For Quick Alerts
ALLOW NOTIFICATIONS  
For Daily Alerts
 

World Cup 2023 Qualifiers: ಶ್ರೀಲಂಕಾ ತಂಡಕ್ಕೆ ಗಾಯದ ಸಮಸ್ಯೆ; ಬದಲಿಯಾಗಿ 3 ಬ್ಯಾಕಪ್ ಆಟಗಾರರು ಆಯ್ಕೆ

ಜಿಂಬಾಬ್ವೆಯಲ್ಲಿ ನಡೆಯುತ್ತಿರುವ 2023ರ ಐಸಿಸಿ ವಿಶ್ವಕಪ್ ಅರ್ಹತಾ ಪಂದ್ಯಗಳಿಗೆ ಗಾಯದ ಸಮಸ್ಯೆ ಎದುರಿಸುತ್ತಿರುವ ಶ್ರೀಲಂಕಾ ತಂಡ ಬದಲಿಯಾಗಿ ಮೂವರು ಯುವ ಆಟಗಾರರನ್ನು ಆಯ್ಕೆ ಮಾಡಿದೆ.

ಶ್ರೀಲಂಕಾ ಸ್ಪಿನ್ ಬೌಲಿಂಗ್ ಆಲ್‌ರೌಂಡರ್ ದುನಿತ್ ವೆಲ್ಲಲಾಗೆ, ವೇಗದ ಬೌಲರ್ ದಿಲ್ಶನ್ ಮಧುಶಂಕ ಮತ್ತು ಅನ್‌ಕ್ಯಾಪ್ಡ್ ಬ್ಯಾಟ್ಸ್‌ಮನ್ ಸಹನ್ ಅರಾಚ್ಚಿಗೆ ಅವರನ್ನು ಶ್ರೀಲಂಕಾ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಜೂನ್ 23ರ ಶುಕ್ರವಾರದಂದು ಆಟಗಾರರು ತಮ್ಮ ತಂಡವನ್ನು ಕೂಡಿಕೊಳ್ಳಲಿದ್ದಾರೆ.

ದಿಲ್ಶನ್ ಮಧುಶಂಕ ಮತ್ತು ದುನಿತ್ ವೆಲ್ಲಲಾಗೆ ಅವರು ಈಗಾಗಲೇ ಶ್ರೀಲಂಕಾ ತಂಡದ ಪರ ಒಟ್ಟು 23 ಪಂದ್ಯಗಳನ್ನು ಆಡಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ವಲ್ಪಮಟ್ಟಿಗೆ ಅನುಭವ ಹೊಂದಿದ್ದಾರೆ. ವೆಸ್ಟ್ ಇಂಡೀಸ್‌ನಲ್ಲಿ 2022ರ ಅಂಡರ್-19 ವಿಶ್ವಕಪ್‌ನಲ್ಲಿ 20 ವರ್ಷದ ವೆಲ್ಲಲಾಗೆ ಶ್ರೀಲಂಕಾ ತಂಡದ ನಾಯಕರಾಗಿದ್ದರು.

World Cup 2023 Qualifiers: Sri Lanka Team Faces Injury Problem; Select 3 Backup Players

ದುನಿತ್ ವೆಲ್ಲಲಾಗೆ ಶ್ರೀಲಂಕಾ ಪರ 1 ಟೆಸ್ಟ್ ಮತ್ತು 9 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 138 ರನ್ ಗಳಿಸಿ ಒಂಬತ್ತು ವಿಕೆಟ್ ಪಡೆದಿದ್ದಾರೆ. ಇನ್ನು ದಿಲ್ಶನ್ ಮಧುಶಂಕ ಅವರು ತಮ್ಮ ಅಲ್ಪಾವಧಿಯಲ್ಲಿ 2 ಏಕದಿನ ಮತ್ತು 11 ಟಿ20 ಪಂದ್ಯಗಳಿಂದ 14 ವಿಕೆಟ್‌ಗಳನ್ನು ಪಡೆದಿದ್ದಾರೆ.

ಸಹನ್ ಅರಾಚ್ಚಿಗೆ ಇನ್ನೂ ರಾಷ್ಟ್ರೀಯ ತಂಡದ ಜೆರ್ಸಿ ಧರಿಸಿಲ್ಲ. ಆದರೆ ಶ್ರೀಲಂಕಾದ ದೇಶೀಯ ಕ್ರಿಕೆಟ್‌ನಲ್ಲಿ ಅಧಿಕ ರನ್ ಗಳಿಸಿದ ಬ್ಯಾಟರ್ ಆಗಿದ್ದಾರೆ. 27 ವರ್ಷದ ಅರಾಚ್ಚಿಗೆ 66 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 29.67ರ ಸರಾಸರಿಯಲ್ಲಿ 12 ಅರ್ಧ ಶತಕಗಳೊಂದಿಗೆ 1454 ರನ್ ಗಳಿಸಿದ್ದಾರೆ. ಅವರ ವೈಯಕ್ತಿಕ ಗರಿಷ್ಠ ಸ್ಕೋರ್ 86 ರನ್ ಆಗಿದೆ.

ಇನ್ನು 50 ಓವರ್‌ಗಳ ಸ್ವರೂಪದಲ್ಲಿ 38 ವಿಕೆಟ್‌ಗಳನ್ನು ಪಡೆದಿರುವ ಸಹನ್ ಅರಾಚ್ಚಿಗೆ, ಬಲಗೈ ಆಫ್-ಬ್ರೇಕ್ ಬೌಲರ್ ಕೂಡ ಆಗಿದ್ದಾರೆ.

ಯುಎಇ ವಿರುದ್ಧ ಸುಲಭವಾಗಿ ಗೆದ್ದ ಶ್ರೀಲಂಕಾ

2023ರ ಐಸಿಸಿ ವಿಶ್ವಕಪ್ ಅರ್ಹತಾ ಪಂದ್ಯಕ್ಕೆ ಸಂಬಂಧಿಸಿದಂತೆ, ಶ್ರೀಲಂಕಾ ತಂಡದ ಮಟ್ಟಿಗೆ ಹೇಳುವುದಾದರೆ, ತಮ್ಮ ಮೊದಲ ಪಂದ್ಯದಲ್ಲಿ ಶುಭಾರಂಭವನ್ನು ಮಾಡಿದರು. ಸೋಮವಾರ, ಜೂನ್ 19ರಂದು ಬುಲವಾಯೊದಲ್ಲಿನ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ತಂಡವು ಮುಹಮ್ಮದ್ ವಸೀಮ್ ನಾಯಕತ್ವದ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ತಂಡವನ್ನು 175 ರನ್‌ಗಳಿಂದ ಮಣಿಸಿದರು.

ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಸ್ಕೋರ್ ಬೋರ್ಡ್‌ನಲ್ಲಿ 6 ವಿಕೆಟ್‌ಗೆ 355 ರನ್‌ಗಳನ್ನು ಕಲೆ ಹಾಕಿದರು. ನಂತರ ಶ್ರೀಲಂಕಾ ತಂಡದ ಬೌಲರ್‌ಗಳು ಯುಎಇ ತಂಡವನ್ನು 39 ಓವರ್‌ಗಳಲ್ಲಿ 180 ರನ್‌ಗಳಿಗೆ ಕಟ್ಟಿಹಾಕಿದರು.

ಈ ಪಂದ್ಯದಲ್ಲಿ 8 ಓವರ್‌ಗಳಲ್ಲಿ 24 ರನ್ ನೀಡಿ 6 ವಿಕೆಟ್‌ಗಳೊಂದಿಗೆ ಮತ್ತು 12 ಎಸೆತಗಳಲ್ಲಿ 3 ಬೌಂಡರಿಗಳೊಂದಿಗೆ 23 ರನ್ ಗಳಿಸಿ ಮಿಂಚಿದ ವನಿಂದು ಹಸರಂಗ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಬಿ ಗುಂಪಿನಲ್ಲಿರುವ ಶ್ರೀಲಂಕಾ ತಂಡ ಜೂನ್ 23ರಂದು ನಡೆಯಲಿರುವ ತನ್ನ ಎರಡನೇ ಪಂದ್ಯದಲ್ಲಿ ಜೀಶನ್ ಮಕ್ಸೂದ್ ನಾಯಕತ್ವದ ಒಮಾನ್ ವಿರುದ್ಧ ಮುಖಾಮುಖಿಯಾಗಲಿದೆ.

Story first published: Tuesday, June 20, 2023, 15:54 [IST]
Other articles published on Jun 20, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+