ವಿರಾಟ್‌ಗಿಂತಲೂ ಹೆಚ್ಚು ಅಪಾಯಕಾರಿ ಟೀಮ್ ಇಂಡಿಯಾದ ಈ ಬ್ಯಾಟರ್: ಇಲ್ಲಿದೆ ಅಂಕಿ ಅಂಶ
ಪ್ರಸಕ್ತ ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾ ಅಮೋಘ ಪ್ರದರ್ಶನ ನೀಡುತ್ತಿದೆ. ಆಡಿದ ಎಂಟು ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಮೊದಲ ಸ್ಥಾನದೊಂದಿಗೆ, 2023ರ ವಿಶ್ವಕಪ್‌ನ ಸೆಮಿಫೈನಲ್ ಗೆ ಪ್ರವೇಶ ಪಡೆದಿದೆ. ಈ ಬಾರಿಯ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಸಂಘಟಿತ ಆಟ ಎದ್ದು ಕಾಣುತ್ತಿದೆ. ಅಲ್ಲದೆ ಸೆಮಿಫೈನಲ್ ಪ್ರವೇಶಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಲೀಗ್ ಹಂತದಲ್ಲಿ ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಪಾಕಿಸ್ತಾನ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ, ನ್ಯೂಜಿಲೆಂಡ್ ವಿರುದ್ಧ ಗೆದ್ದು ಬೀಗಿದೆ.
ಈ ಬಾರಿಯ ವಿಶ್ವಕಪ್ ನ್ನು ನೋಡೋದಾದರೆ ಆರಂಭದಲ್ಲಿ ಭಾರತ ಚೇಸಿಂಗ್ ಮಾಡಿ ಗೆದ್ದರೆ, ನಂತರ ಟಾರ್ಗೆಟ್ ಡಿಫೆಂಡ್ ಮಾಡಿಕೊಂಡು ಸೈ ಎನಿಸಿದೆ. ಈ ಪ್ರಯತ್ನದಲ್ಲಿ ಬ್ಯಾಟರ್ ಹಾಗೂ ಬೌಲರ್ ಗಳ ಪಾತ್ರ ಮುಖ್ಯ. ಅದರಲ್ಲೂ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಭರ್ಜರಿ ಫಾರ್ಮ್ ನಲ್ಲಿದ್ದಾರೆ. ಕೊಹ್ಲಿ ಪ್ರಸಕ್ತ ಟೂರ್ನಿಯಲ್ಲಿ ಅಪ್ ಡೇಟ್ ವರ್ಷನಲ್ಲೇ ಕಾಣಿಸಿಕೊಂಡಿದ್ದಾರೆ.

ಕೊಹ್ಲಿ ಟೂರ್ನಿಯಲ್ಲಿ ಗರಿಷ್ಠ ರನ್ ಸ್ಕೋರ್ ಮಾಡಿದ್ದಾರೆ ನಿಜ.. ಆದರೆ ಇದಕ್ಕೆ ಪೂರಕ ವೇದಿಕೆ ಹಾಕಿಕೊಡುವಳ್ಳಿ ಯಶಸ್ವಿಯಾಗಿದ್ದು ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ. ರೋಹಿತ್ ಶರ್ಮಾ ಆರಂಭಿಕರಾಗಿ ಬಂದು ಎದುರಾಳಿ ತಂಡದ ಬೌಲರ್‌ಗಳನ್ನು ಕಾಡಿದ್ದಾರೆ. ಅಲ್ಲದೆ ತಂಡವನ್ನು ಪವರ್ ಪ್ಲೇನಲ್ಲಿ ಪವರ್ ಫುಲ್ ಹಂತಕ್ಕೆ ನಿಲ್ಲಿಸುವಲ್ಲಿ ಸಫಲರಾಗಿದ್ದಾರೆ. ರೋಹಿತ್ 8 ಪಂದ್ಯಗಳಲ್ಲಿ 55.25ರ ಸರಾಸರಿಯಲ್ಲಿ 442 ರನ್ ಕಲೆ ಹಾಕಿದ್ದಾರೆ. ಆದರೆ ಭಾರತದ ಪರ ಟೂರ್ನಿಯಲ್ಲಿ ಗರಿಷ್ಠ ರನ್ ಕಲೆ ಹಾಕಿದ ಕೀರ್ತಿ ವಿರಾಟ್ ಕೊಹ್ಲಿಗೆ ಸಲ್ಲುಯತ್ತದೆ. ಇವರು 543 ರನ್ ಕಲೆ ಹಾಕಿದ್ದಾರೆ.
ರೋಹಿತ್ ಈ ಬಾರಿಯ ವಿಶ್ವಕಪ್ ನಲ್ಲಿ 2.0 ರೀತಿ ಕಾಣಿಸಿಕೊಂಡಿದ್ದಾರೆ. ಇವರ ಸ್ಟ್ರೈಕ್ ರೇಟ್ ಅಮೋಘವಾಗಿದೆ. 122.77ರ ಸ್ಟ್ರೈಕ್ ರೇಟ್ ಹೊಂದಿರುವ ರೋಹಿತ್, 1 ಶತಕ ಹಾಗೂ 2 ಅರ್ಧಶತಕ ಸಿಡಿಸಿದ್ದಾರೆ. ಈ ಬಾರಿಯ ವಿಶ್ವಕಪ್ ನಲ್ಲಿ ರೋಹಿತ್ ಪಾಕ್ ವಿರುದ್ಧ 86, ಇಂಗ್ಲೆಂಡ್ ವಿರುದ್ಧ 87, ಬಾಂಗ್ಲಾ ವಿರುದ್ಧ 48, ನ್ಯೂಜಿಲೆಂಡ್ ವಿರುದ್ಧ 46 ಹಾಗೂ ಸೌತ್ ಆಫ್ರಿಕಾ ವಿರುದ್ಧ 40 ರನ್ ಸಿಡಿಸಿದ್ದಾರೆ.
ಟೀಮ್ ಇಂಡಿಯಾದ ನಾಯಕ ಸ್ಪೋಟಕ ಬ್ಯಾಟಿಂಗ್ ಕಾರಣದಿಂದಲೇ ತಂಡ ಮಿಡ್ಲ್ ಓವರ್ ನಲ್ಲೂ ರನ್ ಸರಾಸರಿಯನ್ನು ಕಾಯ್ದುಕೊಳ್ಳುವಲ್ಲಿ ಸಫಲವಾಗಿದೆ. ರೋಹಿತ್ ಆಸೀಸ್ ವಿರುದ್ಧ 0, ಶ್ರೀಲಂಕಾ ವಿರುದ್ಧ 4 ರನ್ ಬಾರಿಸಿ ನಿರಾಸೆ ಅನುಭವಿಸಿದ್ದಾರೆ.
ಈ ಮೇಲಿನ ಅಂಕಿಅಂಶಗಳನ್ನು ನೋಡಿದರೆ, ಟೀಮ್ ಇಂಡಿಯಾ ಗೆಲುವಿನಲ್ಲಿ ರೋಹಿತ್ ಕೊಡುಗೆ ಅಪಾರ ಎನ್ನುವುದು ಸ್ಪಷ್ಟವಾಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications