For Quick Alerts
ALLOW NOTIFICATIONS  
For Daily Alerts
 

World Cup 2023: ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯ ಚೆನ್ನೈ ಬದಲು ಇಲ್ಲಿಗೆ ಸ್ಥಳಾಂತರ?; ಕಾರಣವೇನು?

2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಇನ್ನು ಕೇವಲ 100 ದಿನಗಳು ಮಾತ್ರ ಬಾಕಿ ಉಳಿದಿದ್ದು, ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಭಾರತದಲ್ಲಿಯೇ ಸಂಪೂರ್ಣ ಟೂರ್ನಿ ಆಯೋಜನೆಯಾಗಲಿದೆ.

ಆದರೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಇನ್ನೂ ಪಂದ್ಯಗಳಿಗೆ ಸ್ಥಳಗಳನ್ನು ಅಂತಿಮಗೊಳಿಸುತ್ತಿರುವುದರಿಂದ ಪಂದ್ಯಾವಳಿಯ ಸಂಪೂರ್ಣ ವೇಳಾಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ.

World Cup 2023: ODI World Cup Semi-final Match Shifted To Kolkata Instead of Chennai; Why?

ಕೆಲವು ವರದಿಗಳ ಪ್ರಕಾರ, ಐಸಿಸಿ ಪಂದ್ಯಾವಳಿಯ ಸಂಪೂರ್ಣ ವೇಳಾಪಟ್ಟಿಯನ್ನು ಮಂಗಳವಾರ, ಜೂನ್ 27ರಂದು ಪ್ರಕಟಿಸಲಾಗುವುದು ಮತ್ತು ಈ ಮೊದಲು ಹಂಚಿಕೊಂಡ ಕರಡು ವೇಳಾಪಟ್ಟಿಯಿಂದ ಕೆಲವು ಬದಲಾವಣೆಗಳನ್ನು ನಿರೀಕ್ಷಿಸಬಹುದಾಗಿದೆ.

ಇನ್ನು ಮತ್ತೊಂದು ವರದಿಯ ಪ್ರಕಾರ, 2023ರ ವಿಶ್ವಕಪ್ ಪಂದ್ಯಾವಳಿಯ ಒಂದು ಸೆಮಿಫೈನಲ್ ಪಂದ್ಯವನ್ನು ಕೋಲ್ಕತ್ತಾದ ಐತಿಹಾಸಿಕ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಗಮನಿಸಬೇಕಾದ ಅಂಶವೆಂದರೆ, 2011ರ ಏಕದಿನ ವಿಶ್ವಕಪ್‌ ಸಮಯದಲ್ಲಿ ಈ ಮೈದಾನವು ಒಂದೇ ಒಂದು ಪಂದ್ಯವನ್ನು ಆಯೋಜಿಸಲು ಸಾಧ್ಯವಾಗಲಿಲ್ಲ. ಏಕೆಂದರೆ ಕೆಲವು ನವೀಕರಣ ಕಾರ್ಯಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ.

World Cup 2023: ODI World Cup Semi-final Match Shifted To Kolkata Instead of Chennai; Why?

ಇದಕ್ಕೂ ಮುನ್ನ ಮುಂಬೈನ ವಾಂಖೆಡೆ ಮತ್ತು ಚೆನ್ನೈನ ಚೆಪಾಕ್ ಕ್ರೀಡಾಂಗಣಗಳು ವಿಶ್ವಕಪ್‌ನ ನಾಲ್ಕರ ಘಟ್ಟದ ಪಂದ್ಯಗಳಿಗೆ ಆತಿಥ್ಯ ವಹಿಸುವ ಸಾಲಿನಲ್ಲಿದ್ದವು. ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ಕೂಡ ಒಂದು ಆಯ್ಕೆ ಎಂದು ಪರಿಗಣಿಸಲಾಗಿತ್ತು.

