ವಿಶ್ವಕಪ್ ಟೂರ್ನಿಯ 11ನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ನ್ಯೂಜಿಲೆಂಡ್ 8 ವಿಕೆಟ್‌ಗಳ ಅಂತರದ ಗೆಲುವು ಸಾಧಿಸಿದೆ. ಬಾಂಗ್ಲಾದೇಶ ನೀಡಿದ 246 ರನ್‌ಗಳ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ ಕೇವಲ 2 ವಿಕೆಟ್ ಕಳೆದುಕೊಂಡು ಈ ಗುರಿಯನ್ನು ತಲುಪುವನ್ನು ಯಶಸ್ವಿಯಾಗಿದೆ.
ಬಾಂಗ್ಲಾದೇಶ ನೀಡಿದ ಈ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ ಆರಂಭಿಕ ಆಘಾತಕ್ಕೆ ಒಳಗಾಯಿತು. ರಚಿನ್ ರವೀಂದ್ರ ಮೂರನೇ ಓವರ್‌ನಲ್ಲಿಯೇ ವಿಕೆಟ್ ಕಳೆದುಕೊಂಡಿದ್ದರು. ಆದರೆ ನಂತರ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಡೆವೋನ್ ಕಾನ್ವೆ ಅದ್ಭುತ ಜೊತೆಯಾಟ ನೀಡುವ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು. ಕಾನ್ವೆ ವೈಯಕ್ತಿಕ 45 ರನ್‌ಗಳಿಗೆ ವಿಕೆಟ್ ಕಳೆದುಕೊಂಡರು.

ಇನ್ನು ನಾಯಕ ಕೇನ್ ವಿಲಿಯಮ್ಸನ್ ಈ ಪಂದ್ಯದಲ್ಲಿ ಭರ್ಜರಿ ಭರ್ಜರಿ 78 ರನ್ ಗಳಿಸಿ ಗಾಯಗೊಂಡು ನಿವೃತ್ತರಾದರು. ಇನ್ನು ಡ್ಯಾರೆಲ್ ಮಿಚೆಲ್ 89 ರನ್‌ಗಳನ್ನು ಗಳಿಸಿ ಅಜೇಯವಾಗುಳಿದರು. ಗ್ಲೆನ್ ಫಿಲಿಪ್ಸ್ 16 ರನ್‌ಗಳಿಸಿ ಅಜೇಯವಾಗುಳಿದಿದ್ದಾರೆ. ಈ ಮೂಲಕ ಈ ಮೂಲಕ ನ್ಯೂಜಿಲೆಂಡ್ ಈ ಪಂದ್ಯದಲ್ಲಿ ಕೇವಲ 42.5 ಓವರ್‌ಗಳಲ್ಲಿ ಗುರಿ ತಲುಪುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಕಿವೀಸ್ ಸತತ ಮೂರನೇ ಗೆಲುವು ಸಾಧಿಸಿದೆ.
ಇನ್ನು ಇದಕ್ಕೂ ಮುನ್ನ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್‌ಗೆ ಇಳಿದ ಬಾಂಗ್ಲಾದೇಶ ತಂಡ ಆರಂಭಿಕ ಹಿನ್ನಡೆ ಅನುಭವಿಸಿತು. ಶೂನ್ಯಕ್ಕೆ ಮೊದಲ ವಿಕೆಟ್ ಕಳೆದುಕೊಂಡ ಬಾಂಗ್ಲಾ ಭಾರೀ ಹಿನ್ನಡೆ ಅನುಭವಿಸಿತು. ಉತ್ತಮ ಫಾರ್ಮ್‌ನಲ್ಲಿರುವ ಲಿಟನ್ ದಾಸ್ ಈ ಪಂದ್ಯದ ಮೊದಲ ಎಸೆತದಲ್ಲಿಯೇ ವಿಕೆಟ್ ಕಳೆದುಕೊಂಡಿದ್ದರು. ನಂತರ ಮೆಹದಿ ಹಸನ್ ಮಿರಾಜ್, ನಾಯಕ ಶಕೀಬ್ ಅಲ್ ಹಸನ್ ಅವರಿಂದ ಉತ್ತಮ ಪ್ರದರ್ಶನ ಬಂದಿತು. ಮಿರಾಜ್ 30 ರನ್‌ಗಳಿಸಿದರೆ ನಾಯಕ ಶಕೀಬ್ 40 ರನ್‌ಗಳ ಕೊಡುಗೆ ನೀಡಿದರು.
ಇನ್ನು ಕೆಳ ಮಧ್ಯಮ ಕ್ರಮಾಂಕದಲ್ಲಿ ಬಾಂಗ್ಲಾದೇಶ ಉತ್ತಮ ಪ್ರದರ್ಶನ ನೀಡಿತು. ಅನುಭವಿ ಮುಷ್ಫಿಕರ್ ರಹೀಮ್ ಹಾಗೂ ಮಹ್ಮದುಲ್ಲಾ ಅವರಿಂದ ಅದ್ಭುತ ಪ್ರದರ್ಶನ ಬಂದಿದೆ. ಮುಷ್ಫಿಕರ್ ರಹಿಮ್ 66 ರನ್‌ಗಳಸಿಇ ತಂಡದ ಪರವಾಗಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರ ಎನಿಸಿಕೊಂಡರು. ಇನ್ನು ಮಹ್ಮದುಲ್ಲಾ 41 ರನ್ಗಳ ಕೊಡುಗೆ ನೀಡಿದ್ದು ಮಿಂಚಿದ್ದಾರೆ. ಈ ಪ್ರದರ್ಶನದಿಂದಾಗಿ ಬಾಂಗ್ಲಾದೇಶ ತಂಡ 9 ವಿಕೆಟ್ ಕಳೆದುಕೊಂಡು 245 ರನ್‌ಗಳನ್ನು ಗಳಿಸಿದೆ.
ನ್ಯೂಜಿಲೆಂಡ್ ಆಡುವ ಬಳಗ: ಡೆವೊನ್ ಕಾನ್ವೇ, ರಚಿನ್ ರವೀಂದ್ರ, ಕೇನ್ ವಿಲಿಯಮ್ಸನ್ (ನಾಯಕ), ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್.
ಬೆಂಚ್: ವಿಲ್ ಯಂಗ್, ಇಶ್ ಸೋಧಿ, ಜೇಮ್ಸ್ ನೀಶಮ್, ಟಿಮ್ ಸೌಥಿ
ಬಾಂಗ್ಲಾದೇಶ: ಲಿಟ್ಟನ್ ದಾಸ್, ತಂಝಿದ್ ಹಸನ್, ನಜ್ಮುಲ್ ಹೊಸೈನ್ ಶಾಂಟೊ, ಮೆಹಿದಿ ಹಸನ್ ಮಿರಾಜ್, ಶಾಕಿಬ್ ಅಲ್ ಹಸನ್ (ನಾಯಕ), ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ತೌಹಿದ್ ಹೃದಯೋಯ್, ಮಹಮ್ಮದುಲ್ಲಾ, ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ಮುಸ್ತಫಿಜುರ್ ರಹಮಾನ್.
ಬೆಂಚ್: ಹಸನ್ ಮಹಮೂದ್, ತಂಜಿಮ್ ಹಸನ್ ಸಾಕಿಬ್, ನಸುಮ್ ಅಹ್ಮದ್, ಮಹೇದಿ ಹಸನ್