World Cup 2023: ಅರ್ಧ ಪಂದ್ಯಾವಳಿಯ ನಂತರ ಫೈನಲಿಸ್ಟ್ ತಂಡಗಳ ಭವಿಷ್ಯ ನುಡಿದ ಆಸೀಸ್ ಸ್ಟಾರ್ ಕ್ರಿಕೆಟಿಗ
ಭಾರತದಲ್ಲಿ ನಡೆಯುತ್ತಿರುವ 2023ರ ಐಸಿಸಿ ಏಕದಿನ ಪಂದ್ಯಾವಳಿಯು ರೋಚಕ ಹಾಗೂ ಅನಿರೀಕ್ಷಿತ ಫಲಿತಾಂಶಗಳನ್ನು ನೀಡುತ್ತಿದೆ. ಈಗಾಗಲೇ ಪಂದ್ಯಾವಳಿಯ ಅರ್ಧ ಭಾಗ ಮುಗಿದಿದ್ದು, ಇನ್ಮುಂದೆ ನಿರ್ಣಾಯಕ ಪಂದ್ಯಗಳು ನಡೆಯಲಿವೆ.
ಸೆಮಿಫೈನಲ್ ಹಂತಕ್ಕೆ ಅರ್ಹತೆ ಪಡೆಯುವುದನ್ನು ನಿರ್ಧರಿಸುವ ಪಂದ್ಯಗಳಲ್ಲಿ ಎಲ್ಲಾ ಹತ್ತೂ ತಂಡಗಳು ಸೆಣಸಾಡಲಿವೆ. ಈಗಾಗಲೇ ಇಂಗ್ಲೆಂಡ್ ತನ್ನ ಸೆಮಿಫೈನಲ್ ಹಾದಿಯನ್ನು ಬಹುತೇಕ ಕಳೆದುಕೊಂಡಿದೆ.

ಇದೇ ವೇಳೆ ಆಸ್ಟ್ರೇಲಿಯಾ ಟೆಸ್ಟ್ ತಂಡದ ಅನುಭವಿ ಸ್ಪಿನ್ನರ್ ನಾಥನ್ ಲಿಯಾನ್ ಅವರು 2023ರ ಏಕದಿನ ವಿಶ್ವಕಪ್‌ನಲ್ಲಿ ಫೈನಲ್ ಪಂದ್ಯದಲ್ಲಿ ಸೆಣಸಾಡುವ ತಂಡಗಳ ಕುರಿತು ಭವಿಷ್ಯ ನುಡಿದಿದ್ದಾರೆ.
ಹಳೆಯ ಪ್ರತಿಸ್ಪರ್ಧಿಗಳಾದ ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ಮತ್ತು ಎರಡು ಬಾರಿ ವಿಜೇತರು ಹಾಗೂ ಆತಿಥೇಯ ಭಾರತ ತಂಡಗಳು ನವೆಂಬರ್ 19ರಂದು ಅಹಮದಾಬಾದ್‌ನಲ್ಲಿ 2023ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್‌ನಲ್ಲಿ ಮುಖಾಮುಖಿಯಾಗಲಿದೆ ಎಂದು ಆಫ್-ಸ್ಪಿನ್ನರ್ ನಾಥನ್ ಲಿಯಾನ್ ತಿಳಿಸಿದ್ದಾರೆ.

ಉಭಯ ತಂಡಗಳು ಇತ್ತೀಚೆಗೆ ತಮ್ಮ ಗೆಲುವಿನ ನಾಗಾಲೋಟವನ್ನು ಮುಂದುವರೆಸಿವೆ. ಶನಿವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಮ್ಮ ಸಾಂಪ್ರದಾಯಿಕ ಎದುರಾಳಿ ನ್ಯೂಜಿಲೆಂಡ್ ವಿರುದ್ಧ 5 ರನ್‌ಗಳ ರೋಚಕ ಗೆಲುವು ಸಾಧಿಸಿತು.
ಮತ್ತೊಂದೆಡೆ, ನಿಧಾನಗತಿಯ ಬ್ಯಾಟಿಂಗ್ ಆರಂಭ ಪಡೆದ ಭಾರತ ತಂಡ ಮಾರಕ ಬೌಲಿಂಗ್ ದಾಳಿ ನಡೆಸಿ 100 ರನ್‌ಗಳ ಅಂತರದಿಂದ ಇಂಗ್ಲೆಂಡ್ ತಂಡವನ್ನು ಮಣಿಸಿತು. ಮುಂಬರುವ ವಿಶ್ವಕಪ್ ಫೈನಲ್‌ನಲ್ಲಿ ರೋಚಕ ಹಣಾಹಣಿಗೆ ವೇದಿಕೆ ಈಗಾಗಲೇ ಸಿದ್ಧವಾಗಿದೆ.
"ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳು ಫೈನಲ್‌ನಲ್ಲಿ ಆಡಲಿವೆ ಎಂದು ನಾನು ಪ್ರಾಮಾಣಿಕವಾಗಿ ನಂಬುತ್ತೇನೆ. ಭಾರತವು ನನಗೆ ಮೆಚ್ಚಿನ ತಂಡವಾಗಿ ಮತ್ತು ಇದನ್ನು ವೀಕ್ಷಿಸಲು ಉತ್ಸುಕವಾಗಿದ್ದೇನೆ," ಎಂದು ನಾಥನ್ ಲಿಯಾನ್ ಅವರು ಸೆನ್ 1170 ಬ್ರೇಕ್‌ಫಾಸ್ಟ್‌ನಲ್ಲಿ ಹೇಳಿದರು.
"ದಕ್ಷಿಣ ಆಫ್ರಿಕಾ ಇನ್ನೂ ಪ್ರಬಲ ಬ್ಯಾಟಿಂಗ್ ಲೈನ್‌ಅಪ್‌ನೊಂದಿಗೆ ಅಪಾಯಕಾರಿ ತಂಡವಾಗಿದೆ ಎಂದು ನಾನು ಭಾವಿಸುತ್ತೇನೆ. ನೀವು ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಏಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್ ಮತ್ತು ನಂತರ ಡೇವಿಡ್ ಮಿಲ್ಲರ್ ಸ್ಫೋಟಕ ಬ್ಯಾಟಿಂಗ್ ನೋಡುವಂತಿರುತ್ತದೆ," ಎಂದು ನಾಥನ್ ಲಿಯಾನ್ ತಿಳಿಸಿದರು.

ಭಾರತವು ಆತಿಥೇಯ ರಾಷ್ಟ್ರವಾಗಿದ್ದರೂ ಸಹ ಗಮನಾರ್ಹ ಪ್ರಮಾಣದ ಒತ್ತಡವನ್ನು ಹೊಂದಿದೆ ಎಂದು ನಾಥನ್ ಲಿಯಾನ್ ಹೇಳಿದರು. ಐಸಿಸಿ ವಿಶ್ವಕಪ್ ಟ್ರೋಫಿಯ ಅನ್ವೇಷಣೆಯಲ್ಲಿ ಅವರ ಗೆಲುವನ್ನು ಅಭಿಮಾನಿಗಳು ಕುತೂಹಲದಿಂದ ನಿರೀಕ್ಷಿಸುತ್ತಿರುವಾಗ ಇಡೀ ರಾಷ್ಟ್ರದ ನಿರೀಕ್ಷೆಗಳ ಭಾರವು ಆಟಗಾರರ ಹೆಗಲ ಮೇಲಿದೆ ಎಂದರು.
"ಭಾರತ ತಂಡವು ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿರುವ ಇಡೀ ರಾಷ್ಟ್ರದ ಒತ್ತಡವನ್ನು ಹೊಂದಿದೆ ಮತ್ತು ಅವರ ಅಭಿಮಾನಿಗಳು ತುಂಬಾ ಭಾವೋದ್ರಿಕ್ತರಾಗಿದ್ದಾರೆ. ಫೈನಲ್‌ನಲ್ಲಿ ಆಸ್ಟ್ರೇಲಿಯಾವು ಉತ್ತಮ ಸ್ಕೋರ್ ಹೊಂದುವುದರಿಂದ, ಭಾರತ ತಂಡ ಎಲ್ಲಾ ರೀತಿಯಲ್ಲಿ ಹೋಗಬಹುದು ಎಂದು ಆಶಿಸುತ್ತೇವೆ," ಎಂದು ಆಸ್ಟ್ರೇಲಿಯಾ ಸ್ಪಿನ್ನರ್ ಅಭಿಪ್ರಾಯಪಟ್ಟರು.
ಭಾರತ ತಂಡವು ಆರು ಪಂದ್ಯಗಳಲ್ಲಿ ಆರು ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ ಐದು ಗೆಲುವು ಮತ್ತು ಒಂದು ಸೋಲಿನೊಂದಿಗೆ ನಿಕಟವಾಗಿ ಎರಡನೇ ಸ್ಥಾನದಲ್ಲಿದೆ.
ಇನ್ನು ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಎರಡೂ ತಂಡಗಳು ತಲಾ ಎರಡು ಸೋಲು ಮತ್ತು ನಾಲ್ಕು ಗೆಲುವುಗಳನ್ನು ಗಳಿಸಿವೆ. ಕಿವೀಸ್ ನೆಟ್ ರನ್‌ರೇಟ್‌ಗೆ ಸಂಬಂಧಿಸಿದಂತೆ ಆಸೀಸ್‌ಗಿಂತ ಸ್ವಲ್ಪ ಮುನ್ನಡೆ ಸಾಧಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications