World Cup 2023: ವಿಶ್ವಕಪ್ ನಲ್ಲಿ ಗರಿಷ್ಠ ಶತಕ ಸಿಡಿಸಿದ ತಂಡಗಳ ಪಟ್ಟಿ
ಭಾರತದಲ್ಲಿ ಈಗಾಗಲೇ ವಿಶ್ವಕಪ್ ಜ್ವರ ಏರಲು ಆರಂಭವಾಗಿದೆ. ಎಲ್ಲಾ ತಂಡಗಳು ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ತಮ್ಮ ಕ್ಷಮತೆ ಸಾಬೀತು ಪಡಿಸಿಕೊಳ್ಳಲು ಮೈದಾನಕ್ಕೆ ಇಳಿದಿವೆ. ವಿಶ್ವಕಪ್ ಅಕ್ಟೋಬರ್ 5 ರಿಂದ ಆರಂಭವಾಗಲಿದೆ. ವಿಶ್ವಕಪ್‌ಗೂ ಮುನ್ನ ಭಾರತ ತಂಡ ಕ್ರಿಕೆಟ್ ನ ಮೂರು ಫಾರ್ಮೆಟ್ ಗಳಲ್ಲಿ ನಂಬರ್ ಒನ್ ಸ್ಥಾನವನ್ನು ಭದ್ರ ಪಡಿಸಿಕೊಂಡಿದೆ.
ಐಸಿಸಿ ಇವೆಂಟ್ ಗಳಲ್ಲಿ ಟೀಮ್ ಇಂಡಿಯಾದ ಆಟಗಾರರ ಪ್ರದರ್ಶನ ಉತ್ತವಾಗಿದೆ. 2019 ರಲ್ಲಿ ಆಡಿದ ವಿಶ್ವಕಪ್‌ನಲ್ಲಿ, ರೋಹಿತ್ ಶರ್ಮಾ ಐದು ಶತಕಗಳನ್ನು ಬಾರಿಸಿ ಅಬ್ಬರಿಸಿದ್ದರು. ಇದು ಒಂದೇ ವಿಶ್ವಕಪ್ ನಲ್ಲಿ ದಾಖಲಾದ ಅತ್ಯಧಿಕ ಶತಕವಾಗಿದೆ. ಇಲ್ಲಿಯವರೆಗಿನ ಏಕದಿನ ವಿಶ್ವಕಪ್‌ನಲ್ಲಿ ಯಾವ ದೇಶದ ಬ್ಯಾಟ್ಸ್‌ಮನ್‌ಗಳು ಅತಿ ಹೆಚ್ಚು ಶತಕಗಳನ್ನು ಗಳಿಸಿದ್ದಾರೆ ಎಂಬುದನ್ನು ನೋಡೋಣ..

ಏಕದಿನ ವಿಶ್ವಕಪ್‌ನಲ್ಲಿ ಭಾರತದ ಪರ ಬ್ಯಾಟರ್ ಗಳು ಒಟ್ಟು 32 ಶತಕಗಳನ್ನು ಬಾರಿಸಿದ್ದಾರೆ. ಐದು ಬಾರಿಯ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ 31 ಶತಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಶ್ರೀಲಂಕಾ 25 ಶತಕಗಳನ್ನು ದಾಖಲಿಸಿದೆ. ಪಟ್ಟಿಯಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ 18 ಶತಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದು, ನ್ಯೂಜಿಲೆಂಡ್ 17 ಶತಕಗಳೊಂದಿಗೆ ಐದನೇ ಸ್ಥಾನದಲ್ಲಿದೆ.
ಪಾಕಿಸ್ತಾನ ಕ್ರಿಕೆಟ್ ತಂಡವು ಪಟ್ಟಿಯಲ್ಲಿ ಆರನೇ ಸ್ಥಾನ
ಶತಕಗಳ ಲೆಕ್ಕಾಚಾರದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವು ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಪಾಕಿಸ್ತಾನದ ಬ್ಯಾಟ್ಸ್‌ಮನ್‌ಗಳು ಇದುವರೆಗೆ ವಿಶ್ವಕಪ್‌ನಲ್ಲಿ 16 ಶತಕಗಳನ್ನು ಗಳಿಸಿದ್ದಾರೆ. ಇದರ ನಂತರ ದಕ್ಷಿಣ ಆಫ್ರಿಕಾ 15 ಶತಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ.
ಬಾಂಗ್ಲಾದೇಶ 5 ಶತಕಗಳೊಂದಿಗೆ ಎಂಟನೇ ಸ್ಥಾನದಲ್ಲಿ ಮತ್ತು ನೆದರ್ಲ್ಯಾಂಡ್ಸ್ 4 ಶತಕಗಳೊಂದಿಗೆ 9 ನೇ ಸ್ಥಾನದಲ್ಲಿದೆ. ಇದೇ ಸಮಯದಲ್ಲಿ, ಈ ವಿಶ್ವಕಪ್‌ನ ಭಾಗವಾಗಿರುವ ಅಫಫ್ಘಾನಿಸ್ತಾನ ತಂಡದಿಂದ ವಿಶ್ವಕಪ್‌ನಲ್ಲಿ ಯಾವುದೇ ಶತಕ ದಾಖಲಾಗಿಲ್ಲ. 2023ರ ವಿಶ್ವಕಪ್‌ನಲ್ಲಿ ಭಾಗವಹಿಸುವ ತಂಡಗಳನ್ನು ಮಾತ್ರ ಪಟ್ಟಿಯಲ್ಲಿ ಸೇರಿಸಲಾಗಿದೆ.
ಭಾರತದ ಮಾಜಿ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಮತ್ತು ಪ್ರಸ್ತುತ ನಾಯಕ ರೋಹಿತ್ ಶರ್ಮಾ ವಿಶ್ವಕಪ್‌ನಲ್ಲಿ ಜಂಟಿಯಾಗಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಬ್ಯಾಟ್ಸ್‌ಮನ್‌ಗಳು ಎಂಬ ಖ್ಯಾತಿ ತಮ್ಮದಾಗಿಸಿಕೊಂಡಿದ್ದಾರೆ. ಇಬ್ಬರೂ ಬ್ಯಾಟ್ಸ್‌ಮನ್‌ಗಳು 6 ಶತಕ ಗಳಿಸಿದ್ದಾರೆ. ರೋಹಿತ್ ಶರ್ಮಾ 2019 ರ ವಿಶ್ವಕಪ್‌ನಲ್ಲಿ 5 ಶತಕಗಳನ್ನು ಗಳಿಸಿದ್ದರು.
ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ತಂಡಗಳು:
1. ಭಾರತ - 32
2. ಆಸ್ಟ್ರೇಲಿಯಾ - 31
3. ಶ್ರೀಲಂಕಾ - 25
4. ಇಂಗ್ಲೆಂಡ್ - 18
5. ನ್ಯೂಜಿಲೆಂಡ್ - 17
6. ಪಾಕಿಸ್ತಾನ - 16
7. ದಕ್ಷಿಣ ಆಫ್ರಿಕಾ - 15
8. ಬಾಂಗ್ಲಾದೇಶ - 5
9. ನೆದರ್ಲ್ಯಾಂಡ್ಸ್ - 4
10. ಅಫ್ಘಾನಿಸ್ತಾನ - 0
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications