು ಟೂರ್ನಿಯ ವೇಳಾಪಟ್ಟಿ ಕೂಡ ಈಗಾಗಲೇ ಬಿಡುಗಡೆಯಾಗಿದೆ. ಈ ಸಂದರ್ಭದಲ್ಲಿ ಯಾವ ತಂಡ ಈ ಬಾರಿಯ ವಿಶ್ವಕಪ್ ಗೆಲ್ಲಬಹುದು? ಯಾವ ತಂಡಕ್ಕೆ ಗೆಲ್ಲುವ ಅವಕಾಶ ಹೆಚ್ಚಿದೆ ಎಂಬುದರ ಬಗ್ಗೆ ಸಾಕಷ್ಟು ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಮಾಜಿ ಕ್ರಿಕೆಟಿಗ ಕ್ರಿಸ್ ಶ್ರೀಕಾಂತ್ ಕೂಡ ಈ ಬಗ್ಗೆ ಪ್ರತಿಕ್ರಿಯೆ ನಿಡಿದ್ದು ಈ ಬಾರಿಯ ವಿಶ್ವಕಪ್ ಗೆಲ್ಲುವ ಮೂರು ನೆಚ್ಚಿನ ತಂಡಗಳನ್ನು ಹೆಸರಿಸಿದ್ದಾರೆ.

ಅಂದಹಾಗೆ 1983ರ ವಿಶ್ವಕಪ್ ವಿಜೇತ ತಂಡದ ಬ್ಯಾಟಿಂಗ್ ಸ್ಟಾರ್ ಕ್ರಿಸ್ ಶ್ರೀಕಾಂತ್ ಈ ಬಾರಿಯ ವಿಶ್ವಕಪ್ ಗೆಲ್ಲುವ ಸಾಮರ್ಥ್ಯವಿರುವ ಮೂರು ತಂಡಗಳನ್ನು ಹೆಸರಿಸಿದ್ದಾರೆ. ಆತಿಥೇಯ ಭಾರತ ತಂಡ, ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ಮತ್ತು ಹಾಲಿ ಚಾಂಪಿಯನ್ ಇಂಗ್ಲೆಂಡ್ ಈ ಮೂರು ತಂಡಗಳ ಪೈಕಿ ಯಾವುದಾದರೂ ಒಂದು ತಂಡ ಈ ಬಾರಿಯ ವಿಶ್ವಕಪ್ ಗೆಲ್ಲುವುದು ನಿಶ್ಚಿತ ಎಂದಿದ್ದಾರೆ ಕ್ರಿಸ್ ಶ್ರೀಕಾಂತ್.

Kris Srikkanth predicts Out of these 3 one of them will probably win

ತಮ್ಮ ಈ ಅಭಿಪ್ರಾಯಕ್ಕೆ ಶ್ರೀಕಾಂತ್ ಕಾರಣವನ್ನು ಕೂಡ ವಿವರಿಸಿದ್ದಾರೆ. ಭಾರತ ತಂಡಕ್ಕೆ ತವರಿನ ವಾತಾವರಣದ ಲಾಭ ದೊರೆಯಲಿದ್ದು ಇದರಿಂದಾಗಿ ಭಾರ ವಿಶ್ವಕಪ್ ಗೆಲ್ಲುವ ಅವಕಾಶ ಹೆಚ್ಚಿದೆ ಎಂದಿದ್ದಾರೆ. ಇನ್ನು ಐಪಿಎಲ್‌ನಿಂದಾಗಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ನ ಆಟಗಾರರು ಕೂಡ ಹೆಚ್ಚಿನ ಪ್ರಮಾಣದಲ್ಲಿ ಭಾರತ ಕಳೆಯುವ ಕಾರಣ ಇಲ್ಲಿನ ವಾತಾವರಣ ಅವರಿಗೂ ಪರಿಚಿತವಾಗಿದ್ದು ಅದು ಈ ತಂಡಗಳಿಗೂ ನೆರವಾಗಲಿದೆ ಎಂದಿದ್ದಾರೆ.

"ಭಾರತ ತಂಡ ಈ ಬಾರಿಯ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದು. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಆಸ್ಟ್ರೇಲಿಯಾ ಕೂಡ ಬಹಳ ಉತ್ತಮ ತಂಡವನ್ನು ಹೊಂದಿದ್ದು ಅದು ಕೂಡ ಫೇವರೀಟ್. ಇನ್ನು ಇಂಗ್ಲೆಂಡ್ ಕೂಡ ಬಹಳ ಉತ್ತಮವಾದ ಆಟಗಾರರ ಪಡೆಯನ್ನು ಹೊಂದಿದೆ" ಎಂದಿದ್ದಾರೆ ಮಾಜಿ ಕ್ರಿಕೆಟಿಗ ಕ್ರಿಸ್ ಶ್ರೀಕಾಂತ್.

"ಆಸ್ಟ್ರೇಲಿಯಾದ ಆಟಗಾರರು ಕೂಡ ಭಾರತದಲ್ಲಿ ಅದ್ಭುತವಾಗಿ ಆಡಲಿದ್ದಾರೆ ಎಂಬುದು ನನ್ನ ಭಾವನೆ. ಹಾಗಾಗಿ ಭಾರತ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಈ ಮೂರು ತಂಡಗಳ ಪೈಕಿ ಯಾವುದಾದರೂ ಒಂದು ತಂಡ ಈ ಬಾರಿಯ ವಿಶ್ವಕಪ್ ಗೆಲ್ಲಲಿದೆ ಎಂಬುದು ನನ್ನ ಅಭಿಪ್ರಾಯ" ಎಂದು ಮಾಜಿ ಕ್ರಿಎಕಟಿಗ ಕ್ರಿಸ್ ಶ್ರೀಕಾಂತ್ ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನು ಈ ಸಂದರ್ಭದಲ್ಲಿ ಇಂಗ್ಲೆಂಡ್ ತಂಡದ ಪರವಾಗಿಯೂ ಕೂಡ ಶ್ರೀಕಾಂತ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. 2015ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಅವಮಾನಕರ ರೀತಿಯಲ್ಲಿ ನಿರ್ಗಮಿಸಿದ ನಂತರ ಅದು ಕುಡ ಅದ್ಭುತವಾಗಿ ಆಡುತ್ತಿದೆ. ಆಟದ ಶೈಲಿಯಲ್ಲಿ ಬದಲಾಯಿಸಿಕೊಂಡಿದೆ ಎಂದು ಇಂಗ್ಲೆಂಡ್‌ನ ಆಕ್ರಮಣಕಾರಿ ಆಟದ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. "ಇಂಗ್ಲೆಂಡ್ ತಂಡ ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಗುತ್ತಾರೆ. ಅದು ಟೆಸ್ಟ್ ಪಂದ್ಯವಾಗಲಿ ಏಕದಿನ ಆಗಲಿ ಅಥವಾ ಟಿ20 ಮಾದರಿಯಾಗಲಿ. 2015ರಲ್ಲಿ ವಿಶ್ವಕಪ್‌ನಿಂದ ನಿರ್ಗಮಿಸಿದ ಬಳಿಕ ಅವರ ಆಟದ ಶೈಲಿ ಬದಲಾಗಿದೆ" ಎಂದಿದ್ದಾರೆ ಕ್ರಿಸ್ ಶ್ರೀಕಾಂತ್.

Story first published: Wednesday, June 28, 2023, 14:58 [IST]
Other articles published on Jun 28, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+