Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ICC World Cup 2023 Qualifiers: ಸ್ಕಾಟ್ಲೆಂಡ್ ವಿರುದ್ಧ ಗೆದ್ದು ವಿಶ್ವಕಪ್‌ಗೆ ಅರ್ಹತೆ ಪಡೆದ ನೆದರ್ಲ್ಯಾಂಡ್ಸ್

ಗುರುವಾರ, ಜುಲೈ 6ರಂದು ಬುಲವಾಯೊದ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ 2023ರ ಐಸಿಸಿ ವಿಶ್ವಕಪ್ ಕ್ವಾಲಿಫೈಯರ್ಸ್ ಸೂಪರ್ 6 ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ತಂಡವು ಸ್ಕಾಟ್ಲೆಂಡ್ ವಿರುದ್ಧ 4 ವಿಕೆಟ್‌ಗಳ ಗೆಲುವು ಸಾಧಿಸಿತು.

ಈ ಮೂಲಕ ನೆದರ್ಲ್ಯಾಂಡ್ಸ್ ತಂಡ 2023ರ ಅಕ್ಟೋಬರ್‌-ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್‌ಗೆ ಅರ್ಹತೆ ಪಡೆದ 10ನೇ ತಂಡವಾಯಿತು. ಇದಕ್ಕೂ ಮೊದಲು ಶ್ರೀಲಂಕಾ ತಂಡ ಅರ್ಹತೆ ಪಡೆದಿತ್ತು.

World Cup 2023 Qualifiers Super 6

ಮೊದಲು ಬ್ಯಾಟಿಂಗ್ ಮಾಡಿದ ಸ್ಕಾಟ್ಲೆಂಡ್ ತಂಡ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 277 ರನ್ ಕಲೆಹಾಕಿತು. ತಂಡದ ಪರ ಆರಂಭಿಕ ಕ್ರಿಸ್ಟೋಫರ್ ಮ್ಯಾಕ್‌ಬ್ರೈಡ್ 32 ರನ್ ಗಳಿಸಿದರೆ, ಬ್ರಾಂಡನ್ ಮ್ಯಾಕ್‌ಮುಲ್ಲನ್ 110 ಎಸೆತಗಳಲ್ಲಿ 11 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 106 ರನ್ ಬಾರಿಸಿದರು.

ನಾಯಕ ರಿಚಿ ಬ್ಯಾರಿಂಗ್ಟನ್ 84 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 64 ರನ್ ಗಳಿಸಿದರು. ಉಳಿದಂತೆ ಥಾಮಸ್ ಮ್ಯಾಕಿಂಟೋಶ್ 28 ಎಸೆತಗಳಲ್ಲಿ 5 ಬೌಂಡರಿ ಸಮೇತ 38 ರನ್ ಮತ್ತು ಕ್ರಿಸ್ ಗ್ರೀವ್ಸ್ 18 ರನ್ ಗಳಿಸಿ ತಂಡದ ಮೊತ್ತ 270ರ ಗಡಿ ದಾಟಲು ನೆರವಾದರು.

ನೆದರ್ಲ್ಯಾಂಡ್ಸ್ ತಂಡದ ಪರ ಬೌಲಿಂಗ್‌ನಲ್ಲಿ ಬಾಸ್ ಡಿ ಲೀಡೆ 10 ಓವರ್‌ಗಳಲ್ಲಿ 52 ರನ್ ನೀಡಿ 5 ವಿಕೆಟ್ ಪಡೆದು ಮಿಂಚಿದರು. ರ್ಯಾನ್ ಕ್ಲೇನ್ 10 ಓವರ್‌ಗಳಲ್ಲಿ 59 ರನ್ ನೀಡಿ 2 ವಿಕೆಟ್ ಪಡೆದರೆ, ವ್ಯಾನ್ ಬೀಕ್ 1 ವಿಕೆಟ್ ಪಡೆದರು.

ಬಳಿಕ ಸ್ಕಾಟ್ಲೆಂಡ್‌ ತಂಡದ ರನ್-ರೇಟ್ ಅನ್ನು ಸರಿದೂಗಿಸಲು ಮತ್ತು ವಿಶ್ವಕಪ್‌ಗೆ ಅರ್ಹತೆ ಪಡೆಯಲು ನೆದರ್ಲ್ಯಾಂಡ್ಸ್ ತಂಡ 44 ಓವರ್‌ಗಳಲ್ಲಿ ಗುರಿಯನ್ನು ಬೆನ್ನಟ್ಟಬೇಕಿತ್ತು.

ನೆದರ್ಲ್ಯಾಂಡ್ಸ್ 42.5 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 278 ರನ್ ಗಳಿಸಿ ಯಶಸ್ವಿಯಾಗಿ ಚೇಸ್ ಮಾಡಿದರು. ನೆದರ್ಲ್ಯಾಂಡ್ಸ್ ತಂಡದ ಪರ ಬಾಸ್ ಡಿ ಲೀಡೆ 92 ಎಸೆತಗಳಲ್ಲಿ 7 ಬೌಂಡರಿ ಮತ್ತು 5 ಸಿಕ್ಸರ್ ಸಮೇತ 123 ರನ್‌ಗಳ ಭರ್ಜರಿ ಶತಕ ಬಾರಿಸಿದರು.

ವಿಕ್ರಮ್‌ಜಿತ್ ಸಿಂಗ್ 49 ಎಸೆತಗಳಲ್ಲಿ 6 ಬೌಂಡರಿ ನೆರವಿನಿಂದ 40 ರನ್ ಗಳಿಸಿದರೆ, ಮ್ಯಾಕ್ಸ್ ಓಡೌ'ಡ್ 20 ರನ್, ಬರೆಸ್ಸಿ 11 ರನ್, ತೇಜ ನಿಡಮನುರು 10 ರನ್, ಸ್ಕಾಟ್ ಎಡ್ವರ್ಡ್ಸ್ 25 ರನ್, ಸಕಿಬ್ ಜುಲ್ಫಿಕರ್ 33 ರನ್ ಗಳಿಸಿ ತಂಡದ ಗೆಲುವಿಗೆ ನೆರವಾದರು.

ಸ್ಕಾಟ್ಲೆಂಡ್ ತಂಡದ ಪರ ಬೌಲಿಂಗ್‌ನಲ್ಲಿ ಮೈಕಲ್ ಲೀಸ್ಕ್ 2 ವಿಕೆಟ್ ಪಡೆದರೆ, ಮಾರ್ಕ್ ವ್ಯಾಟ್ ಮತ್ತು ಕ್ರಿಸ್ ಗ್ರೀವ್ಸ್ ತಲಾ ಒಂದೊಂದು ವಿಕೆಟ್ ಪಡೆದರು.

ಬ್ಯಾಟಿಂಗ್‌ನಲ್ಲಿ ಶತಕ ಮತ್ತು ಬೌಲಿಂಗ್‌ನಲ್ಲಿ 5 ವಿಕೆಟ್ ಪಡೆದ ಆಲ್‌ರೌಂಡ್ ಪ್ರದರ್ಶನ ನೀಡಿದ ನೆದರ್ಲ್ಯಾಂಡ್ಸ್ ತಂಡದ ಬಾಸ್ ಡಿ ಲೀಡೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಐಸಿಸಿ ಏಕದಿನ ವಿಶ್ವಕಪ್ ಅರ್ಹತಾ ಪಂದ್ಯಾವಳಿಯ ಆತಿಥೇಯ ತಂಡ ಜಿಂಬಾಬ್ವೆ ಮಂಗಳವಾರ ಸ್ಕಾಟ್ಲೆಂಡ್ ವಿರುದ್ಧ ಸೋತ ಬಳಿಕ ಅರ್ಹತೆ ಪಡೆಯುವ ದೊಡ್ಡ ಅವಕಾಶವನ್ನು ಕಳೆದುಕೊಂಡಿತು.

Story first published: Thursday, July 6, 2023, 20:25 [IST]
Other articles published on Jul 6, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+