For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌ ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ಗೆ ದೊಡ್ಡ ಹೊಡೆತ

By ನಾಗೇಶ್

ಭಾರತದಲ್ಲಿ ವಿಶ್ವಕಪ್‌ ಏಕದಿನ ಟೂರ್ನಿಯ ಜ್ವರ ಆರಂಭವಾಗಿದೆ. ಈಗಗಲೇ ಅಭ್ಯಾಸ ಪಂದ್ಯಗಳು ಆರಂಭವಾಗಿವೆ. ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ 2023ರ ಏಕದಿನ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಕಣಕ್ಕೆ ಇಳಿಯುವುದಿಲ್ಲ.

2019ರ ಏಕದಿನ ವಿಶ್ವಕಪ್‌ ನ ರನ್ನರ್‌ ಅಪ್‌ ನ್ಯೂಜಿಲೆಂಡ್ ತಂಡ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ತಂಡವನ್ನು ಅಕ್ಟೋಬರ್‌ 5 ರಂದು ಆಡಲಿದೆ. ಈ ಪಂದ್ಯದ ಮೂಲಕ ವಿಶ್ವಕಪ್‌ ಗೆ ಚಾಲನೆ ಸಿಗಲಿದೆ.

World Cup 2023, New Zealand Skipper Most Unlikely To Play Inguaral Match Against England

ಕೇನ್ ವಿಲಿಯಮ್ಸನ್ ಗಾಯದಿಂದ ಚೇತರಿಸಿಕೊಂಡಿದ್ದು, ಇನ್ನು ಫಿಟ್ ಆಗಿಲ್ಲ ಹೀಗಾಗಿ ಇಂಗ್ಲೆಂಡ್ ವಿರುದ್ಧ ಆಡುವುದಿಲ್ಲ ಎಂದು ಕಿವೀಸ್ ತಂಡದ ಪ್ರಮುಖ ಕ್ಯಾಚರ್ ಗ್ಯಾರಿ ಸ್ಟೆಡ್ ಮಾಹಿತಿ ನೀಡಿದ್ದಾರೆ. ಆದರೆ, ಅದಕ್ಕೂ ಮುನ್ನ ಅಭ್ಯಾಸ ಪಂದ್ಯಗಳಲ್ಲಿ ಮೈದಾನದಲ್ಲಿ ಕಾಣಿಸಿಕೊಂಡರು.

ವಿಶ್ವಕಪ್‌ಗೂ ಮುನ್ನ ನ್ಯೂಜಿಲೆಂಡ್ 2 ಅಭ್ಯಾಸ ಪಂದ್ಯಗಳನ್ನು ಆಡಬೇಕಿದೆ. ತಂಡವು ಶುಕ್ರವಾರ ಹೈದರಾಬಾದ್‌ನಲ್ಲಿ ಪಾಕಿಸ್ತಾನದ ವಿರುದ್ಧ ತನ್ನ ಮೊದಲ ಅಭ್ಯಾಸ ಪಂದ್ಯವನ್ನು ಆಡಿದೆ, ಇದರಲ್ಲಿ ವಿಲಿಯಮ್ಸನ್ ಬ್ಯಾಟಿಂಗ್ ಮಾಡುವಾಗ ಮಾತ್ರ ಕಾಣಿಸಿಕೊಂಡಿದ್ದಾರೆ. ನ್ಯೂಜಿಲೆಂಡ್ ಸೋಮವಾರ (ಅಕ್ಟೋಬರ್ 2) ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಅಭ್ಯಾಸ ಪಂದ್ಯವನ್ನು ಆಡಬೇಕಿದೆ, ಇದರಲ್ಲಿ ವಿಲಿಯಮ್ಸನ್ ಫೀಲ್ಡಿಂಗ್ ಮಾಡಲಿದ್ದಾರೆ.

IPL 2023 ರ ಮೊದಲ ಪಂದ್ಯ

IPL 2023 ರ ಮೊದಲ ಪಂದ್ಯದಲ್ಲಿ (31 ಮಾರ್ಚ್ 2023), ವಿಲಿಯಮ್ಸನ್ ಅವರು ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ಬೌಂಡರಿ ಲೈನ್‌ನಲ್ಲಿ ಕ್ಯಾಚ್ ಹಿಡಿಯಲು ಪ್ರಯತ್ನಿಸಿದಾಗ ಗಾಯಗೊಂಡಿದ್ದರು, ಅವರ ಬಲ ಮೊಣಕಾಲಿಗೆ ಗಾಯವಾಗಿತ್ತು.

ಇದಾದ ಬಳಿಕ ಅವರು ಸಂಪೂರ್ಣ ಲೀಗ್‌ನಿಂದಲೇ ಹೊರಬಿದ್ದರು. ಲೀಗ್‌ನಿಂದ ಹೊರಗುಳಿದ ನಂತರ, ವಿಲಿಯಮ್ಸನ್ ನ್ಯೂಜಿಲೆಂಡ್‌ಗೆ ಮರಳಿದರು ಮತ್ತು ಏಪ್ರಿಲ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದರು. ಐಪಿಎಲ್‌ನ ಈ ಋತುವಿನಲ್ಲಿ ಅವರು ಗುಜರಾತ್ ಟೈಟಾನ್ಸ್ ತಂಡದ ಭಾಗವಾಗಿದ್ದರು.

46 ದಿನಗಳ ಕಾಲ ಭಾರತದಲ್ಲಿ ODI ವರ್ಲ್ಡ್ ಕಪ್

ಅಕ್ಟೋಬರ್-ನವೆಂಬರ್‌ನಲ್ಲಿ 46 ದಿನಗಳ ಕಾಲ ಭಾರತದಲ್ಲಿ ODI ವರ್ಲ್ಡ್ ಕಪ್ ನಡೆಯಲಿದ್ದು, ಇದರಲ್ಲಿ 48 ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯ ಅಕ್ಟೋಬರ್ 5 ರಂದು ಅಹಮದಾಬಾದ್‌ನಲ್ಲಿ ಕಳೆದ ವಿಶ್ವಕಪ್‌ನ ವಿಜೇತ ಮತ್ತು ರನ್ನರ್ ಅಪ್, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿದೆ.

ನವೆಂಬರ್ 12ರವರೆಗೆ ಲೀಗ್ ಹಂತದ 45 ಪಂದ್ಯಗಳು ನಡೆಯಲಿವೆ. ನವೆಂಬರ್ 15 ಮತ್ತು 16 ರಂದು ಎರಡು ಸೆಮಿಫೈನಲ್ ಪಂದ್ಯಗಳು ನಡೆಯಲಿದ್ದು, ನವೆಂಬರ್ 19 ರಂದು ಅಹಮದಾಬಾದ್‌ನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಅಹಮದಾಬಾದ್‌ನಲ್ಲಿ ಅಕ್ಟೋಬರ್ 5 ರಂದು ನಡೆಯಲಿರುವ ಪಂದ್ಯದೊಂದಿಗೆ ವಿಶ್ವಕಪ್‌ನ ಪ್ರಸಕ್ತ ಋತುವು ಆರಂಭವಾಗಲಿದೆ.

Story first published: Saturday, September 30, 2023, 10:36 [IST]
Other articles published on Sep 30, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+