For Quick Alerts
ALLOW NOTIFICATIONS  
For Daily Alerts
 

World Cup 2023 Qualifiers: ಸ್ಕಾಟ್ಲೆಂಡ್ ವಿರುದ್ಧ ಸೋತು ವಿಶ್ವಕಪ್‌ ರೇಸ್‌ನಿಂದ ಹೊರಬಿದ್ದ ಜಿಂಬಾಬ್ವೆ

ಮಂಗಳವಾರ, ಜುಲೈ 4ರಂದು ಬುಲವಾಯೊದ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್ ಕ್ವಾಲಿಫೈಯರ್‌ನ ಸೂಪರ್ 6 ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡದ ವಿರುದ್ಧ ಮುಖಭಂಗ ಅನುಭವಿಸಿದ ಜಿಂಬಾಬ್ವೆ ತಂಡ ವಿಶ್ವಕಪ್‌ ರೇಸ್‌ನಿಂದ ಹೊರಬಿದ್ದಿದೆ.

ಕಳೆದ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಆತಿಥೇಯ ಜಿಂಬಾಬ್ವೆ ತಂಡವು ಭಾರತದಲ್ಲಿ ನಡೆಯುವ 2023ರ ವಿಶ್ವಕಪ್ ಮುಖ್ಯ ಪಂದ್ಯಾವಳಿಗೆ ಅರ್ಹತೆ ಪಡೆಯಲಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ನಿರ್ಣಾಯಕ ಪಂದ್ಯದಲ್ಲಿ ಸೋಲುವ ಮೂಲಕ ತನ್ನ ಅಭಿಯಾನ ಕೊನೆಗೊಳಿಸಿತು.

World Cup 2023 Qualifier Super 6

ಮೊದಲು ಬ್ಯಾಟಿಂಗ್ ಮಾಡಿದ ಸ್ಕಾಟ್ಲೆಂಡ್ ತಂಡ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 234 ರನ್ ಗಳಿಸಿತು. ಪ್ರತ್ಯುತ್ತರವಾಗಿ ಜಿಂಬಾಬ್ವೆ ತಂಡ 41.1 ಓವರ್‌ಗಳಲ್ಲಿ 203 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ 31 ರನ್‌ಗಳಿಂದ ಸ್ಕಾಟ್ಲೆಂಡ್ ಎದುರು ಜಿಂಬಾಬ್ವೆ ಶರಣಾಯಿತು.

ಸ್ಕಾಟ್ಲೆಂಡ್ ತಂಡದ ಪರ ಕ್ರಿಸ್ಟೋಫರ್ ಮೆಕ್‌ಬ್ರೈಡ್ 28 ರನ್, ಮ್ಯಾಥ್ಯೂ ಕ್ರಾಸ್ 38 ರನ್, ಬ್ರಾಂಡನ್ ಮ್ಯಾಕ್‌ಮುಲ್ಲನ್ 34 ರನ್, ಜಾರ್ಜ್ ಮುನ್ಸಿ 31 ರನ್, ಮೈಕೆಲ್ ಲಿಸ್ಕ್ 48 ರನ್, ಮಾರ್ಕ್ ವ್ಯಾಟ್ 21 ರನ್ ಗಳಿಸಿ ತಂಡದ ಮೊತ್ತ 200ರ ಗಡಿ ದಾಟಲು ನೆರವಾದರು.

ಇನ್ನು ಬೌಲಿಂಗ್‌ನಲ್ಲಿ ಜಿಂಬಾಬ್ವೆ ತಂಡದ ಪರ ಸೀನ್ ವಿಲಿಯಮ್ಸ್ 10 ಓವರ್‌ಗಳಲ್ಲಿ 41 ರನ್ ನೀಡಿ 3 ವಿಕೆಟ್ ಪಡೆದರೆ, ಟೆಂಡೈ ಚಟಾರಾ 7 ಓವರ್‌ಗಳಲ್ಲಿ 46 ರನ್ ನೀಡಿ 2 ವಿಕೆಟ್ ಪಡೆದರು. ಇನ್ನು ರಿಚರ್ಡ್ ನಗರವ 9 ಓವರ್‌ಗಳಲ್ಲಿ 42 ರನ್ ನೀಡಿ 1 ವಿಕೆಟ್ ಪಡೆದರು.

World Cup 2023 Qualifier Super 6

ನಂತರ ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ತಂಡದ ಪರ ಇನ್ನೋಸೆಂಟ್ ಕೈಯಾ 12 ರನ್, ಸಿಕಂದರ್ ರಝಾ 34 ರನ್, ಸೀನ್ ವಿಲಿಯಮ್ಸ್ 12 ರನ್, ರಿಯಾನ್ ಬರ್ಲ್ 84 ಎಸೆತಗಳಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್ ಸಮೇತ 83 ರನ್ ಗಳಿಸಿದರು. ವೆಸ್ಲಿ ಮಧೆವರೆ 40 ರನ್ ಗಳಿಸಿದರು. ಉಳಿದ ಯಾರೂ ಎರಡಂಕಿ ಮೊತ್ತ ದಾಟಲಾಗಲಿಲ್ಲ.

ಸ್ಕಾಟ್ಲೆಂಡ್ ತಂಡದ ಪರ ಕ್ರಿಸ್ ಸೋಲ್ 7 ಓವರ್‌ಗಳಲ್ಲಿ 33 ರನ್ ನೀಡಿ 3 ವಿಕೆಟ್ ಪಡೆದರೆ, ಬ್ರಾಂಡನ್ ಮೆಕ್‌ಮುಲ್ಲೆನ್ 8 ಓವರ್‌ಗಳಲ್ಲಿ 31 ರನ್ ನೀಡಿ 2 ವಿಕೆಟ್ ಪಡೆದರು ಮತ್ತು ಮೈಕಲ್ ಲೀಸ್ಕ್ 6 ಓವರ್‌ಗಳಲ್ಲಿ 33 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಸಫ್ಯಾನ್ ಷರಿಪ್, ಮಾರ್ಕ್ ವ್ಯಾಟ್, ಕ್ರಿಸ್ ಗ್ರೀವ್ಸ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.

ಜಿಂಬಾಬ್ವೆ ತಂಡದ ಬ್ಯಾಟಿಂಗ್ ಶಕ್ತಿ ಮುರಿದ ಸ್ಕಾಟ್ಲೆಂಡ್ ತಂಡದ ಕ್ರಿಸ್ ಸೋಲ್ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಸ್ಕಾಟ್ಲೆಂಡ್ ತಂಡ ತನ್ನ ಮುಂದಿನ ಪಂದ್ಯವನ್ನು ನೆದರ್ಲ್ಯಾಂಡ್ಸ್ ವಿರುದ್ಧ ಗುರುವಾರ, ಜುಲೈ 6ರಂದು ಆಡಲಿದೆ.

Story first published: Tuesday, July 4, 2023, 22:11 [IST]
Other articles published on Jul 4, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+