For Quick Alerts
ALLOW NOTIFICATIONS  
For Daily Alerts
 

World Cup 2023: ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಈ ಸಾಧನೆ ಮಾಡಿದ ವಿಶ್ವದ ಏಕೈಕ ತಂಡ ನೆದರ್ಲ್ಯಾಂಡ್ಸ್

ಮಂಗಳವಾರ, ಅಕ್ಟೋಬರ್ 17ರಂದು ಧರ್ಮಶಾಲಾದಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡಕ್ಕೆ ನೆದರ್ಲ್ಯಾಂಡ್ಸ್ ವಿರುದ್ಧ ಮೊದಲ ಆಘಾತಕಾರಿ ಸೋಲು ಎದುರಾಯಿತು. ಮಳೆ-ಬಾಧಿತ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 38 ರನ್‌ಗಳಿಂದ ಸೋಲಿಸುವ ಮೂಲಕ ನೆದರ್ಲ್ಯಾಂಡ್ಸ್ ಗಮನಾರ್ಹ ಸಾಧನೆ ಮಾಡಿದೆ.

ಕೇವಲ 11 ತಿಂಗಳ ಅಂತರದಲ್ಲಿ ಎರಡು ಐಸಿಸಿ ಪಂದ್ಯಾವಳಿಗಳಲ್ಲಿ ಎರಡೂ ಗೆಲುವು ಸಂಭವಿಸುವುದರೊಂದಿಗೆ ಟಿ20 ಮತ್ತು ಏಕದಿನ ಪಂದ್ಯಗಳೆರಡರಲ್ಲೂ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿದ ಮೊದಲ ಮತ್ತು ಏಕೈಕ ಟೆಸ್ಟ್ ಆಡದ ತಂಡವಾಗಿ ನೆದರ್ಲ್ಯಾಂಡ್ಸ್ ಐತಿಹಾಸಿಕ ಸಾಧನೆ ದಾಖಲಿಸಿದೆ.

World Cup 2023: Netherlands Become the First and Only non-Test team to beat South Africa In T20, ODI

2022ರ ನವೆಂಬರ್ 6ರಂದು ಅಡಿಲೇಡ್‌ನಲ್ಲಿ 2022ರ ಟಿ20 ವಿಶ್ವಕಪ್‌ನಲ್ಲಿ ನೆದರ್ಲ್ಯಾಂಡ್ಸ್ ತಂಡವು ದಕ್ಷಿಣ ಆಫ್ರಿಕಾ ತಂಡವನ್ನು 13 ರನ್‌ಗಳ ಅಮೋಘ ಗೆಲುವಿನ 11 ತಿಂಗಳ ನಂತರ, ಏಕದಿನ ವಿಶ್ವಕಪ್ ಗುಂಪಿನ ಪಂದ್ಯದಲ್ಲಿಯೂ ನೆದರ್ಲ್ಯಾಂಡ್ಸ್ ದಕ್ಷಿಣ ಆಫ್ರಿಕಾವನ್ನು 38 ರನ್‌ಗಳಿಂದ ಮಣಿಸಿದೆ.

ಹರಿಣಗಳಿಗೆ ಸೋಲಿನ ರುಚಿ ತೋರಿಸಿದ ಡಚ್ಚರು

ತಮ್ಮ ಹಿಂದಿನ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದ ಹೊರತಾಗಿಯೂ, ಆತ್ಮವಿಶ್ವಾಸ ಕಳೆದುಕೊಳ್ಳದ ನೆದರ್ಲ್ಯಾಂಡ್ಸ್ ತಂಡವು ಮೊದಲು ಬ್ಯಾಟಿಂಗ್ ಮಾಡಿ 43-ಓವರ್‌ಗಳ ಪಂದ್ಯದಲ್ಲಿ 8 ವಿಕೆಟ್‌ಗೆ 245 ರನ್‌ಗಳ ಸ್ಪರ್ಧಾತ್ಮಕ ಮೊತ್ತವನ್ನು ಕಲೆಹಾಕಲು ಯಶಸ್ವಿಯಾಯಿತು.

World Cup 2023: Netherlands Become the First and Only non-Test team to beat South Africa In T20, ODI

ಸ್ಕಾಟ್ ಎಡ್ವರ್ಡ್ಸ್ ನಿರ್ಣಾಯಕ ನಾಯಕನ ಇನ್ನಿಂಗ್ಸ್ ಆಡಿದರು, 21ನೇ ಓವರ್‌ನಲ್ಲಿ 5 ವಿಕೆಟ್ ಕಳೆದುಕೊಂಡು 82 ರನ್‌ಗಳಿಗೆ ಹೆಣಗಾಡುತ್ತಿದ್ದ ನೆದರ್ಲ್ಯಾಂಡ್ಸ್ ತಂಡವನ್ನು ರಕ್ಷಿಸಲು ಸ್ಕಾಟ್ ಎಡ್ವರ್ಡ್ಸ್ ಅಜೇಯ 78 ರನ್‌ ಬಾರಿಸಿದರು.

