ಏಕದಿನ ವಿಶ್ವಕಪ್‌ಗೆ 15 ಆಟಗಾರರ ಪಡೆಯನ್ನು ಘೋಷಣೆ ಮಾಡಿದ ನೆದರ್ಲೆಂಡ್ಸ್
ಮುಂದಿನ ತಿಂಗಳು ಭಾರತದಲ್ಲಿ ಆರಂಭವಾಗಲಿರುವ ಏಕದಿನ ವಿಶ್ವಕಪ್‌ಗೆ ನೆದರ್ಲೆಂಡ್ಸ್ 15 ಆಟಗಾರರ ಪಡೆಯನ್ನು ಘೋಷಣೆ ಮಾಡಿದೆ. ತಂಡದ ಅನುಭವಿ ಜೋಡಿಯಾದ ರೋಲೋಫ್ ವ್ಯಾನ್ ಡೆರ್ ಮೆರ್ವೆ ಮತ್ತು ಕಾಲಿನ್ ಅಕರ್‌ಮನ್ ಈ ತಂಡದ ಮೂಲಕ ಮತ್ತೆ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಅರ್ಹತಾ ಸುತ್ತಿನಲ್ಲಿ ನೆದರ್ಲೆಂಡ್ಸ ತಂಡದಲ್ಲಿ ಈ ಇಬ್ಬರು ಸ್ಥಾನವನ್ನು ಪಡೆದುಕೊಂಡಿರಲಿಲ್ಲ.
ಸ್ಕಾಟ್ ಎಡ್ವರ್ಡ್ಸ್ ನೇತೃತ್ವದಲ್ಲಿ ನೆದರ್ಲೆಂಡ್ಸ್ ತಂಡ ವಿಶ್ವಕಪ್ ಅಭಿಯಾನದಲ್ಲಿ ಭಾಗಿಯಾಗಲಿದ್ದು ಅರ್ತಾ ಸುತ್ತಿನಲ್ಲಿ ಪ್ರದರ್ಶಿಸಿದ ದಿಟ್ಟ ಪ್ರದರ್ಶನವನ್ನು ಮುಖ್ಯ ಟೂರ್ನಿಯಲ್ಲಿಯೂ ಪುನರಾವರ್ತಿಸುವ ವಿಶ್ವಾಸದಲ್ಲಿದೆ. ಕಳೆದ ವರ್ಷ ನಡೆದ ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾಗೆ ಆಘಾತ ನೀಡಿದ್ದ ನೆದರ್ಲೆಂಡ್ಸ್ ಏಕದಿನ ವಿಶ್ವಕಪ್‌ನಲ್ಲಿಯೂ ದೊಡ್ಡ ತಂಡಗಳಿಗೆ ಆಘಾತ ನೀಡುವ ಸಾಮರ್ಥ್ಯ ಹೊಂದಿದೆ.

ನೆದರ್ಲೆಂಡ್ಸ್ ತಂಡದ ಅನುಭವಿ ಆಟಗಾರರಾದ ವ್ಯಾನ್ ಡೆರ್ ಮೆರ್ವ್ ಮತ್ತು ಅಕರ್‌ಮನ್ ಇಬ್ಬರೂ ಕಳೆದ ವರ್ಷ ಟಿ20 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಮುಂದಿನ ತಿಂಗಳು ನಡೆಯಲಿರುವ ವಿಶ್ವಕಪ್‌ನಲ್ಲಿಯೂ ಅದೇ ರೀತಿಯ ಪ್ರದರ್ಶನ ನೀಡುವ ನಿರೀಕ್ಷೆ ಇದೆ.
ಇನ್ನು ಈ ಇಬ್ಬರು ಅನುಭವಿ ಆಟಗಾರರನ್ನು ಹೊರತುಪಡಿಸಿದರೆ ಸ್ಟಾರ್ ಆಲ್‌ರೌಂಡರ್ ಮ್ಯಾಕ್ಸ್ ಒಡೌಡ್ ಹಾಗೂ ಆಲ್‌ರೌಂಡರ್ ಬಾಸ್ ಡೆ ಲೀಡ್ ಮೇಲೆ ಎಲ್ಲರ ಕಣ್ಣಿದೆ. ಇನ್ನು ನೆದರ್ಲೆಂಡ್ಸ್ ತಂಡ ವಿಶ್ವಕಪ್‌ಗಾಗಿ ಉತ್ತಮ ಸಿದ್ಧತೆಯನ್ನು ನಡೆಸಿದ್ದ ಬೆಂಗಳೂರಿನನಲ್ಲಿ ಶಿಬಿರವನ್ನು ನಡೆಸಿದ್ದು ಇತ್ತೀಚೆಗಷ್ಟೇ ತವರಿಗೆ ವಾಪಸಾಗಿತ್ತು. ಈ ಮೂಲಕ ವಿಶ್ವಕಪ್ ಟೂರ್ನಿಗೆ ಸಿದ್ಧತೆ ನಡೆಸುತ್ತಿದೆ.
ಇನ್ನು ಕರ್ನಾಟಕ ತಂಡದ ಜೊತೆಗೆ ಅಭ್ಯಾಸ ಪಂದ್ಯವನ್ನು ಕೂಡ ನಡೆಸಲಿದ್ದು ಅದಾದ ಬಳಿಕ ಆಸ್ಟ್ರೇಲಿಯಾ ಹಾಗೂ ಆತಿಥೆಯ ಭಾರತ ತಂಡದ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಲಿದೆ. ಇನ್ನು ನೆದರ್ಲೆಂಡ್ಸ್ ತಂಡದ ವಿಶ್ವಕಪ್ ತಂಡದ ಮೊದಲ ಪಂದ್ಯ ಪಾಕಿಸ್ತಾನದ ವಿರುದ್ಧ ಅಕ್ಟೋಬರ್ 6ರಂದು ಹೈದರಾಬಾದ್‌ನಲ್ಲಿ ಆಡಲಿದೆ.
ನೆದರ್ಲೆಂಡ್ಸ್ ತಂಡ ಹೀಗಿದೆ: ಸ್ಕಾಟ್ ಎಡ್ವರ್ಡ್ಸ್ (ನಾಯಕ), ಮ್ಯಾಕ್ಸ್ ಒ'ಡೌಡ್, ಬಾಸ್ ಡಿ ಲೀಡ್, ವಿಕ್ರಮ್ ಸಿಂಗ್, ತೇಜಾ ನಿಡಮನೂರು, ಪಾಲ್ ವ್ಯಾನ್ ಮೀಕೆರೆನ್, ಕಾಲಿನ್ ಅಕರ್ಮನ್, ರೋಲೋಫ್ ವ್ಯಾನ್ ಡೆರ್ ಮೆರ್ವ್, ಲೋಗನ್ ವ್ಯಾನ್ ಬೀಕ್, ಆರ್ಯನ್ ದತ್, ರಯಾನ್ ಕ್ಲೈನ್, ವೆಸ್ಲಿ ಬ್ಯಾರೆಸಿ, ಸಾಕಿಬ್ ಜುಲ್ಫಿಕರ್, ಶರೀಜ್ ಅಹ್ಮದ್, ಸೈಬ್ರಾಂಡ್ ಎಂಗಲ್‌ಬ್ರೆಕ್ಟ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications