World Cup 2023: ವಿಶ್ವಕಪ್‌ಗೂ ಮುನ್ನ ಏಷ್ಯಾದ ತಂಡಗಳಿಗೆ ಈ ಸವಾಲು ಹಾಕಿದ ಡಚ್ಚರು
ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಭಾರತದಲ್ಲಿ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ದಿನಗಣನೆ ಆರಂಭವಾಗಿದ್ದು, ಈಗಾಗಲೇ ಜೂನ್ 27ರಂದು ವಿಶ್ವಕಪ್‌ನ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅಕ್ಟೋಬರ್ 5ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಸೆಣಸಾಡಲಿವೆ.

ಭಾರತದಲ್ಲಿಯೇ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ನೆದರ್ಲ್ಯಾಂಡ್ಸ್ ಮತ್ತು ಶ್ರೀಲಂಕಾ ತಂಡಗಳು ಕೊನೆಯ ಎರಡು ಸ್ಥಾನಗಳಿಗೆ ಅರ್ಹತೆ ಪಡೆದಿವೆ. ಇದೀಗ ನೆದರ್ಲ್ಯಾಂಡ್ಸ್ ತಂಡದ ಕೋಚ್ ರಿಯಾನ್ ಕುಕ್ ಅವರು ವಿಶ್ವಕಪ್‌ಗೂ ಮುನ್ನ ಉಪಖಂಡದ ತಂಡಗಳಿಗೆ ವಿಶೇಷ ಸವಾಲು ಹಾಗೂ ವಿನಂತಿ ನೀಡಿದ್ದಾರೆ.
ರಿಯಾನ್ ಕುಕ್ ಬಹಿರಂಗವಾಗಿ ಏಷ್ಯಾದ ಕ್ರಿಕೆಟ್ ಮಂಡಳಿಗಳಿಗೆ ಮನವಿ ಮಾಡಿದ್ದು, "ವಿಶ್ವಕಪ್‌ಗೂ ಮುನ್ನ ನೆದರ್ಲ್ಯಾಂಡ್ಸ್ ತಂಡದ ವಿರುದ್ಧ ಒಂದು ಪಂದ್ಯ ಅಥವಾ ಎರಡು ಪಂದ್ಯಗಳನ್ನು ಆಡಲು ನಾನು ಅವರನ್ನು ಕೇಳಲು ಬಯಸುತ್ತೇನೆ. ಏಷ್ಯಾದಲ್ಲಿ ಕ್ರಿಕೆಟ್ ಆಡಲು ನಮಗೆ ಹೆಚ್ಚಿನ ಅವಕಾಶಗಳು ಸಿಕ್ಕಿಲ್ಲ," ಎಂದು ಹೇಳಿದ್ದಾರೆ.
ನಮ್ಮ ಕೋಚ್ ಏಷ್ಯಾ ಕ್ರಿಕೆಟ್ ಕ್ರಿಕೆಟ್ ಸಮುದಾಯಕ್ಕೆ ಒಂದು ಪ್ರಮುಖ ಸಂದೇಶವನ್ನು ತಿಳಿಸಿದ್ದಾರೆ. ಅದು ಕಳೆದ ಕೆಲವು ವಾರಗಳಲ್ಲಿ ನಾವು ತಂಡವಾಗಿ ಏನು ಸಮರ್ಥವಾಗಿ ಸಾಧಿಸಿದ್ದೇವೆ ಎಂಬುದನ್ನು ತೋರಿಸುತ್ತದೆ ಎಂದು ಕ್ರಿಕೆಟ್ ನೆದರ್ಲ್ಯಾಂಡ್ಸ್ ಟ್ವೀಟ್ ಮಾಡಿದೆ.
ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗಾಗಿ ಜಿಂಬಾಬ್ವೆಯಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ವಿಶ್ವಕಪ್ ಅರ್ಹತಾ ಪಂದ್ಯಗಳಲ್ಲಿ ರನ್ನರ್ ಅಪ್ ಸ್ಥಾನ ಪಡೆದ ನಂತರ ನೆದರ್ಲ್ಯಾಂಡ್ಸ್ ತಂಡವು ಮುಖ್ಯ ಟೂರ್ನಿಯಲ್ಲಿ ಸ್ಥಾನ ಗಿಟ್ಟಿಸಿತು.
ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಸಮಯದಲ್ಲಿ ಡಚ್ಚರ ತಂಡವು ಉಪಖಂಡದ ಪರಿಸ್ಥಿತಿಗಳಲ್ಲಿ ವಿಶ್ವದ ಅಗ್ರ ಒಂಬತ್ತು ತಂಡಗಳನ್ನು ಎದುರಿಸಲಿದೆ. ವಿಶ್ವಕಪ್‌ಗಾಗಿ ತಮ್ಮ ಆಟಗಾರರು ಉತ್ತಮವಾಗಿ ಸಿದ್ಧರಾಗಿದ್ದಾರೆ ಎಂದು ಕ್ವಾಲಿಫೈಯರ್‌ಗಳ ನಂತರ ಕೋಚ್ ರಿಯಾನ್ ಕುಕ್ ಪತ್ರಿಕಾಗೋಷ್ಠಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
"ಜೂನ್ 2021ರಿಂದ ನೆದರ್ಲ್ಯಾಂಡ್ಸ್ ತಂಡವು ಎಂಟು ಏಕದಿನ ಸರಣಿಗಳಲ್ಲಿ ಆಡಿದೆ. ಆದರೆ ಅವುಗಳಲ್ಲಿ ಹೆಚ್ಚಿನವು ಏಷ್ಯಾದ ಹೊರಗೆ ನಡೆದಿವೆ. ನಮಗೆ ಆತಿಥ್ಯ ವಹಿಸಿದ ಏಷ್ಯಾದ ಏಕೈಕ ತಂಡವೆಂದರೆ ಅಫ್ಘಾನಿಸ್ತಾನ. ನಾವು ಜನವರಿ 2022ರಲ್ಲಿ ದೋಹಾದಲ್ಲಿ ಮೂರು ಏಕದಿನ ಪಂದ್ಯಗಳನ್ನು ಆಡಿದ್ದೇವೆ," ಎಂದು ಕೋಚ್ ರಿಯಾನ್ ಕುಕ್ ತಿಳಿಸಿದರು.
ಹೆಚ್ಚುವರಿಯಾಗಿ, ನೆದರ್ಲ್ಯಾಂಡ್ಸ್ ತಂಡಕ್ಕೆ ಆತಿಥ್ಯ ವಹಿಸಲು ಮಂಡಳಿಗಳಿಗೆ ಆಹ್ವಾನವನ್ನು ನೀಡಿದರು. 2023ರ ಐಸಿಸಿ ಏಕದಿನ ವಿಶ್ವಕಪ್ ಈ ವರ್ಷದ ಅತಿ ಹೆಚ್ಚು ವೀಕ್ಷಿಸುವ ಕ್ರೀಡಾಕೂಟಗಳಲ್ಲಿ ಒಂದಾಗಿದೆ ಎಂದ ಕೋಚ್ ರಯಾನ್ ಕುಕ್, ಏಷ್ಯಾದ ತಂಡಗಳು ಮುಂದೆ ಬಂದು ತಮ್ಮ ತಂಡವನ್ನು ಬೆಂಬಲಿಸಲು ಕೋರಿದರು.
ಯಾವ ತಂಡಗಳು ನೆದರ್ಲ್ಯಾಂಡ್ಸ್ ತಂಡವನ್ನು ಸರಣಿಗೆ ಆಹ್ವಾನ ನೀಡುತ್ತವೆ ಎಂಬುದನ್ನು ಕಾದು ನೋಡಬೇಕಿದೆ. ಭಾರತ ತಂಡದ ತುಂಬಿದ ವೇಳಾಪಟ್ಟಿಯನ್ನು ಪರಿಗಣಿಸಿದರೆ, ನೆದರ್ಲ್ಯಾಂಡ್ಸ್ ತಂಡಕ್ಕೆ ವಿಶ್ವಕಪ್‌ಗಿಂತ ಮುನ್ನ ಭಾರತದಲ್ಲಿ ಯಾವುದೇ ಏಕದಿನ ಪಂದ್ಯಗಳನ್ನು ಆಡಲು ಅವಕಾಶವಿರುವುದು ಅಸಾಧ್ಯವೆನಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications