Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

World Cup 2023: ಕ್ವಿಂಟನ್ ಡಿ ಕಾಕ್, ಹೆನ್ರಿಚ್ ಕ್ಲಾಸೆನ್ ಸ್ಫೋಟಕ ಬ್ಯಾಟಿಂಗ್; ಬಾಂಗ್ಲಾಗೆ ಬೃಹತ್ ಗುರಿ ನೀಡಿದ ಹರಿಣ ಪಡೆ

ಸೋಮವಾರ, ಅಕ್ಟೋಬರ್ 24ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯತ್ತಿರುವ 2023ರ ಐಸಿಸಿ ಏಕದಿನ ವಿಶ್ವಕಪ್‌ನ 23ನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ದಕ್ಷಿಣ ಆಫ್ರಿಕಾ ತಂಡವು ಬೃಹತ್ ರನ್‌ಗಳ ಮೊತ್ತ ಕಲೆಹಾಕಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ಕ್ವಿಂಟನ್ ಡಿ ಕಾಕ್ ದಾಖಲೆಯ ಶತಕದ ನೆರವಿನೊಂದಿಗೆ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 382 ರನ್‌ಗಳ ಬೃಹತ್ ಮೊತ್ತ ದಾಖಲಿಸಿದ್ದು, ಬಾಂಗ್ಲಾದೇಶ ತಂಡಕ್ಕೆ 383 ರನ್‌ಗಳ ಗುರಿ ನೀಡಿದೆ.

World Cup 2023: de Kock Hits Century; Bangladesh Needs 383 Runs To Win Against South Africa

ದಕ್ಷಿಣ ಆಫ್ರಿಕಾ ತಂಡದ ಇನ್ನಿಂಗ್ಸ್ ಆರಂಭಿಸಿದ ಕ್ವಿಂಟನ್ ಡಿ ಕಾಕ್ ಮತ್ತು ರೀಜಾ ಹೆಂಡ್ರಿಕ್ಸ್ ದೊಡ್ಡ ಆರಂಭ ಒದಗಿಸಲು ವಿಫಲರಾದರು. ಏಕೆಂದರೆ, ರೀಜಾ ಹೆಂಡ್ರಿಕ್ಸ್ 12 ರನ್ ಗಳಿಸಿ ಶೋರಿಫುಲ್ ಇಸ್ಲಾಂ ಅವರಿಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಕೇವಲ 1 ರನ್‌ಗೆ ಔಟಾದರು.

ಈ ವೇಳೆ ಜೊತೆಯಾದ ನಾಯಕ ಏಡೆನ್ ಮಾರ್ಕ್ರಾಮ್ ಬಾಂಗ್ಲಾದೇಶ ವಿರುದ್ಧ ನಿಧಾನಗತಿಯ ಅರ್ಧಶತಕ ಬಾರಿಸಿದರು. ಆರಂಭಿಕ ಕ್ವಿಂಟನ್ ಡಿ ಕಾಕ್ ಜೊತೆಗೂಡಿ 3ನೇ ವಿಕೆಟ್‌ಗೆ 131 ರನ್‌ಗಳ ಜೊತೆಯಾಟ ನೀಡಿದರು.

ಇನ್ನು ಕ್ವಿಂಟನ್ ಡಿ ಕಾಕ್ ದಾಖಲೆಯ ಶತಕ ಸಿಡಿಸಿದರು. ಪ್ರಸಕ್ತ ವಿಶ್ವಕಪ್‌ನಲ್ಲಿ ತಮ್ಮ ಮೂರನೇ ಶತಕ ಬಾರಿಸಿದರು. ಇದು ಒಂದೇ ವಿಶ್ವಕಪ್‌ನಲ್ಲಿ ಮೂರು ಶತಕ ಗಳಿಸಿದ ದಕ್ಷಿಣ ಆಫ್ರಿಕಾ ಏಕೈಕ ಬ್ಯಾಟರ್ ಎನಿಸಿದರು. ಕ್ವಿಂಟನ್ ಡಿ ಕಾಕ್ ಔಟಾಗುವ ಮುನ್ನ 140 ಎಸೆತಗಳಲ್ಲಿ 15 ಬೌಂಡರಿ ಹಾಗೂ 7 ಸಿಕ್ಸರ್‌ಗಳ ಮೂಲಕ 174 ರನ್ ಬಾರಿಸಿದರು.