ಕ್ರಿಕ್‌ಬಜ್ ವರದಿಯ ಪ್ರಕಾರ, ಮುಂಬೈ ಮತ್ತು ಚೆನ್ನೈ ಜೊತೆಗೆ ಕೋಲ್ಕತ್ತಾ ಕೂಡ ಮತ್ತೊಂದು ಆಯ್ಕೆಯಾಗಿ ಹೊರಹೊಮ್ಮಿದೆ. 13ನೇ ಆವೃತ್ತಿಯ ಐಸಿಸಿ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯಗಳಿಗೆ ಕೋಲ್ಕತ್ತಾ ಮತ್ತು ಮುಂಬೈ ಆತಿಥ್ಯ ವಹಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಸೋಮವಾರ, ಜೂನ್ 26ರಂದು ಬಿಸಿಸಿಐ ಮತ್ತು ಐಸಿಸಿ ಅಧಿಕಾರಿಗಳೊಂದಿಗೆ ಆತಿಥೇಯ ನಗರಗಳ ರಾಜ್ಯ ಅಸೋಸಿಯೇಷನ್‌ಗಳ ಸಭೆಯಲ್ಲಿ ಈಡನ್ ಗಾರ್ಡನ್ಸ್ ಮೈದಾನಕ್ಕೆ ಸೆಮಿಫೈನಲ್ ಪಂದ್ಯವನ್ನು ನಿಗದಿಪಡಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ವೇಳೆ 12 ಅಸೋಸಿಯೇಷನ್‌ಗಳು ಸಭೆಯಲ್ಲಿ ಭಾಗವಹಿಸಿದ್ದವು.

ಸೆಮಿಫೈನಲ್ ಪಂದ್ಯವನ್ನು ಚೆನ್ನೈನಿಂದ ಕೋಲ್ಕತ್ತಾಗೆ ಸ್ಥಳಾಂತರಗೊಳಿಸಲು ಒಂದು ಕಾರಣವೆನೆಂದರೆ, ಅಕ್ಟೋಬರ್-ನವೆಂಬರ್‌ನಲ್ಲಿ ತಮಿಳುನಾಡಿನಲ್ಲಿನ ಹವಾಮಾನ ಪರಿಸ್ಥಿತಿಗಳು. ಆ ಸಮಯದಲ್ಲಿ ಚೆನ್ನೈನಲ್ಲಿ ಈಶಾನ್ಯ ಮಾನ್ಸೂನ್ ಅಪ್ಪಳಿಸುತ್ತವೆ. ಆದ್ದರಿಂದ ಬಿಸಿಸಿಐ ಮತ್ತು ಐಸಿಸಿ ಇದು ನಾಕೌಟ್ ಪಂದ್ಯವೆಂದು ಎಂದು ಪರಿಗಣಿಸಿ ಯಾವುದೇ ಅಪಾಯವನ್ನು ತೆಗೆದುಕೊಳ್ಳಲು ಬಯಸದೆ, ಸ್ಥಳಾಂತರಗೊಳಿಸಲು ನಿರ್ಧರಿಸಿದವು.

ಅಹಮದಾಬಾದ್‌ನಲ್ಲಿ ಉದ್ಘಾಟನಾ ಪಂದ್ಯ, ಭಾರತ vs ಪಾಕಿಸ್ತಾನ, ಫೈನಲ್ ಪಂದ್ಯ
ಇದಕ್ಕೂ ಮೊದಲು ತಮಿಳುನಾಡು ಕ್ರಿಕೆಟ್ ಸಂಸ್ಥೆ (ಟಿಎನ್‌ಸಿಎ) ಕೆಲವು ವಿಶ್ವಕಪ್ ಲೀಗ್ ಪಂದ್ಯಗಳನ್ನು ಆಯೋಜಿಸಲಿದೆ. ಮುಂಬೈನಲ್ಲಿ ನಡೆದ ಐಸಿಸಿ ಮತ್ತು ಬಿಸಿಸಿಐ ಜತೆಗಿನ ಸಭೆಯಲ್ಲಿ ರಾಜ್ಯ ಮಂಡಳಿಯ ಪ್ರತಿನಿಧಿಗಳು ಉಪಸ್ಥಿತರಿದ್ದರು. ಸಭೆಯಲ್ಲಿ ಅಸೋಸಿಯೇಷನ್‌ಗಳಿಗೆ ಆತಿಥೇಯ ನಿರೀಕ್ಷಿತ ಕಾರ್ಯಚಟುವಟಿಕೆಗಳನ್ನು ವಿವರಿಸಲಾಗಿದೆ.

ಕರಡು ವೇಳಾಪಟ್ಟಿಯ ಪ್ರಕಾರ, 2023ರ ಐಸಿಸಿ ಏಕದಿನ ವಿಶ್ವಕಪ್‌ನ ಉದ್ಘಾಟನಾ ಪಂದ್ಯ ಅಕ್ಟೋಬರ್ 5ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದೊಂದಿಗೆ ಚಾಲನೆ ಸಿಗಲಿದೆ. ಬಹು ನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಹಾಗೂ ಫೈನಲ್‌ ಅಹಮದಾಬಾದ್‌ ಮೈದಾನ ಆತಿಥ್ಯ ವಹಿಸಲಿದೆ.

Story first published: Tuesday, June 27, 2023, 8:57 [IST]
Other articles published on Jun 27, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+