ಸವಾಲಿನ ಮೊತ್ತದ ಚೇಸಿಂಗ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡದ ಬ್ಯಾಟಿಂಗ್ ವಿಭಾಗ ಕೂಡ ಕುಸಿತವನ್ನು ಅನುಭವಿಸಿತು. ಅಂತಿಮವಾಗಿ ಅವರು 207 ರನ್‌ಗಳಿಗೆ ಆಲೌಟ್ ಆಗಬೇಕಾಯಿತು. ಇದು ಈ ಐಸಿಸಿ ಪಂದ್ಯಾವಳಿಯಲ್ಲಿ ಅವರ ಮೊದಲ ಸೋಲಿಗೆ ಕಾರಣವಾಯಿತು.

ಡೇವಿಡ್ ಮಿಲ್ಲರ್ ಮಾತ್ರ 43 ರನ್‌ಗಳ ದೊಡ್ಡ ಕೊಡುಗೆ ನೀಡಿದರು. ಆದರೆ 31ನೇ ಓವರ್‌ನಲ್ಲಿ ಅವರ ವಿಕೆಟ್ ಬೀಳುತ್ತಿದ್ದಂತೆಂಯೇ ದಕ್ಷಿಣ ಆಫ್ರಿಕಾದ ಸೋಲು ಬಹುತೇಕ ಖಚಿತವಾಯಿತು.

ನೆದರ್ಲ್ಯಾಂಡ್ಸ್ ತಂಡದ ಇನ್ನಿಂಗ್ಸ್‌ನಲ್ಲಿ ಸ್ಕಾಟ್ ಎಡ್ವರ್ಡ್ಸ್ ಬ್ಯಾಟಿಂಗ್‌ಗೆ ಬಂದಿದ್ದೇ ಈ ಆಟದ ಮಹತ್ವದ ತಿರುವು. ನೆದರ್ಲ್ಯಾಂಡ್ಸ್ 200 ರನ್‌ಗಳ ಒಳಗೆ ಸರ್ವಪತನ ಕಾಣಲು ಸಿದ್ಧವಾಗಿತ್ತು. ಆದರೆ ನಾಯಕನ ಆಲೋಚನೆಗಳು ಉಳಿದೆಲ್ಲರ ಆಲೋಚನೆಗಳನ್ನು ತಲೆಕೆಳಗೆ ಮಾಡಿದರು.

ಸ್ಕಾಟ್ ಎಡ್ವರ್ಡ್ಸ್ ಮತ್ತು ನೆದರ್ಲ್ಯಾಂಡ್ಸ್‌ನ ಕೆಳ ಕ್ರಮಾಂಕದ ಬ್ಯಾಟರ್‌ಗಳು ಅಂತಿಮ 10 ಓವರ್‌ಗಳಲ್ಲಿ ಸ್ಪರ್ಧಾತ್ಮಕ ರನ್ ಕಲೆಹಾಕಲು ಬರೋಬ್ಬರಿ 109 ರನ್ ಸೇರಿಸಿದರು.

ಇದು ನೆದರ್ಲ್ಯಾಂಡ್ಸ್ ತಂಡಕ್ಕೆ ಗೆಲುವಿನ ಹುಮ್ಮಸ್ಸು ನೀಡಿತು. ನಂತರ ಅವರು ಬೌಲಿಂಗ್‌ನಲ್ಲಿಯೂ ತಿರುಗಿ ಬಿದ್ದರು. ತಾವು ಗೆಲ್ಲಲು ನೆದರ್ಲ್ಯಾಂಡ್ಸ್ ಸ್ಪಿನ್ ವಿಭಾಗವನ್ನು ಪ್ರಮುಖವಾಗಿ ಇರಿಸಿತು ಮತ್ತು ಕ್ವಿಂಟನ್ ಡಿ ಕಾಕ್ ಔಟ್ ಆದ ನಂತರ, ಒಂದರ ಹಿಂದೆ ಒಂದು ವಿಕೆಟ್ ಕಳೆದುಕೊಂಡಿತು. ನೆದರ್ಲ್ಯಾಂಡ್ಸ್ ತಂಡದ ಎಲ್ಲ ಬೌಲರ್‌ಗಳು ಗಮನಾರ್ಹ ಪ್ರದರ್ಶನ ನೀಡಿ ಅಗತ್ಯಕ್ಕೆ ತಕ್ಕಂತೆ ವಿಕೆಟ್ ಪಡೆದುಕೊಂಡರು.

Story first published: Wednesday, October 18, 2023, 8:06 [IST]
Other articles published on Oct 18, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+