World Cup 2023: Quinton de Kock Hits Century; Bangladesh Needs 383 Runs To Win Against South Africa

ಇದಕ್ಕೂ ಮುನ್ನ ಕ್ವಿಂಟನ್ ಡಿ ಕಾಕ್ ಅವರು ಹೆನ್ರಿಚ್ ಕ್ಲಾಸೆನ್ ಜೊತೆಗೂಡಿ ನಾಲ್ಕನೇ ವಿಕೆಟ್‌ಗೆ 15 ಓವರ್‌ಗಳಲ್ಲಿ 142 ರನ್‌ಗಳ ಜೊತೆಯಾಟ ನಿರ್ಮಿಸಿದರು.

ಕೊನೆಯಲ್ಲಿ ಹೆನ್ರಿಚ್ ಕ್ಲಾಸೆನ್ ಅಬ್ಬರ್ ಬ್ಯಾಟಿಂಗ್ ಪ್ರದರ್ಶಿಸಿ 49 ಎಸೆತಗಳನ್ನು ಎದುರಿಸಿ 2 ಬೌಂಡರಿ ಮತ್ತು 8 ಭರ್ಜರಿ ಸಿಕ್ಸರ್‌ಗಳ ಸಮೇತ 90 ರನ್ ಸಿಡಿಸಿದರು ಮತ್ತು ಡೇವಿಡ್ ಮಿಲ್ಲರ್ ಜೊತೆಗೂಡಿ 5ನೇ ವಿಕೆಟ್‌ಗೆ 65 ರನ್‌ಗಳ ಜೊತೆಯಾಟ ನೀಡಿದರು.

ಇನ್ನು ಡೇವಿಡ್ ಮಿಲ್ಲರ್ ಕೂಡ ಸ್ಫೋಟಕ ಬ್ಯಾಟಿಂಗ್ ಮಾಡಿ 15 ಎಸೆತಗಳಲ್ಲಿ 1 ಬೌಂಡರಿ ಹಾಗೂ 4 ಸಿಕ್ಸರ್ ಮೂಲಕ 34 ರನ್ ಬಾರಿಸಿದರು. ಮಾರ್ಕೊ ಜಾನ್ಸೆನ್ 1 ರನ್ ಗಳಿಸಿದರು.

World Cup 2023: Quinton de Kock Hits Century; Bangladesh Needs 383 Runs To Win Against South Africa

ಇನ್ನು ಬೌಲಿಂಗ್‌ನಲ್ಲಿ ಬಾಂಗ್ಲಾದೇಶ ತಂಡದ ಪರ ಹಸನ್ ಮಹಮ್ಮುದ್ 6 ಓವರ್‌ಗಳಲ್ಲಿ 67 ರನ್ ನೀಡಿ 2 ವಿಕೆಟ್ ಪಡೆದರೆ, ಮೆಹಿದಿ ಹಸನ್ ಮಿರಾಜ್, ಶೋರಿಫುಲ್ ಇಸ್ಲಾಂ ಮತ್ತು ಶಕೀನ್ ಅಲ್ ಹಸನ್ ತಲಾ ಒಂದೊಂದು ವಿಕೆಟ್ ಪಡೆದರು. ಬಾಂಗ್ಲಾದೇಶ ಎಲ್ಲಾ ಬೌಲರ್‌ಗಳು ದುಬಾರಿಯಾದರು.

Story first published: Tuesday, October 24, 2023, 18:07 [IST]
Other articles published on Oct 24, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+